ಪತಿ ರಾಜ್​ ಕುಂದ್ರಾ ಆರೆಸ್ಟ್​ ಬಳಿಕ ಮೊದಲ ಬಾರಿಗೆ ಶಿಲ್ಪಾ ಶೆಟ್ಟಿ ಏನ್ಮಾಡಿದ್ದಾರೆ ಗೊತ್ತಾ?

ಪತಿ ರಾಜ್​ ಕುಂದ್ರಾ ಆರೆಸ್ಟ್​ ಬಳಿಕ ಮೊದಲ ಬಾರಿಗೆ ಶಿಲ್ಪಾ ಶೆಟ್ಟಿ ಏನ್ಮಾಡಿದ್ದಾರೆ ಗೊತ್ತಾ?

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅಶ್ಲೀಲ ಸಿನಿಮಾಗಳ ನಿರ್ಮಾಣ ಮಾಡುವ ಆರೋಪದಡಿ ಆರೆಸ್ಟಾಗಿ ಸದ್ಯ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಸಂಬಂಧ ಇನ್ನೂ ವಿಚಾರಣೆ ನಡೆಯುತ್ತಿದ್ದು ರಾಜ್​ ಕುಂದ್ರಾಗೆ ಜಾಮೀನು ಸಿಗುವಂತೆ ಕಾಣುತ್ತಿಲ್ಲ. ಹೀಗಿರುವಾಗಲೇ ಶಿಲ್ಪಾ ಶೆಟ್ಟಿ ಮತ್ತೆ ತನ್ನ ಕೆಲಸದತ್ತ ಮರಳಿದ್ದಾರೆ.

blank

ಹೌದು ಪತಿ ಬಂಧನದ ಬಳಿಕ ಶಿಲ್ಪಾ ತನ್ನ ಚಿತ್ರರಂಗದ ಕೆಲಸದಲ್ಲಿ ಕಾಣಿಸಿಕೊಂಡಿರಲಿಲ್ಲ. ಅದ್ರೆ ಇದೀಗ ಶಿಲ್ಪಾ ಮತ್ತೆ ತಮ್ಮ ಕೆಲಸಗಳತ್ತ ಮುಖ ಮಾಡಿದ್ದಾರೆ. ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋ ‘ಸೂಪರ್ ಡ್ಯಾನ್ಸರ್ 4’ರಲ್ಲಿ ಶಿಲ್ಪಾ ಶೆಟ್ಟಿ ಜಡ್ಜ್​ ಆಗಿ ಕೆಲಸ ಮಾಡುತ್ತಿದ್ರು. ಪತಿ ರಾಜ್​ ಕುಂದ್ರಾ ಆರೆಸ್ಟ್​ ಬಳಿಕ ಕಳೆದ 4 ವಾರಗಳ ಕಾಲ ಶಿಲ್ಪಾ ಶೋನಲ್ಲಿ ಭಾಗವಹಿಸಿರಲಿಲ್ಲ. ಅದ್ರೆ ಇದೀಗ ಶಿಲ್ಪಾ ಶೆಟ್ಟಿ ಮತ್ತೆ ರಿಯಾಲಿಟಿ ಶೋ ತಂಡ ಸೇರಿಕೊಂಡಿದ್ದಾರೆ .

ಇನ್ನು ಶಿಲ್ಪಾ ಶೆಟ್ಟಿ ಕ್ಯಾರವಾನ್​ನಿಂದ ಇಳಿದು  ರಿಯಾಲಿಟಿ ಶೋ ಸೆಟ್​ ಕಡೆಗೆ ಹೋಗುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಅಗಿದೆ.

Source: newsfirstlive.com Source link