ಹಾಡಹಗಲೇ ಅಫ್ಘಾನ್​​​​ ಸೇನೆಯ ನಾಲ್ವರು ಕಮಾಂಡರ್​​ಗಳನ್ನು ನೇಣಿಗೇರಿಸಿದ ತಾಲಿಬಾನ್

ಹಾಡಹಗಲೇ ಅಫ್ಘಾನ್​​​​ ಸೇನೆಯ ನಾಲ್ವರು ಕಮಾಂಡರ್​​ಗಳನ್ನು ನೇಣಿಗೇರಿಸಿದ ತಾಲಿಬಾನ್

ತಾಲಿಬಾನ್​​​​ನಿಂದ ಅಫ್ಘಾನಿಸ್ತಾನದಲ್ಲಿ ಶೋಚನಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಧ್ಯಕ್ಷ ಅಶ್ರಫ್​​​ ಘನಿ ದೇಶದಿಂದ ಪರಾರಿಯಾದ ಮೇಲೆ ಇಡೀ ಅಫ್ಘಾನ್​​ ಸೇನೆ ತಾಲಿಬಾನ್​​​ಗೆ ಅಧಿಕೃತವಾಗಿ ಶರಣಾಗಿದೆ. ಅಶ್ರಫ್​​​ ಘನಿಅಧಿಕೃತವಾಗಿ ತನ್ನ ಅಧಿಕಾರ ಹಸ್ತಾಂತರ ಮಾಡಿದ್ದು, ಸದ್ಯದಲ್ಲೇ ತಾಲಿಬಾನ್​​​​ ಮುಖ್ಯಸ್ಥ ಮುಲ್ಲಾ ಅಬ್ದುಲ್ ಘನಿ ಬರಾದರ್ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ. ಹೀಗಿರುವಾಗಲೇ ಅಮೃಲ್ಲಾ ಸಲೇಹ್​​ ನಾನು ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ.

ನಾನು ಯಾವುದೇ ಕಾರಣಕ್ಕೂ ತಾಲಿಬಾನ್​​ ಉಗ್ರರಿಗೆ ಶರಣಾಗೋದಿಲ್ಲ. ನಾನು ಎಂದಿಗೂ, ಯಾವ ಸಂದರ್ಭದಲ್ಲಾದರೂ ನನ್ನ ದೇಶಕ್ಕಾಗಿ ಹೋರಾಡುತ್ತೇನೆ. ತಾಲಿಬಾನ್​​ ವಿರುದ್ಧದ ಹೋರಾಟದಲ್ಲಿ ಎಲ್ಲಾ ಪಕ್ಷಗಳು ಕೈಜೋಡಿಸಬೇಕು ಎಂದು ಮನವಿ ಅಮೃಲ್ಲಾ ಸಲೇಹ್ ಮಾಡಿಕೊಂಡಿದ್ದಾರೆ. ಅಲ್ಲದೇ ಅಫ್ಘಾನ್​​ ಸೇನೆಯವರು ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕು ಎಂದು ಟ್ವೀಟ್​​ ಮಾಡಿದ್ದಾರೆ. ಈ ಬೆನ್ನಲ್ಲೇ ತಾಲಿಬಾನ್​​ಗೆ ಶರಣಾಗಿದ್ದ ಅಫ್ಘಾನ್​​​ ಸೇನೆ​​​​ ಕಮಾಂಡರ್ಸ್​ ಅಮೃಲ್ಲಾ ಸಲೇಹ್​​ಗೆ ಬೆಂಬಲಿಸಿದ್ದಾರೆ.

ಇದನ್ನೂ ಓದಿ: ತಾಲಿಬಾನಿಗಳ ಕೈಗೆ ಸಿಕ್ಕಿಲ್ಲ ಒಂದೇ ಒಂದು ಪ್ರದೇಶ.. ಅಲ್ಲಿಂದಲೇ ಸಮರ ಸಾರಿದ ಆಫ್ಘನ್ ಉಪಾಧ್ಯಕ್ಷ

ಈ ವಿಚಾರ ತಿಳಿಯುತ್ತಿದ್ದಂತೆಯೇ ತಾಲಿಬಾನ್​ ಉಗ್ರರು​ ಅಫ್ಘಾನ್​ ಸೇನೆಯ ನಾಲ್ವರು ಪ್ರಮುಖ ಕಮಾಂಡರ್​​ಗಳನ್ನು ನೇಣಿಗೇರಿಸಿದ್ದಾರೆ. ಬುಧವಾರ ಹಾಡುಹಾಗಲೇ ನಾಲ್ಕು ಕಮಾಂಡರ್​​​ಗಳನ್ನು ನೇಣಿಗೇರಿಸಿ ಮತ್ತಷ್ಟು ರಕ್ತ ಹರಿಸಿದೆ. ಶಾಂತಿಯನ್ನು ಕಾಪಾಡಲಿದ್ದೇವೆ ಎಂದು ಹೇಳಿದ್ದ ಮರುದಿನವೇ ತಾಲಿಬಾನ್ ರಕ್ತಪಾತ ಮಾಡಿದೆ.

ಇದನ್ನೂ ಓದಿ: ಅಫ್ಘಾನ್​​​ ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆಗೆ 21 ದೇಶಗಳಿಂದ ಶಪಥ

Source: newsfirstlive.com Source link