ಸಿದ್ದರಾಮಯ್ಯಗೆ ಹೆಚ್ಚಾಯ್ತು ಶುಗರ್ ಲೆವೆಲ್: ಜಿಂದಾಲ್​ನಲ್ಲಿ 10 ದಿನ ಪ್ರಕೃತಿ ಚಿಕಿತ್ಸೆಗೆ ಮುಂದಾದ ಮಾಜಿ ಸಿಎಂ

ಸಿದ್ದರಾಮಯ್ಯಗೆ ಹೆಚ್ಚಾಯ್ತು ಶುಗರ್ ಲೆವೆಲ್: ಜಿಂದಾಲ್​ನಲ್ಲಿ 10 ದಿನ ಪ್ರಕೃತಿ ಚಿಕಿತ್ಸೆಗೆ ಮುಂದಾದ ಮಾಜಿ ಸಿಎಂ

ಇದೇ ಆಗಸ್ಟ್ 21 ರಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಲಿದ್ದಾರಂತೆ. ಸತತ ಹತ್ತು ದಿನಗಳ ಕಾಲ ಜಿಂದಾಲ್​ನಲ್ಲಿ ಸಿದ್ದರಾಮಯ್ಯ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ.

ಕಳೆದೊಂದು ವರ್ಷದಿಂದ ಹಲವು ಬಾರಿ ಪ್ರಯತ್ನಿಸಿದರೂ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಸಿದ್ದರಾಮಯ್ಯಗೆ ತೆರಳಲಾಗಿರಲಿಲ್ಲ. ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಲು ಮೂರು ಬುಕ್ ಮಾಡಿದರೂ ನಾನಾ ಕಾರಣಗಳಿಂದ ಕ್ಯಾನ್ಸಲ್ ಆಗಿತ್ತಂತೆ.

blank

ಕೋವಿಡ್ ಪ್ಯಾನ್ಡಮಿಕ್, ಎಲೆಕ್ಷನ್ ಹಾಗೂ ಪಕ್ಷದ ನಾನಾ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಈ ಹಿಂದೆ ಮೂರು ಬಾರಿ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಲು ಸಿದ್ಧವಾಗಿದ್ದರೂ ಅನಿವಾರ್ಯವಾಗಿ ಕಾರ್ಯಕ್ರಮ ರದ್ದಾಗಿತ್ತಂತೆ. ಈ ಬಾರಿ ಧರ್ಮಸ್ಥಳದ  ಶಾಂತಿವನದ ಬದಲು ಇಲ್ಲೇ ಬೆಂಗಳೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನ ಸಿದ್ದರಾಮಯ್ಯ ಆಯ್ದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ತಡ ಮಾಡಿದರೆ ಆಗದೆಂದು ಪಟ್ಟು ಹಿಡಿದು ಕೂಡಲೇ ಪ್ರಕೃತಿ ಚಿಕಿತ್ಸೆ ಪಡೆಯಲು ಸನ್ನದ್ಧರಾಗಿದ್ದಾರಂತೆ.

ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಹೋಗಲು ಪಟ್ಟು ಹಿಡಿದಿದ್ದೇಕೆ ಸಿದ್ಧರಾಮಯ್ಯ..?

ಪೋಸ್ಟ್ ಕೋವಿಡ್​ನ ಕೆಲವು ಸಮಸ್ಯೆಗಳಿಂದ ಸಿದ್ದರಾಮಯ್ಯ ಬಳಲುತ್ತಿದ್ದಾರಂತೆ. ಈ ಹಿಂದೆಲ್ಲ ಸಿದ್ದರಾಮಯ್ಯನವರ ದೇಹದ ಶುಗರ್ ಲೆವೆಲ್ ಕಂಟ್ರೋಲ್​ನಲ್ಲಿತ್ತು. ಆದರೆ ಕೋವಿಡ್​ಗೆ ತುತ್ತಾಗಿ ಚಿಕಿತ್ಸೆ ಪಡೆದು ಬಂದ ನಂತರ ಕಂಟ್ರೋಲ್​ಗೆ ಸಿಗುತ್ತಿಲ್ಲವಂತೆ. ಜೊತೆಗೆ ದೇಹದ ತೂಕದ ಹೆಚ್ಚಳದಿಂದಲೂ ಸಿದ್ದರಾಮಯ್ಯ ಚಿಂತಿತರಾಗಿದ್ದಾರೆ ಎನ್ನಲಾಗಿದೆ.

ಮುಂದಿನ ತಿಂಗಳು ಮತ್ತೆ ಅಧಿವೇಶನ, ಅದರ ಬೆನ್ನಲ್ಲೇ ಉಪಚುನಾವಣೆಗಳು, ಅದರ ಬೆನ್ನಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳುಹೀಗೆ ಸತತ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಸಜ್ಹಾಗಲೇಬೇಕಿದೆ. ಇವತ್ತಿನವರೆಗೂ ವಿಪರೀತ ಪ್ರವಾಸ, ಪಕ್ಷದ ನಿರಂತರ ಕಾರ್ಯಕ್ರಮಗಳು, ಸರಣಿ ಸಭೆಗಳಿಂದಲೂ ಬಳಲಿದ್ದಾರಂತೆ. ಇವೆಲ್ಲದರಿಂದ ಹೊರಬಂದು ಹತ್ತು ದಿನಗಳ ಕಾಲ ನೆಮ್ಮದಿಯಿಂದ ರಿಲ್ಯಾಕ್ಸ್ ಆಗಲು ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸಾ ಕೇಂದ್ರ ಆಯ್ದುಕೊಂಡಿದ್ದಾರೆ ಎನ್ನಲಾಗಿದೆ.  ವಿಶೇಷ

ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ.

Source: newsfirstlive.com Source link