ಸೂಪರ್​ ಮಾರ್ಕೆಟ್​ನಲ್ಲಿ ಖರೀದಿಗೆ ಬಂದಿದ್ದ ಮಹಿಳೆಗೆ ಕೈಗೆ ಸಿಕ್ಕಿದ್ದು ಭಯಂಕರ ಹಾವು

ಸೂಪರ್​ ಮಾರ್ಕೆಟ್​ನಲ್ಲಿ ಖರೀದಿಗೆ ಬಂದಿದ್ದ ಮಹಿಳೆಗೆ ಕೈಗೆ ಸಿಕ್ಕಿದ್ದು ಭಯಂಕರ ಹಾವು

ಸಿಡ್ನಿ: ಸಾಮಾನ್ಯವಾಗಿ ನಾವು​ ಸೂಪರ್​ ಮಾರ್ಕೆಟ್​ಗೆ ಹೋದಾಗ ನಮಗೆ ಬೇಕಾಗಿರೋದನ್ನ ಹುಡುಕಿ ಹುಡುಕಿ ತಗೋತಿವಿ. ಹೀಗೆ, ಸಿಡ್ನಿಯಲ್ಲಿ ಹುಡುಕಿ ಹುಡುಕಿ ತಗೋಬೇಕಾದ್ರೆ, ಅವ್ರಿಗೆ ಹಾವು ಸಿಕ್ಕಿಬಿಡೋದಾ..? ಏನೂ ಹಾವು? ಅಂತೆಲ್ಲಾ ಗಾಬ್ರಿಯಾಗಿದ್ರೆ ಹೌದೂ, ಹಾವೇ ಸಿಕ್ಕಿದೆ.

ಸಿಡ್ನಿಯಲ್ಲಿ ಒಬ್ಬ ಮಹಿಳೆ, ತನ್ನ ಮನೆಗೆ ಬೇಕಿರೋದನ್ನ ಖರೀದಿ ಮಾಡಲು ಸೂಪರ್​ ಮಾರ್ಕೆಟ್​ಗೆ ಹೋಗಿರ್ತಾರೆ. ಈ ವೇಳೆ ತನ್ನ ಮನೆಗೆ ಬೇಕಿರೋದನ್ನ ತಗೋಬೇಕಾದ್ರೆ, ಹಿಂದೆಯಿದ್ದ ಪ್ಯಾಕೆಟ್​ನ್ನ ತೆಗೆಯಲು ಹೋದಾಗ ಮೂರು ಅಡಿ ಉದ್ದದ ಹಾವು ಶೆಲ್ಫ್​ನಿಂದ ಹೊರ್ಗಡೆ ಬಂದಿದೆ. ಆ ಮಹಿಳೆಯ ಪ್ರಕಾರ, ಆ ಹಾವು ಸುಮಾರರು ದಿನಗಳಿಂದ ಅದೇ ಶೆಲ್ಫ್​ನಲ್ಲೇ ವಾಸ ಮಾಡ್ತಾಯಿತ್ತು. ಆದ್ರೆ, ಅದೆಷ್ಟೋ ಜನ ಬಂದು ಅಲ್ಲಿ ಬೇಕಾಗಿರೋದನ್ನ ಖರೀದಿಯೂ ಮಾಡಿದ್ರು, ಯಾರಿಗೂ ಈ ಹಾವು ಕಚ್ಚಿಲ್ಲ. ಇವತ್ತು ಸಡನ್ನಾಗಿ ಹೊರಗೆ ಬಂದಿದ್ರಿಂದ ಸ್ವಲ್ಪ ಗಾಬರಿಯಾಯ್ತು ಅಷ್ಟೇ. ಅಲ್ಲದೇ ಈ ಹಾವು 20 ಸೆ.ಮೀ. ಅಷ್ಟು ನನ್ನ ಮುಖದಿಂದ ದೂರವಿತ್ತು ಅಂತ ಹೇಳಿದ್ದಾರೆ.

Source: newsfirstlive.com Source link