ಸಂಸತ್​​ ಭವನದಿಂದ ಸಲ್ಮಾ ಅಣೆಕಟ್ಟುವರೆಗೆ; ಅಫ್ಘಾನಿಸ್ತಾನಕ್ಕೆ ಭಾರತ ನೀಡಿದ ಕೊಡುಗೆ!

ಸಂಸತ್​​ ಭವನದಿಂದ ಸಲ್ಮಾ ಅಣೆಕಟ್ಟುವರೆಗೆ; ಅಫ್ಘಾನಿಸ್ತಾನಕ್ಕೆ ಭಾರತ ನೀಡಿದ ಕೊಡುಗೆ!

ಅಪ್ಘಾನಿಸ್ತಾನ ನೆಲವನ್ನು ಯಾವ ರಾಷ್ಟ್ರಕ್ಕೂ ಬಿಟ್ಟುಕೊಡುವ ಮಾತೇ ಇಲ್ಲ. ಭಾರತ ಬಯಸಿದಲ್ಲಿ ತಾನು ಕೈಗೊಂಡ ಎಲ್ಲಾ ಮೂಲಭೂತ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಿ ಎಂದು ತಾಲಿಬಾನ್​​ ಖಡಕ್ಕಾಗಿಯೇ ಹೇಳಿದೆ. ಈ ಸಂಬಂಧ ಮಾತಾಡಿರುವ ತಾಲಿಬಾನ್​​​​​ ವಕ್ತಾರ ಶಹೀನ್, ಭಾರತ ಅಫ್ಘಾನ್​​ ನೆಲದಲ್ಲಿ ಕೈಗೊಂಡಿರುವ ತನ್ನ ಯೋಜನೆಗಳನ್ನು ಪೂರ್ಣಗೊಳಿಸಲಿ, ಏಕೆಂದರೆ ಇವು ಜನ ಪರವಾಗಿವೆ ಎಂದು ತಿಳಿಸಿದ್ದಾರೆ.

ಹೌದು, ತಾಲಿಬಾನ್​​ ವಕ್ತಾರ ಶಹೀನ್ ಹೀಗೆ ಹೇಳಲು ಕಾರಣವಿದೆ. ಭಾರತ ಅಫ್ಘಾನಿಸ್ತಾನದಲ್ಲಿ ಹಲವಾರು ಯೋಜನೆಗಳನ್ನು ಕೈಗೊಂಡಿದೆ. ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಮೂಲಭೂತ ಸೌಕರ್ಯ ಯೋಜನೆಗಳನ್ನು ಮಾಡಿದೆ.

blank

ಇನ್ನು, ಭಾರತ ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ಹೂಡಿಕೆ ಮಾಡಿರುವ ಮೊತ್ತ 3 ಬಿಲಿಯನ್ ಡಾಲರ್. ಸಂಸತ್​​ ಭವನ, ಶಟೂಟ್ ಅಣೆಕಟ್ಟು, ಸಲ್ಮಾ ಅಣೆಕಟ್ಟು, ಹಲವು ರಚನಾತ್ಮಕ ರಸ್ತೆಗಳ ನಿರ್ಮಾಣಕ್ಕೆ ಅಫ್ಘಾನಿಸ್ತಾನಕ್ಕೆ ಭಾರತದ ನೆರವು ನೀಡಿದೆ.

ಇದನ್ನೂ ಓದಿ: ಮೋದಿ ಮಹತ್ವದ ಸಭೆ; ಅಫ್ಘಾನ್​ನಿಂದ​ ಹಿಂದೂ, ಸಿಖ್ಖರ ಸುರಕ್ಷಿತ ಸ್ಥಳಾಂತರಕ್ಕೆ ಪ್ರಧಾನಿ ಸೂಚನೆ

ಈ ಹಿಂದೆಯೇ ಭಾರತ ನಾವು ಅಫ್ಘಾನಿಸ್ತಾನದಲ್ಲಿರುವ ಜನರಿಗಾಗಿ ಈ ಯೋಜನೆಗಳನ್ನು ಮಾಡಿದ್ದೇವೆ. ಎಲ್ಲಾ ಯೋಜನೆಗಳು ಮುಗಿದ ಬಳಿಕ ನಾವೇನು ಅಫ್ಘಾನಿಸ್ತಾನದಿಂದ ನಿರೀಕ್ಷೆ ಮಾಡೋದಿಲ್ಲ. ಇದನ್ನು ಕಾಪಾಡಿಕೊಳ್ಳುವುದು ಅಫ್ಘಾನ್​​ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದಿತ್ತು.

ಇದನ್ನೂ ಓದಿ: ಅಫ್ಘಾನಿಸ್ತಾನ್ ಅಯೋಮಯ; ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ತುರ್ತು ಸಭೆ

​​

Source: newsfirstlive.com Source link