ಪಾಕ್ ವಿರೋಧಿ-ಭಾರತದ ಮಿತ್ರ Forever Spy ಅಮ್ರುಲ್ಲಾಹ್ ಸಲೇಹ್​ ಯಾರು ಗೊತ್ತಾ?

ಪಾಕ್ ವಿರೋಧಿ-ಭಾರತದ ಮಿತ್ರ Forever Spy ಅಮ್ರುಲ್ಲಾಹ್ ಸಲೇಹ್​ ಯಾರು ಗೊತ್ತಾ?

ನವದೆಹಲಿ: ತಾಲಿಬಾಲಿಗಳು ರಾಜಧಾನಿ ಕಾಬೂಲ್ ಸೇರಿದಂತೆ ಬಹುತೇಕ ಅಫ್ಘಾನಿಸ್ತಾನವನ್ನೇ ವಶಕ್ಕೆ ಪಡೆದುಕೊಂಡಿದೆ. ಕಾಬೂಲ್​ನಿಂದ ಅಲ್ಲಿನ ಅಧ್ಯಕ್ಷ ಅಶ್ರಫ್ ಗನಿ ಸೇರಿದಂತೆ ಬಹುತೇಕ ನಾಯಕರು ಪಲಾಯನಗೈದಿದ್ದಾರೆ. ಅಶ್ರಫ್ ಗನಿ ದೇಶವನ್ನೇ ತೊರೆದಿದ್ದಾರೆ.

ಹೀಗಿರುವಾಗಲೂ ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾಹ್ ಸಾಲೆಹ್​ ಈಗಲೂ ಸರ್ಕಾರ ನಮ್ಮ ಕೈನಲ್ಲಿದೆ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ನಿನ್ನೆ ಮಾಡಿದ್ದಾರೆ. ಅಫ್ಘಾನಿಸ್ತಾನದ ಸಂವಿಧಾನದ ಪ್ರಕಾರ ಅಧ್ಯಕ್ಷರ ಗೈರು, ಪಲಾಯನ, ರಾಜೀನಾಮೆ ಅಥವಾ ಸಾವಿನ ನಂತರ ಉಪಾಧ್ಯಕ್ಷರು ಅಧ್ಯಕ್ಷರಾಗಿ ಭಡ್ತಿ ಹೊಂದುತ್ತಾರೆ. ಸದ್ಯ ನಾನು ದೇಶದ ಒಳಗೇ ಇದ್ದೇನೆ. ಮತ್ತು ನಾನು ಈಗ ದೇಶದ ಉಸ್ತುವಾರಿ ಅಧ್ಯಕ್ಷನಾಗಿದ್ದೇನೆ. ನಾನು ಎಲ್ಲ ನಾಯಕರನ್ನೂ ಸಂಪರ್ಕಿಸಿ ಅವರ ಬೆಂಬಲ ಹಾಗೂ ಒಮ್ಮತ ಸಂಗ್ರಹಿಸುತ್ತಿದ್ದೇನೆ ಎಂದಿದ್ದಾರೆ. ಸಾಲೆಹ್​ ಅವರ ಈ ಹೇಳಿಕೆ ತಾಲಿಬಾನಿಗಳಿಗೆ ಶಾಕ್ ಆಗಿದೆ. ಇದರ ಮುಂದುವರಿದ ಭಾಗವಾಗಿ ಇಂದು ತಾಲಿಬಾನಿಗಳ ಪೈಶಾಚಿಕ ಕೃತ್ಯಗಳನ್ನ ಖಂಡಿಸಿ ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ.

ಫೋರೆವರ್ ಸ್ಪೈ
49 ವರ್ಷದ ಅಮ್ರುಲ್ಲಾಹ್ ಸಾಲೆಹ್, ಘನಿ ಆಡಳಿತದ ಅವಧಿಯಲ್ಲಿ ಆಫ್ಘಾನ್​ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಲೆಹ್ ಪಾಕಿಸ್ತಾನದ ಬಗ್ಗೆ ಟೀಕೆ ಮಾಡೋದು ಹೊಸದೇನೂ ಅಲ್ಲ. ಅಶ್ರಫ್ ಘನಿ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮತ್ತು ಗುಪ್ತಚರ ಇಲಾಖೆಯ ನಿರ್ದೇಶನಾಲಯದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿರುವ ಅನುಭವ ಸಾಲೆಹ್​ಗೆ ಇದೆ. ಇನ್ನು ಇವರನ್ನ ಗೂಢಚಾರ್ಯೆ ವಿಚಾರದಲ್ಲಿ ನಿಸ್ಸಿಮರಾಗಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಮೇಲೆ ತಾಲಿಬಾನಿಗಳ ರೌದ್ರಾವತಾರ -ಕರುಳು ಹಿಂಡುವ ಮತ್ತೊಂದು ಕಥೆ

ಈ ಹಿಂದೆ ಪಾಕಿಸ್ತಾನ ಸೇನೆ ತಾಲಿಬಾನಿ ಉಗ್ರರಿಗೆ ಕುಮ್ಮಕ್ಕು ನೀಡುವ ಬಗ್ಗೆ ಧ್ವನಿಯನ್ನ ಎತ್ತಿದ್ದವರು. ಇದರ ಪರಿಣಾಮ ಅವರ ಮೇಲೆ ಈಗಾಗಲೇ ಎರಡೆರಡು ಬಾರಿ ತಾಲಿಬಾನಿ ಉಗ್ರರು ಅಟ್ಯಾಕ್ ಮಾಡಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೀಗಿದ್ದೂ ತಾಲಿಬಾನಿಗಳ ವಿರುದ್ಧ ಧ್ವನಿ ಎತ್ತೋದನ್ನ ಸಾಲೆಹ್ ನಿಲ್ಲಿಸಿರಲಿಲ್ಲ. ಈ ಹಿಂದಿನ ಪಾಕ್ ಅಧ್ಯಕ್ಷ ಪೆರ್ವೆಜ್ ಮುಶ್ರಫ್ ಅವರ ನೇತೃತ್ವದಲ್ಲಿ ಆಫ್ಘಾನ್ ಹಾಗೂ ಪಾಕಿಸ್ತಾನ ಗುಪ್ತಚರ ಇಲಾಖೆ ಅಧಿಕಾರಿಗಳ ಸಭೆ ನಡೆಯುತ್ತಿತ್ತು. ಈ ವೇಳೆ ಒಸಮಾ ಬಿನ್ ಲಾಡನ್​ಗೆ ಪಾಕಿಸ್ತಾನ ಆಶ್ರಯ ನೀಡಿದೆ ಅಂತಾ ಮುಶ್ರಫ್ ಎದುರಲ್ಲೇ ಹೇಳಿದ್ದನ್ನ 2014 ರಲ್ಲಿ ನಡೆದ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು.

ಪಾಕ್ ವಿರುದ್ಧ ಪದೇ ಪದೇ ಆಕ್ರೋಶ 
ಈ ಸಂದರ್ಭದಲ್ಲಿ ಮುಶ್ರಫ್ ಅವರು ಕೋಪಗೊಂಡು ತಮ್ಮ ಕೈಯನ್ನ ಮೇಜಿಗೆ ಗುದ್ದಿ ಸಭೆಯನ್ನ ಅರ್ಧಕ್ಕೆ ನಿಲ್ಲಿಸಿದ್ದರು. 2011 ರಲ್ಲಿ ಅಬೊಟೊಬಾದ್​ನಲ್ಲಿ ಬಿನ್ ಲಾಡೆನ್ ಕಾಣಿಸಿಕೊಂಡಾಗ ಸಾಲೆಹ್ ಪಾಕ್ ನಡೆಯನ್ನ ಮತ್ತೆ ಖಂಡಿಸಿದ್ದರು. ಅಶ್ರಫ್ ಘನಿ ಸರ್ಕಾರವನ್ನ ವಿರೋಧಿಸುತ್ತಿರುವ ಪಾಕಿಸ್ತಾನ ಸರ್ಕಾರ 10 ಸಾವಿರ ಹೋರಾಟಗಾರರನ್ನ ಪಾಕ್ ಅಫ್ಘಾನಿಸ್ತಾನಕ್ಕೆ ಕಳುಹಿಸಿದೆ ಎಂದು ಆರೋಪಿಸಿದ್ದರು.

ಅಲ್ಲದೇ ಇತ್ತೀಚೆಗಷ್ಟೇ ಪಾಕ್ ವಿರುದ್ಧ ಗುಡುಗಿದ್ದ ಅಮ್ರುಲ್ಲಾಹ್ ಸಾಲೆಹ್, ತಾಲಿಬಾನಿಗಳಿಗೆ ಪಾಕಿಸ್ತಾನ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. ಅವರಿಗೆ ಹಣಕಾಸಿನ ನೆರವು ಸಹ ಒದಗಿಸುತ್ತಿದೆ. ಅಮೆರಿಕ ಮತ್ತು ನ್ಯಾಟೊ ಅಫ್ಘಾನಿಸ್ತಾನಕ್ಕೆ ಬೆಂಬಲ ನೀಡುತ್ತಿವೆ, ಆದರೆ ಈ ದೇಶಗಳು ತಮಗೆ ಪೂರೈಸುವ ಆಯುಧಗಳಿಗೆ ಸಮನಾದ ಶಸ್ತ್ರಾಸ್ತ್ರಗಳು ತಾಲಿಬಾನಿಗಳಿಗೆ ಹೇಗೆ ಸಿಗುತ್ತಿವೆ? ನಮ್ಮ ಪಕ್ಕದ ರಾಷ್ಟ್ರ ಇಂಥ ಹೀನ ಕೃತ್ಯ ನಡೆಸುವುದು ಕೂಡಲೇ ನಿಲ್ಲಸಬೇಕು ಎಂದು ಆಗ್ರಹಿಸಿದ್ದರು.

ತಾಲಿಬಾನಿಗಳು ಆಫ್ಘಾನಿಸ್ತಾನವನ್ನ ಸಂಪೂರ್ಣವಾಗಿ ತಮ್ಮ ಹತೋಟಿಗೆ ತೆಗೆದುಕೊಂಡರೂ, ತಾಲಿಬಾನಿಗಳ ವಿರುದ್ಧ ಧೈರ್ಯದಿಂದ ಧ್ವನಿ ಎತ್ತುತ್ತಿರೋರಲ್ಲಿ ಅಮ್ರುಲ್ಲಾಹ್ ಸಾಲೆಹ್ ಮಾತ್ರ. ತಾಲಿಬಾನಿ ಉಗ್ರರ ವಿರುದ್ಧದ ಅವರ ಗಟ್ಟಿಯಾದ ಈ ನಿಲವೇ ಅವರನ್ನ ಫೋರೆವರ್ ಸ್ಪೈ (Forever spy) ಎಂದು ಕರೆಯಲಾಗುತ್ತದೆ. ತಾಲಿಬಾನಿಗೂ ಆಫ್ಘಾನ್​ ಮೂಲೆ ಮೂಲೆಗೂ ನುಗ್ಗಿ ದಾಂಧಲೆ ನಡೆಸುತ್ತಿದ್ದರೂ, ಬಗ್ಗದೇ ತಮ್ಮ ದೇಶದಲ್ಲಿ ಉಳಿದುಕೊಂಡಿರುವ ಅಮ್ರುಲ್ಲಾಹ್ ಸಾಲೆಹ್ ಧೈರ್ಯಕ್ಕೆ ಮೆಚ್ಚಲೇಬೇಕು. ಸದ್ಯ ಅಮ್ರುಲ್ಲಾಹ್ ಸಾಲೆಹ್ ಪಂಜ್​​ಶಿರ್​​ನ ನಿವಾಸದಲ್ಲಿ ಇದ್ದಾರೆ.

ಇದನ್ನೂ ಓದಿ: ಮಹಿಳೆಯರ ಹೆಜ್ಜೆ ಸಪ್ಪಳ ಕೇಳಂಗಿಲ್ಲ! ಕರಾಳ ದಿನ ನೆನೆದು ಆಫ್ಘಾನ್ ಮಹಿಳೆಯರು ಕಣ್ಣೀರು

Source: newsfirstlive.com Source link