ಕಾಂಗ್ರೆಸ್ ಟಾರ್ಗೆಟ್ ಬಸವರಾಜ ಬೊಮ್ಮಾಯಿ; ಸಿಎಂಗೆ ಬ್ರೇಕ್ ಹಾಕೋಕೆ ಕಾಂಗ್ರೆಸ್​ 5 ಅಸ್ತ್ರಗಳು?

ಕಾಂಗ್ರೆಸ್ ಟಾರ್ಗೆಟ್ ಬಸವರಾಜ ಬೊಮ್ಮಾಯಿ; ಸಿಎಂಗೆ ಬ್ರೇಕ್ ಹಾಕೋಕೆ ಕಾಂಗ್ರೆಸ್​ 5 ಅಸ್ತ್ರಗಳು?

ಸರ್ಕಾರದ ವರ್ಚಸ್ಸು ವೃದ್ಧಿಯ ಗುರಿ ಹಾಗೂ ಜವಾಬ್ದಾರಿಯೊಂದಿಗೆ ಮುಖ್ಯಮಂತ್ರಿಯಾಗಿರೋ ಬಸವರಾಜ್ ಬೊಮ್ಮಾಯಿ‌ಯೇ ಕಾಂಗ್ರೆಸ್ ನಾಯಕರ ಮುಂದಿನ ಟಾರ್ಗೆಟ್ ಎನ್ನಲಾಗಿದೆ. ಗೌರ್ಮೆಂಟ್ ಇಮೇಜ್ ಡೆವಲಪ್ಮೆಂಟ್ ಗೆ ಸರ್ಕಸ್ ಮಾಡ್ತಿರೋ ಸಿಎಂಗೆ ಬ್ರೇಕ್ ಹಾಕೋದೇ ಕೈ ನಾಯಕರ ಮುಂದಿನ ಚಾಲೆಂಜ್ ಅಂತೆ.

blank

ಹಳಿ ತಪ್ಪಿರೋ ಸರ್ಕಾರವನ್ನು ಮತ್ತೆ ಹಳಿಗೆ ತರಲು ಯತ್ನಿಸ್ತಿರೋ ಬಸವರಾಜ್ ಬೊಮ್ಮಾಯಿ‌ಯವರನ್ನೇ ಹಳಿ ತಪ್ಪಿಸಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸುತ್ತಿದೆ ಎಂದು ಹೇಳಲಾಗಿದೆ.

blank

ಸಿಎಂ ಬೊಮ್ಮಾಯಿಯ ತಡೆಯೋದು ಹೇಗೆ..? : ಕೈ ನಾಯಕರ ಕೈಯಲ್ಲಿರೋ ಅಸ್ತ್ರಗಳು ಏನೇನು..?

ಅಸ್ತ್ರ 1: ನೂತನ ಸಿಎಂ ಬೊಮ್ಮಾಯಿಗೆ ಸ್ವತಃ ಕೈ ನಾಯಕರು ಕೊಟ್ಟಿರೋ ಹನಿಮೂನ್ ಪೀರಿಯಡ್ ಮುಗಿಯುತ್ತಿದ್ದಂತೆ ಸರಣಿ ಹೋರಾಟ ಹಮ್ಮಿಕೊಳ್ಳಲು ತೆರೆಮರೆಯಲ್ಲೇ ಕಾಂಗ್ರೆಸ್ ಪ್ಲಾನ್ ರೂಪಿಸುತ್ತಿದೆಯಂತೆ.

ಅಸ್ತ್ರ 2: ಬೊಮ್ಮಾಯಿ‌ ಸ್ವತಂತ್ರ ಸಿಎಂ ಅಲ್ಲ ಎಂಬ ಇಮೇಜ್ ಕ್ರಿಯೇಟ್ ಮಾಡಲು ಪ್ರಯತ್ನ ನಡೆದಿದೆಯಂತೆ. ಒಂದೆಡೆ ಯಡಿಯೂರಪ್ಪ, ಇನ್ನೊಂದೆಡೆ ವಲಸಿಗರು, ಮತ್ತೊಂದೆಡೆ ಸಂಘಪರಿವಾರ, ಇದೆಲ್ಲಕ್ಕಿಂತ ಮೇಲ್ಗಡೆ ಹೈಕಮಾಂಡ್ : ಇವರೆಲ್ಲರ ಕೈಗೊಂಬೆಯಾಗಿದ್ದಾರೆ ಬೊಮ್ಮಾಯಿ‌ ಎಂದು ಸಾರಿ ಸಾರಿ ಹೇಳುವ ಮೂಲಕ ಇಮೇಜ್ ಡ್ಯಾಮೇಜ್ ಮಾಡಲು ಪ್ಲಾನ್ ನಡೆದಿದೆ ಎನ್ನಲಾಗಿದೆ.

ಅಸ್ತ್ರ 3: ಯಡಿಯೂರಪ್ಪ ಹಾದಿಯಲ್ಲೇ ಸಾಗುವೆ ಎನ್ನುತ್ತ ಲಿಂಗಾಯತರ ಓಲೈಕೆಗೆ ಮುಂದಾಗಿರುವ ಬೊಮ್ಮಾಯಿ ಕೂಡ ಬಿಎಸ್​ವೈ ರೀತಿ ಭ್ರಷ್ಟಾಚಾರದ ಹಾದಿಯಲ್ಲಿ ಸಾಗಲಿದ್ದಾರೆ ಎಂದು ಬಿಂಬಿಸಲು ಸ್ಕೆಚ್ ರೆಡಿಯಾಗ್ತಿದೆಯಂತೆ.

ಅಸ್ತ್ರ 4: ಮುಂಬರುವ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಎರಡು ವರ್ಷಗಳ ಹಲವು ವೈಫಲ್ಯಗಳ ಮುಂದಿಟ್ಟು ಸರಣಿ ಹೋರಾಟ ನಡೆಸುವ ಮೂಲಕ ನೂತನ ಮುಖ್ಯಮಂತ್ರಿಯನ್ನು ಸದನದ ಚಕ್ರವ್ಯೂಹದೊಳಗೆ ಸಿಲುಕಿಸುವ ಕಾರ್ಯತಂತ್ರವೂ ಈಗಾಗಲೇ ಸಿದ್ಧವಾಗಿದೆ ಎನ್ನಲಾಗಿದೆ.

ಅಸ್ತ್ರ 5: ಬೊಮ್ಮಾಯಿ‌ ಮುಖ್ಯಮಂತ್ರಿಯಾದರೂ ಸಹ ಮಂತ್ರಿ ಮಂಡಲದಲ್ಲಿ ಮಾತ್ರ ಕೆಲ ಹಳೆಯ ಹಾಗೂ ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಂತ್ರಿಗಳನ್ನೇ ಮುಂದುವರಿಸಿರುವ ಸರ್ಕಾರದ ಭಂಡತನವನ್ನೇ ಅಸ್ತ್ರ ಮಾಡಿಕೊಳ್ಳುವುದು : ಈ ಪೈಕಿ ಕಳಂಕಿತ ಸಚಿವೆ  ಶಶಿಕಲಾ ಜೊಲ್ಲೆಯವರನ್ನು ಸಂಪುಟದಿಂದ ವಜಾಗೊಳಿಸುವಂತೆ ಸದನದೊಳಗೆ ಪ್ರಬಲ ಹೋರಾಟ ನಡೆಸುವುದು ಕೂಡ ಕಾಂಗ್ರೆಸ್​ನ ಪ್ಲಾನ್ ಎಂದು ಹೇಳಲಾಗಿದೆ.

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ.

Source: newsfirstlive.com Source link