ಆಫ್ರಿಕಾ ಖಂಡದ ಅತಿ ಎತ್ತರದ ಪರ್ವತವನ್ನ ಸೈಕಲ್​ನಲ್ಲಿ ಏರಿದ ಸೋನಿ ಸೂದ್​ ಅಭಿಮಾನಿ

ಆಫ್ರಿಕಾ ಖಂಡದ ಅತಿ ಎತ್ತರದ ಪರ್ವತವನ್ನ ಸೈಕಲ್​ನಲ್ಲಿ ಏರಿದ ಸೋನಿ ಸೂದ್​ ಅಭಿಮಾನಿ

ಬಾಲಿವುಡ್ ನಟ ಸೋನು ಸೂದ್​ ಸಹಾಯ ಗುಣ ಮೆಚ್ಚಿ ಅನೇಕ ಮಂದಿ ಅವರಿಗೆ ವಿಭಿನ್ನವಾಗಿ ಸಲಾಂ ಹೇಳಿದ್ದಾರೆ. ಅದರಂತೆ ಇಲ್ಲೊಬ್ಬ ಅಭಿಮಾನಿ ಆಫ್ರಿಕಾ ಖಂಡದ ಅತಿ ಎತ್ತರದ ಕಿಲಿಮಂಜಾರೋನ ಪರ್ವತವನ್ನ ಸೈಕಲ್​ನಲ್ಲಿ ಏರುವ ಮೂಲಕ ವಿಭಿನ್ನವಾಗಿ ಧನ್ಯವಾದ ತಿಳಿಸಿದ್ದಾರೆ.

ಉಮಾ ಸಿಂಗ್​ ಎಂಬ ವ್ಯಕ್ತಿ, ಪರ್ವತದ ತುತ್ತ ತುದಿಯಲ್ಲಿ ನಿಂತು ಸೋನು ಸೂದ್​ರವರ ಪೋಸ್ಟರ್​ ಹಿಡಿದು ಗೌರವ ಸಲ್ಲಿಸಿದ್ದಾರೆ. ಇನ್ನು ಈ ವಿಡಿಯೋ ನೋಡಿದ ಸೋನು ಸೂದ್​ ಆಶ್ಚರ್ಯಗೊಂಡಿದ್ದು, ನಾನು ಸಹ ಈಗ ಕಿಲಿಮಂಜಾರೊನ ಪರ್ವತ ಏರಿದಷ್ಟೇ ಹೆಮ್ಮೆ ಆಗ್ತಿದೆ ಅಂತ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

Source: newsfirstlive.com Source link