ಮತ್ತೆ NCAಗೆ ಅರ್ಜಿ ಸಲ್ಲಿಸಿದ ದ್ರಾವಿಡ್​.. ಟೀಮ್​ ಇಂಡಿಯಾ ಕೋಚ್​ ಆಗೋದು ಡೌಟ್​?

ಮತ್ತೆ NCAಗೆ ಅರ್ಜಿ ಸಲ್ಲಿಸಿದ ದ್ರಾವಿಡ್​.. ಟೀಮ್​ ಇಂಡಿಯಾ ಕೋಚ್​ ಆಗೋದು ಡೌಟ್​?

ಟಿ20 ವಿಶ್ವಕಪ್​ ಬಳಿಕ ರಾಹುಲ್​ ದ್ರಾವಿಡ್​ ಟೀಮ್​ ಇಂಡಿಯಾ ಕೋಚ್​ ಆಗ್ತಾರೆ ಎಂಬ ಆಸೆಯಲ್ಲಿದ್ದ ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿಯೊಂದು ಹೊರ ಬಿದ್ದಿದೆ. ಸದ್ಯ ಸೆಪ್ಟೆಂಬರ್​​​ನಲ್ಲಿ ತೆರವಾಗುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಸ್ಥಾನಕ್ಕೆ ಬಿಸಿಸಿಐ ಅರ್ಜಿ ಕರೆದಿದ್ದು, ಈ ಹುದ್ದೆಗೆ ಮರು ನೇಮಕ ಬಯಸಿ ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಮರು ಅರ್ಜಿ ಸಲ್ಲಿಸಿದ್ದಾರೆ.

ಆದರೆ ಇಲ್ಲಿ ಮತ್ತೊಂದು ವಿಶೇಷ ಅಂದರೆ ದ್ರಾವಿಡ್​ ಹೊರತುಪಡಿಸಿ ಮತ್ಯಾರು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ ಎಂಬುದು ತಿಳಿದು ಬಂದಿದೆ. ಹಾಗಾಗಿ ಹಾಲಿ ಎನ್​ಸಿಎ ಮುಖಸ್ಥರಾಗಿರುವ ದ್ರಾವಿಡ್ ಅವರನ್ನೇ ಮುಂದುವರೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಎನ್​ಸಿಎ ಮುಖ್ಯಸ್ಥನಾಗಿ ದ್ರಾವಿಡ್ ಆಯ್ಕೆಯಾದರೆ, ಟೀಮ್​ ಇಂಡಿಯಾ ಮುಂದಿನ ಕೋಚ್​ ಯಾರಾಗಲಿದ್ದಾರೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

blank

ಅಂಡರ್ -19 ಮತ್ತು ಭಾರತ ‘ಎ’ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಎನ್​ಸಿಎ ಮುಖ್ಯಸ್ಥ ರಾಹುಲ್​ ದ್ರಾವಿಡ್​, ಅವರ ಗರಡಿಯಲ್ಲಿ ಪಳಗಿದ ಅನೇಕ ಆಟಗಾರರು ತಂಡದಲ್ಲಿದ್ದಾರೆ. ಇದರಿಂದಾಗಿ ಟೀಮ್​ ಇಂಡಿಯಾದ ಮುಂದಿನ ಕೋಚ್​ ಆಗಿ ಅವರನ್ನೇ ನೇಮಕ ಮಾಡಲಾಗುತ್ತೆ ಎಂದು ಹೇಳಲಾಗಿತ್ತು. ಆದರೆ, ಎನ್​ಸಿಎ ಮುಖ್ಯಸ್ಥರ ಹುದ್ದೆಗೆ ಮರು ಅರ್ಜಿ ಸಲ್ಲಿಸುವ ಮೂಲಕ ಮುಂದಿನ ಕೋಚ್ ಸುದ್ದಿಗಳಿಗೆ ದ್ರಾವಿಡ್​​ ತೆರೆ ಎಳೆದಿದ್ದಾರೆ. ಇದು ನೋಡಿದರೆ ರವಿಶಾಸ್ತ್ರಿಯೇ ಮುಂದಿನ ಕೋಚ್​ ಆಗಿ ಮುಂದುವರಿಯುವ ಸಾಧ್ಯತೆ ಎಂದು ಎಂಬ ಸುದ್ದಿಗಳು ಕೂಡ ಹರಿದಾಡುತ್ತಿವೆ.

Source: newsfirstlive.com Source link