ಮೋದಿ ವಿರುದ್ಧ ಸಿದ್ಧಗೊಳ್ಳುತ್ತಿದೆ ಮಹಾ ಕೂಟ -ಬಿಜೆಪಿ ಮೇಲೆ ಸಾಫ್ಟ್​ ಆಗ್ತಾರಾ ದೇವೇಗೌಡರು?

ಮೋದಿ ವಿರುದ್ಧ ಸಿದ್ಧಗೊಳ್ಳುತ್ತಿದೆ ಮಹಾ ಕೂಟ -ಬಿಜೆಪಿ ಮೇಲೆ ಸಾಫ್ಟ್​ ಆಗ್ತಾರಾ ದೇವೇಗೌಡರು?

ಬೆಂಗಳೂರು: ಕೇಂದ್ರದಿಂದ ಬಿಜೆಪಿ ಹೊರಗಿಡಲು ಪ್ರತಿಪಕ್ಷಗಳ ಮಹಾ ಸಭೆ ಆಯೋಜಿಸಲಾಗ್ತಿದೆ. ಆಗಸ್ಟ್ 20 ರಂದು ದೆಹಲಿಯಲ್ಲಿ ಪ್ರತಿಪಕ್ಷಗಳ ಕೂಟ ಒಂದಾಗಲಿದೆ. ಆದ್ರೆ, ಜೆಡಿಎಸ್​​​ ಈ ಸಭೆಯಲ್ಲಿ ಭಾಗಿಯಾಗುತ್ತೋ ಇಲ್ಲವೋ ಅನ್ನೋದು ಗೌಡರೇ ಬಲ್ಲರು. ಅಷ್ಟಕ್ಕೂ ಪ್ರತಿಪಕ್ಷಗಳ ಸಭೆಯ ಕುರಿತು ಗೌಡರ ಮನದಲ್ಲೂ ಕೆಲ ಲೆಕ್ಕಾಚಾರಗಳು ಹೊಯ್ದಾಡ್ತಿವೆ. ಅದೇನು ಅನ್ನೋದರ ಕಂಪ್ಲೀಟ್​ ರಿಪೋರ್ಟ್​​ ಇಲ್ಲಿದೆ..

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ರಾಜ್ಯ ರಾಜಕಾರಣದ ಚಾಣಾಕ್ಯ. ಕರ್ನಾಟಕದಲ್ಲಿ ದಳ ಪರಂಪರೆ ಉಳಿಸಿಕೊಂಡು ಹೋಗ್ತಿರುವ ಏಕೈಕ ನಾಯಕ. ಗೌಡರು ಹೆಣೆದ ಸೂತ್ರಗಳು ವಿರೋಧಿಗಳ ಎಣಿಕೆಗೆ ಸಿಗದೇ ನಿಬ್ಬೆರಗಾಗಿಸಿದ್ದಿದೆ. ರಾಷ್ಟ್ರ ರಾಜಕಾರಣದಲ್ಲಿ ಗೌಡರು ಎಡದಲ್ಲೆ ಹೆಚ್ಚಾಗಿ ಹೊರಳಾಡಿದವ್ರು. ಈಗ ಗೌಡರು ಹೊಸ ದಾಳ ಉರುಳಿಸ್ತಿದ್ದಾರೆ. ಎಂದಿನಂತೆ ಯಾರ ನಿಲುಕಿಗೂ ಸಿಗ್ತಿಲ್ಲ.

blank

ಪ್ರತಿಪಕ್ಷಗಳ ಸಭೆ ಬಗ್ಗೆ ಗೌಡರ ಲೆಕ್ಕಾಚಾರ ಏನು?
ಪ್ರಧಾನಿ ಮೋದಿ ನಾಗಾಲೋಟಕ್ಕೆ ಬ್ರೇಕ್​​ ಹಾಕುವ ಮಹಾ ಯತ್ನವೊಂದು ದೆಹಲಿಯಲ್ಲಿ ನಡಿತಿದೆ. ಈ ರಾಜಕೀಯ ಯಜ್ಞಕ್ಕೆ ಎಲ್ಲಾ ಪಕ್ಷಗಳ ಋತ್ವಿಜರು ಭಾಗಿ ಆಗ್ತಿದ್ದಾರೆ. 2024ರ ಚುನಾವಣೆಗೂ ಮುನ್ನವೇ ಭಾರತದ ದಿಕ್ಕು ದೆಸೆ ಸಿದ್ಧಪಡಿಸುವ ವೇದಿಕೆಯೊಂದು ರಚನೆ ಆಗ್ತಿದೆ. ಈ ಹಿಂದೆ 2018ರಲ್ಲಿ ದೇವೇಗೌಡರೇ ವೇದಿಕೆಯ ಕರ್ತೃ ಆಗಿದ್ದರು. ಮೈತ್ರಿ ಸರ್ಕಾರದ ಪದಗ್ರಹಣಕ್ಕೆ ದೇಶದ ವಿಪಕ್ಷ ನಾಯಕ ಗಣವನ್ನ ಒಂದೆಡೆ ಸೇರಿಸಿದ ಹೆಗ್ಗಳಿಕೆಗೆ ಗೌಡರು ಪಾತ್ರರಾಗಿದ್ದರು.

ಈಗ ಸದ್ಯದ ವಿಷಯಕ್ಕೆ ಬಂದು ಬಿಡೋಣ. ಪ್ರಧಾನಿ ಮೋದಿ ವಿರುದ್ಧ ಮಹಾ ಕೂಟವೊಂದು ಸಿದ್ಧಗೊಳ್ತಿದೆ. ಇದೇ ಆಗಸ್ಟ್ 20 ರಂದು ದೆಹಲಿಯಲ್ಲಿ ಪ್ರತಿಪಕ್ಷಗಳ ಸಭೆ ಆಯೋಜಿಸಲಾಗ್ತಿದೆ. ಬಿಜೆಪಿ ಸರ್ಕಾರದ ಧೋರಣೆ ವಿರುದ್ಧ ಸಿಡಿದೆದ್ದ ಕಾಂಗ್ರೆಸ್, ಈ ಕೂಟದ ನಾಯಕತ್ವ ವಹಿಸ್ತಿದೆ. ಆದ್ರೆ, ಈ ಸಭೆಯಲ್ಲಿ ಗೌಡರ ಉಪಸ್ಥಿತಿ ಇರುತ್ತಾ ಅನ್ನೋ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಆಗಸ್ಟ್​​ 20ರ ಪ್ರತಿಪಕ್ಷಗಳ ಸಭೆಯಲ್ಲಿ ಜೆಡಿಎಸ್​​ ಭಾಗವಹಿಸೋದು ಅನುಮಾನವಾಗಿದೆ. ಇತ್ತೀಚೆಗೆ ಮಾಜಿ ಪ್ರಧಾನಿ ದೇವೇಗೌಡ ಮಾತುಗಳು ಇದಕ್ಕೆ ಪುಷ್ಠಿ ನೀಡ್ತಿವೆ. ರಾಜ್ಯ ಸಭೆಯಲ್ಲಿ ಪ್ರಧಾನಿ ಮೋದಿ ಬಗ್ಗೆ ಗೌಡರು ಹಾಡಿ ಹೊಗಳಿದ್ದರು. ರಾಜ್ಯದಲ್ಲಿ ಸಿಎಂ ಸಿಂಹಾಸನಕ್ಕೆ ಏರಿರುವ ಬೊಮ್ಮಾಯಿಗೆ ಗೌಡರು ಆಶೀರ್ವಾದ ಮಾಡಿರೋದು ಈಗಲೂ ವಿವಾದ ಹಬೆ ಆಡ್ತಿದೆ..

blank

ಗೌಡರ ‘ತಟಸ್ಥ’ ಸೂತ್ರಕ್ಕೆ ದಶ ಲೆಕ್ಕ!

  1. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ
  2. ಉತ್ತಮ ಆಡಳಿತ ನೀಡಿ ಎಂದು ಬೊಮ್ಮಾಯಿಗೆ ಆಶೀರ್ವಾದ
  3. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಇಲ್ಲ
  4. 2 ರಾಷ್ಟ್ರೀಯ ಪಕ್ಷಗಳ ಜೊತೆ ಸಮಾನ ಅಂತರ ಹೊಂದಿರಬೇಕು
  5. ಈ ಮೂಲಕ ಜೆಡಿಎಸ್​, ಬಿಜೆಪಿ ವಿರೋಧ ಅಲ್ಲ ಎಂದು ಸಂದೇಶ
  6. ಇತ್ತ ಕಾಂಗ್ರೆಸ್​ ಪರ ಇಲ್ಲ ಎಂಬ ಸಂದೇಶ ನೀಡಲು ತೀರ್ಮಾನ
  7. ಸದ್ಯಕ್ಕೆ ತೃತೀಯ ರಂಗದ ಮೇಲೆ ಗಮನ ಹರಿಸಿರುವ ಗೌಡರು
  8. ಪರ್ಯಾಯ ಶಕ್ತಿಗೆ ಬೆಂಬಲ ನೀಡೋದು ಬೇಡ ಎಂಬ ತೀರ್ಮಾನ
  9. ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡಲು ದಳಪತಿಗಳ ಚಿಂತನೆ
  10. ಬಳಿಕ ರಾಷ್ಟ್ರ ರಾಜಕಾರಣದ ಬಗ್ಗೆ ಗಮನ ಹರಿಸುವ ತೀರ್ಮಾನ

blank

ಗೌಡರ ಈ ರಾಜಕೀಯ ಲೆಕ್ಕಾಚಾರಕ್ಕೆ ಬಿಜೆಪಿ ಕೂಡಾ ಜೆಡಿಎಸ್​​ ಪರ ಹೊಂದಿರುವ ಮೃದು ಧೋರಣೆ ಕೂಡಾ ಕಾರಣ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್​​​ ಬಲಿಷ್ಠವಾಗಿದ್ದು, ಈ ಪ್ರದೇಶದ ಯಾವೊಬ್ಬ ನಾಯಕನಿಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಕಲ್ಪಿಸಲಾಗಿಲ್ಲ. ಈ ಭಾಗದಲ್ಲಿ ಜೆಡಿಎಸ್​ ಮತ್ತು ಕಾಂಗ್ರೆಸ್​​ ಬದ್ಧ ವಿರೋಧಿಗಳು. ಕಾಂಗ್ರೆಸ್​​ ಸದೆ ಬಡೆಯಲು, ಬಿಜೆಪಿ ಕೂಡಾ ದಳದ ಸ್ನೇಹ ಬಯಸ್ತಿದೆ. ಭವಿಷ್ಯದ ರಾಜಕಾರಣದ ಬಗ್ಗೆ ದೂರದೃಷ್ಟಿ ಹೊಂದಿರುವ ಕಮಲ ಪಡೆ ವರಿಷ್ಠರು, ದಳಪತಿ ಓಲೈಕೆ ಮಾಡ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಗೌಡರ ನಿಲುವು ಏನಾಗಿರಲಿದೆ ಅನ್ನೋ ಯಕ್ಷ ಪ್ರಶ್ನೆ ಆಗಿದೆ.

ವರದಿ: ಶಿವಪ್ರಸಾದ್​, ಪೊಲಿಟಿಕಲ್​ ಬ್ಯೂರೋ, ನ್ಯೂಸ್​ಫಸ್ಟ್​​

Source: newsfirstlive.com Source link