ಸ್ಯಾಂಡಲ್​ವುಡ್​ ಡ್ರಗ್​ ಕೇಸ್​: ಪ್ರಕರಣ ನಡೆದು ವರ್ಷವಾಗುತ್ತಿದ್ದರೂ ಸಿಸಿಬಿ ಕೈ ಸೇರಿಲ್ಲ FSL ವರದಿ

ಸ್ಯಾಂಡಲ್​ವುಡ್​ ಡ್ರಗ್​ ಕೇಸ್​: ಪ್ರಕರಣ ನಡೆದು ವರ್ಷವಾಗುತ್ತಿದ್ದರೂ ಸಿಸಿಬಿ ಕೈ ಸೇರಿಲ್ಲ FSL ವರದಿ

ಬೆಂಗಳೂರು: ಕಳೆದ ವರ್ಷ ಚಂದನವನದಲ್ಲಿ ಸದ್ದು ಮಾಡಿದ್ದ ಡ್ರಗ್ಸ್​ ಕೇಸ್​ಗೆ ಸಂಬಂಧಿಸಿದಂತೆ ಇನ್ನು ಪ್ರಕರಣದ ಪ್ರಮುಖ ಸಾಕ್ಷಿ ಪೊಲೀಸರ ಕೈಗೆ ಸಿಕ್ಕಿಲ್ಲ. ಆರೋಪಿಗಳ ದೇಹದಲ್ಲಿನ ಮಾದಕ ವಸ್ತು ಪತ್ತೆಯ ವರದಿ FSL (ವಿಧಿ ವಿಜ್ಞಾನ ಪ್ರಯೋಗಾಲಯ) ನಿಂದ ಇನ್ನು ಬಂದಿಲ್ಲವಾದರಿಂದ ಈ ಕುರಿತು ಹೈದ್ರಾಬಾದ್ FSL ಗೆ ಸಿಸಿಬಿ ರಿಮೆಂಬರ್ ಪತ್ರ ಬರೆದಿದೆ ಎಂದು ಮಾಹಿತಿ ಲಭ್ಯವಾಗಿದೆ.

ಆರೋಪಿಗಳು ಡ್ರಗ್ ಸೇವನೆ ಮಾಡಿದ್ದರೆ? ಎನ್ನುವುದಕ್ಕೆ ಈ ವರದಿ ಪ್ರಮುಖ ಸಾಕ್ಷಿಯಾಗಿದ್ದು, ಆದರೆ ಪ್ರಕರಣ ನಡೆದು ವರ್ಷವಾಗುತ್ತಿದ್ದರೂ ಮಾತ್ರ ಆರೋಪಿಗಳ ಡ್ರಗ್​ ಟ್ರಾಯಲ್ ವರದಿ ಮಾತ್ರ ಇನ್ನು ಸಿಸಿಬಿ ಕೈ ಸೇರಿಲ್ಲ.

ಇದನ್ನೂ ಓದಿ: ಸಂಜನಾ ಗಲ್ರಾನಿ ನಿವಾಸದ ಮೇಲೆ ನಡೆದ ಸಿಸಿಬಿ ದಾಳಿಯಲ್ಲಿ ಸಿಕ್ಕಿದ್ದೇನು..?

ನಿನ್ನೆ ಸಿಸಿಬಿ FSLಗೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲು ವರದಿ ಅಗತ್ಯವೆಂದು ತಿಳಿಸಿದ್ದು, ವರದಿ ಯಾವಾಗ ಸಿಗುತ್ತೆ ಅಂತಾ ತಿಳಿಸಲು ಕೋರಿ ಪತ್ರ ಬರೆದಿದ್ದು, ಅದಷ್ಟೂ ಬೇಗ ರಿಪೋರ್ಟ್ ನೀಡುವಂತೆ ತನಿಖಾಧಿಕಾರಿ ‌ಮನವಿ ಮಾಡಿದ್ದಾರೆ ಎನ್ನಲಾಗಿದೆ. 2020 ಡಿಸೆಂಬರ್ ನಲ್ಲಿ‌ ಪ್ರಕರಣದ ಆರೋಪಿಗಳಾದ ರಾಗಿಣಿ ದ್ವಿವೇದಿ, ಸಂಜನಾ ಸೇರಿ 10 ಜನರ ಕೂದಲು, ಯೂರಿನ್, ಬ್ಲಡ್ ಸ್ಯಾಂಪಲ್​ನ್ನು, ಲ್ಯಾಬ್ ಟೆಸ್ಟ್​ಗಾಗಿ ಹೈದರಾಬಾದ್​ನಲ್ಲಿರುವ FSL ಗೆ ಕಳುಹಿಸಲಾಗಿತ್ತು.

ಇದನ್ನೂ ಓದಿ: 3 ತಿಂಗಳ ಹಿಂದೆ ಡ್ರಗ್ಸ್​​ ತೆಗೊಂಡಿದ್ರೂ ಸಿಕ್ಕಿಬೀಳೋದು ಪಕ್ಕಾ; ಸ್ಟಾರ್ಸ್​​ಗಳಲ್ಲಿ ಢವ ಢವ

ಅದರಲ್ಲಿ ಕೊಂಚ ವ್ಯತ್ಯಾಸ ಅಂತಾ ಪುನಃ ಸಂಗ್ರಹಿಸಿ ಕಳುಹಿಸಲಾಗಿತ್ತು. ಆದರೆ ಆರೋಪಿಗಳು ಬೇಲ್ ಮೇಲೆ ಹೊರ ಬಂದು 3 ತಿಂಗಳಾದ್ರೂ ಸಿಸಿಬಿಗೆ ಮಾತ್ರ FSL ರಿಪೋರ್ಟ್ ತಲುಪಿಲ್ಲ. ಕೇಸ್​ನಲ್ಲಿ ಆರೋಪಿಗಳ ಡ್ರಗ್ಸ್ ಸೇವನೆ ಬಗ್ಗೆ ಖಚಿತ ಪಡಿಸಿಕೊಳ್ಳಲು ಈ ವರದಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಸ್ಯಾಂಡಲ್​ವುಡ್​ ನಟಿಯರಾದ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಹಲವರು ಡ್ರಗ್ ಸೇವಿಸುತ್ತಿರುವುದಾಗಿ 2020ರ ಸೆಪ್ಟೆಂಬರ್​ನಲ್ಲಿ ಆರೋಪ ಕೇಳಿ ಬಂದಿತ್ತು, ಈ ಸಂಬಂಧ ಈ ನಟಿಯರನ್ನು ಸೇರಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.

ಇದನ್ನೂ ಓದಿ: ನಟಿ ಸಂಜನಾ ಗಲ್ರಾನಿಯನ್ನ ವಶಕ್ಕೆ ಪಡೆದ ಸಿಸಿಬಿ

Source: newsfirstlive.com Source link