ED ಕೇಸ್​: ಜಮೀರ್​ ವಿರುದ್ಧ ಸ್ಫೋಟಕ ಮಾಹಿತಿ ಕಲೆ ಹಾಕಿದ ಇ.ಡಿ ಅಧಿಕಾರಿಗಳು

ED ಕೇಸ್​: ಜಮೀರ್​ ವಿರುದ್ಧ ಸ್ಫೋಟಕ ಮಾಹಿತಿ ಕಲೆ ಹಾಕಿದ ಇ.ಡಿ ಅಧಿಕಾರಿಗಳು

ಬೆಂಗಳೂರು: ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್‌ ಅಹ್ಮದ್ ಖಾನ್‌ ನಿವಾಸದ ಮೇಲೆ ED (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ಮಾಡಲು ಕಾರಣ ಎನ್ನಲಾದ ಎರಡು ಪ್ರಮುಖ ಅಂಶಗಳು ಯಾವುವು ಎಂಬುದು ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಮಾಜಿ‌ ಸಚಿವ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ED ದಾಳಿಗೆ ಐಎಂಎ ಕಂಪನಿ ಕೇಸ್ ಗಿಂತ ಪ್ರಮುಖ ಕಾರಣವಾಗಿದ್ದು, ಶ್ರೀಲಂಕಾ ಕ್ಯಾಸಿನೋ ಎಂದು ನ್ಯೂಸ್​ಫಸ್ಟ್​ಗೆ ED ಮೂಲಗಳಿಂದ ಮಾಹಿತಿ ದೊರಕಿದೆ. ಈಗಾಗಲೇ ಐಎಂಎ ವ್ಯವಹಾರದ ಬಗ್ಗೆ ಇ.ಡಿ ಅಧಿಕಾರಿಗಳು ಮಾಹಿತಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಸೈಟ್ ಖರೀದಿಯಲ್ಲಿ ಅಧಿಕ ಹಣ ಪಡೆದಿರುವರ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಸೈಟ್ ಮೂಲ ಬೆಲೆಗಿಂತ ಹೆಚ್ಚು ಹಣ ಪಡೆದಿರುವುದಕ್ಕೆ ಸಾಕ್ಷಿ ಲಭ್ಯವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಜಮೀರ್ ಮನೆ ಮೇಲೆ ED ದಾಳಿ; ಸಹೋದರನನ್ನ ವಶಕ್ಕೆ ಪಡೆದ ED

ಜಮೀರ್ ತಮ್ಮ ಶಿಷ್ಯ ಶೈಖ್ ಫಾಸಿಲ್ ಜೊತೆ ಶ್ರೀಲಂಕಾದಲ್ಲಿ ವ್ಯವಹಾರ ನಡೆಸಿದ್ದರು ಎನ್ನಲಾಗಿದ್ದು. ಅದಕ್ಕೆ ಪೂರಕವಾಗಿ ಶ್ರೀಲಂಕಾ ಕ್ಯಾಸಿನೊದಲ್ಲಿ ಜಮೀರ್,​ ಶೈಖ್ ಫಾಸಿಲ್ ಜೊತೆ ಪಾರ್ಟ್​ನರ್​ಶಿಪ್​ ವ್ಯವಹಾರದಡಿ ಹೂಡಿಕೆ ಮಾಡಿರುವುದರ ಕುರಿತು ಸ್ಫೋಟಕ ಸುಳಿವು ಲಭ್ಯವಾಗಿದೆ ಎನ್ನಲಾಗಿದೆ.

blank

ಇನ್ನು ಜಮೀರ್​ ಶಿಷ್ಯ ಶೈಖ್ ಫಾಸಿಲ್​ನ ಬೆನ್ನು ಬಿದ್ದಿರುವ ED ಟೀಂ, ಸದ್ಯದಲ್ಲೇ ಆತನನ್ನು ಪ್ರಕರಣ ಸಂಬಂಧಿಸಿ ವಿಚಾರಣೆಗೆ ಒಳಪಡಿಸಿ, ಜಮೀರ್ ಮತ್ತು ಶೈಖ್ ಫಾಸಿಲ್ ವ್ಯವಹಾರಗಳ ಕುರಿತು ದಾಖಲೆಗಳ ಸಂಗ್ರಹ ಮಾಡಲಿದೆ. ಐಎಂಎಗಿಂತ ಕೇಸ್​ಗಿಂತ ಶೈಖ್ ಫಾಸಿಲ್ ಜೊತೆ ನಡೆಸಿರುವ ವ್ಯವಹಾರ ಹೆಚ್ಚು ಮಹತ್ವದ್ದು ಎನ್ನುತ್ತಿರುವ ED, ಸದ್ಯ ಈ ಬಗ್ಗೆ ಪ್ರತ್ಯೇಕ ಕೇಸ್ ದಾಖಲಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಜಮೀರ್ ಅಹಮ್ಮದ್​​​ಗೆ ಮತ್ತೆ ಶಾಕ್.. ದಿಢೀರ್ ನೋಟಿಸ್ ಕೊಟ್ಟ ED

Source: newsfirstlive.com Source link