ಸಾಲು ಸಾಲು ಹಬ್ಬಗಳಿಂದ ಹೂವಿಗೆ ಬೇಡಿಕೆ -ಕೊರೊನಾ ಹೊಡೆತಕ್ಕೆ ಸಿಲುಕಿದ ರೈತನ ಮೊಗದಲ್ಲಿ ಮಂದಹಾಸ

ಸಾಲು ಸಾಲು ಹಬ್ಬಗಳಿಂದ ಹೂವಿಗೆ ಬೇಡಿಕೆ -ಕೊರೊನಾ ಹೊಡೆತಕ್ಕೆ ಸಿಲುಕಿದ ರೈತನ ಮೊಗದಲ್ಲಿ ಮಂದಹಾಸ

ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿನ ಹೊಡೆತಕ್ಕೆ ಸಿಲುಕಿದ ಹೂ ಬೆಳೆಗಾರರಿಗೆ ವರಮಹಾಲಕ್ಷ್ಮಿ ಹಬ್ಬ ವರ ತಂದಿದೆ. ಹಬ್ಬದ ಅಂಗವಾಗಿ ಹೂಗಳಿಗೆ ಭಾರೀ ಡಿಮ್ಯಾಂಡ್ ಅಗಿದ್ದು ಬಂಪರ್ ಬೆಲೆಯೂ ಸಿಗುತ್ತಿದೆ. ಹೀಗಾಗಿ ಹೂ ಬೆಳೆದ ರೈತರಿಗೆ ಜಣ ಜಣ ಕಾಂಚಾಣ ಕೈ ಸೇರುತ್ತಿದ್ದು ರೈತರು ಪುಲ್ ಖುಷ್ ಆಗಿದ್ದಾರೆ.

blank

ಹಬ್ಬದ ದಿನ ಹೂವು ಮಾರಾಟ ಬಲು ಜೋರು. ಮಾರುಕಟ್ಟೆಯಲ್ಲಿ ಬಗೆ ಬಗೆಯ ಹೂವುಗಳನ್ನ ನೋಡ್ತಿದ್ರೆ ಆಕರ್ಷಿತರಾಗೋದು ಗ್ಯಾರಂಟಿ.. ಅದರಲ್ಲೂ ಮಹಿಳೆಯರ ಹಬ್ಬ ಅಂದ್ರೆ ಅದು ವರಮಹಾಲಕ್ಷ್ಮೀ.. ಈಗ ವರಮಹಾಲಕ್ಷ್ಮೀ ಹಬ್ಬದ ಸಡಗರ ಎಲ್ಲೇಡೆ ಮನೆ ಮಾಡಿದೆ.. ಪುಷ್ಪೋದ್ಯಮಕ್ಕೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರದಲ್ಲಿ‌ ಹೂವುಗಳ ಬೆಲೆ ದುಬಾರಿಯಾಗಿ ರೈತರಿಗೆ ಒಂದ್ಕಾಸು ಜೇಬಿಗೆ ಹಾಕ್ಕೊಳ್ಳುವಂತಾದ್ರೆ.. ಗ್ರಾಹಕನಿಗೆ ಬರೆ ಬೀಳುವಂತಾಗಿದೆ..

blank

ರೈತ ಖುಷಿ.. ಗ್ರಾಹಕನಿಗೆ ಬಿಸಿ!

ವಿವಿಧ ಹೂವು ಬೆಲೆ ಕೆ.ಜಿಗೆ

  1. ಮ್ಯಾರಿಗೊಲ್ಡ್ ₹250
  2. ಸೇವಂತಿ ಹೂವು ₹250-300
  3. ಕಲರ್​ ಹೂವು ₹80-100
  4. ಗುಲಾಬಿ ಹೂವು ‌₹150-200
  5. ಚೆಂಡು ಹೂವು ₹120-150
  6. ತಾವರೆ ಹೂವು ₹60-80

blank

ಹೀಗೆ ಪ್ರತಿಯೊಂದು ಅಲಂಕಾರಿಕ ಹೂವುಗಳು ವರಮಹಾಲಕ್ಷಿ ಹಬ್ಬದ ಪ್ರಯುಕ್ತ ದುಬಾರಿಯಾಗಿದೆ. ಇದ್ರಿಂದ ಹೂ ಬೆಳೆದ ರೈತರು ಕೈ ತುಂಬಾ ಕಾಸು ಎಣಿಸುವಂತಾಗಿದ್ದು ಸಖತ್ ಖುಷಿ ಪಡ್ತಿದ್ದಾರೆ. ಆದ್ರೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಹೂವುವನ್ನ ಖರೀದಿಸಲು ಹೋದ ಗ್ರಾಹಕರಿಗೆ ಬೆಲೆ ಬರೆ ಎಳೆದಿದೆ.

ಕೊರೊನಾ ಸೋಂಕು ಕಡಿಮೆಯಾಗಿದೆ. ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳ ಆರಂಭವಾಗುತ್ತಿದೆ. ಮದುವೆ, ಸಭೆ ಸಮಾರಂಭಗಳ ಸೇರಿದಂತೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಹೂವುಗಳಿಗೆ ಭಾರೀ ಬೇಡಿಕೆ ಬಂದಿದೆ, ಸಾಲ ಸೋಲ ಮಾಡಿದ್ದ ರೈತರಿಗೆ ಈಗ ಕೈ ತುಂಬಾ ಕಾಸು ಆಗುತ್ತಿದ್ದು ಸಖತ್ ಖುಷಿ ಆಗಿದ್ದಾರೆ.

blank

Source: newsfirstlive.com Source link