ವಿಶ್ವಕಪ್​​ನಲ್ಲಿ ಆಡೋ ಆಟಗಾರರ ಹೆಸರು ಫಿಕ್ಸ್​ -ರೋಹಿತ್, ರಾಹುಲ್​ ಆರಂಭಿಕರಾಗಿ ಕಣಕ್ಕಿಳಿಯೋದು ಕನ್ಫರ್ಮ್​?

ವಿಶ್ವಕಪ್​​ನಲ್ಲಿ ಆಡೋ ಆಟಗಾರರ ಹೆಸರು ಫಿಕ್ಸ್​ -ರೋಹಿತ್, ರಾಹುಲ್​ ಆರಂಭಿಕರಾಗಿ ಕಣಕ್ಕಿಳಿಯೋದು ಕನ್ಫರ್ಮ್​?

ಟೀಮ್​ ಇಂಡಿಯಾದಲ್ಲಿ ಪ್ರತಿಯೊಂದು ಸ್ಲಾಟ್​​ಗೂ ನೇರಾನೇರ ಪೈಪೋಟಿ ಇದೆ. ಅದರಲ್ಲೂ ಟಿ20 ವಿಶ್ವಕಪ್​​ಗಾಗಿ ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರು ಸಾಲುಗಟ್ಟಿ ನಿಂತಿದ್ದಾರೆ. ಆದರೆ ಈಗಾಗಲೇ 10 ಆಟಗಾರರ ಹೆಸರು ಅಂತಿಮಗೊಂಡಿದೆ. ಉಳಿದ ಐದು ಸ್ಥಾನಕ್ಕೆ ಆಯ್ಕೆ ಮಾಡಲು ಸೆಲೆಕ್ಟರ್ಸ್​ ಗೊಂದಲಕ್ಕೆ ಒಳಗಾಗಿದ್ದಾರೆ.

T20 ವಿಶ್ವಕಪ್​​ಗೆ ವೇಳಾಪಟ್ಟಿ ಪ್ರಕಟಗೊಂಡಿದೆ. ಈ ಬೆನ್ನಲ್ಲೆ ಟೀಮ್​ ಇಂಡಿಯಾ ಸೆಲೆಕ್ಷನ್ ಕಮಿಟಿ, ಬಲಿಷ್ಠ ತಂಡ ರಚಿಸೋಕೆ ಕಸರತ್ತು ಜೋರಾಗೇ ನಡೆಸ್ತಿದೆ. ಆದರೆ ಟೂರ್ನಿಗೆ 15 ಸದಸ್ಯರನ್ನಷ್ಟೇ ಪ್ರಕಟಿಸುವಂತೆ ಐಸಿಸಿ ಸೂಚಿಸಿದ್ದು, ಆಯ್ಕೆ ಸಮಿತಿಗೆ ಗೊಂದಲವನ್ನ ದುಪಟ್ಟಾಗುವಂತೆ ಮಾಡಿದೆ. ಹೀಗಾಗಿ ಸೆಪ್ಟೆಂಬರ್​​ ಆರಂಭದಲ್ಲಿ ಜರುಗುವ ಟೀಮ್​ ಸೆಲೆಕ್ಷನ್​ ಮೀಟಿಂಗ್​ ಸಾಕಷ್ಟು ಕುತೂಹಲ ಕೆರಳಿಸಿದೆ.

blank

ಚುಟುಕು ಸಮರಕ್ಕೆ ಯಾರಿಗೆ ಚಾನ್ಸ್​ ನೀಡಬೇಕು, ಯಾರಿಗೆ ಕೊಕ್​​ ನೀಡಬೇಕು ಅನ್ನೋ ಟೆನ್ಶನ್​​ ಆಯ್ಕೆ ಸಮಿತಿಯದ್ದಾದರೆ, ನಮಗೆ ಅವಕಾಶ ಸಿಗುತ್ತಾ ಇಲ್ವೋ ಅನ್ನೋ ಟೆನ್ಶನ್ ಆಟಗಾರರಿಗೆ.

ಸೂರ್ಯಕುಮಾರ್​​​, ಸಿರಾಜ್​ಗೆ ಸ್ಥಾನ ಫಿಕ್ಸ್​.!

ಟಿ20 ವಿಶ್ವಕಪ್​​​ಗೆ ಇನ್ನೂ ತಂಡ ಪ್ರಕಟಗೊಂಡಿಲ್ಲ. ಅದಾಗಲೇ ಆಡುವ ಹತ್ತು ಆಟಗಾರರ ಹೆಸರು ಖಚಿತವಾಗಿದೆ. ಇದರಲ್ಲಿ ಟೆಸ್ಟ್​​ನಲ್ಲಿ ಮಿಂಚ್ತಿರುವ ವೇಗಿ ಮೊಹಮ್ಮದ್​ ಸಿರಾಜ್​ ಮತ್ತು ಇಂಗ್ಲೆಂಡ್​-ಶ್ರೀಲಂಕಾ ಸರಣಿಯಲ್ಲಿ ಭರವಸೆ ಮೂಡಿಸಿದ ಸೂರ್ಯಕುಮಾರ್ ಯಾದವ್,​ ಸ್ಥಾನ ಪಡೆಯೋದು ಖಚಿತವಾಗಿದೆ.

blank

ಸ್ಥಾನ ಪಡೆದುಕೊಂಡಿಲ್ಲ ಅಯ್ಯರ್​ – ಧವನ್​

ನಾಯಕನಾಗಿ ವಿರಾಟ್​ ಕೊಹ್ಲಿ, ಉಪನಾಯಕನಾಗಿ ರೋಹಿತ್​ ಶರ್ಮಾ, ಕೀಪರ್​​​ಗಳಾದ ಕೆಎಲ್ ರಾಹುಲ್, ರಿಷಭ್ ಪಂತ್​​ ಕಣಕ್ಕಿಳಿಯಲಿದ್ದಾರೆ. ಆಲ್​ರೌಂಡರ್​ಕೋಟಾದಲ್ಲಿ ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಇದ್ದಾರೆ. ಇನ್ನು ವೇಗಿಗಳಾಗಿ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಆಡೋದು ಫಿಕ್ಸ್​ ಆಗಿದೆ.

ಆದರೆ ಶಿಖರ್​ ಧವನ್, ಶ್ರೇಯಸ್​ ಅಯ್ಯರ್​, ಭುವನೇಶ್ವರ್​​ ಕುಮಾರ್​​, ಯಜುವೇಂದ್ರ ಚಹಲ್​​ ಹೆಸರು ಖಚಿತವಾಗದಿರೋದು ಅನುಮಾನು ಮೂಡಿಸಿದೆ. ಆದರೆ ಯಾರಿಗೆ ಚಾನ್ಸ್​ ಸಿಗುತ್ತೆ ಅನ್ನೋದಕ್ಕೆ ಶೀಘ್ರವೇ ಉತ್ತರ ಸಿಗಲಿದೆ.

Source: newsfirstlive.com Source link