T20 ವಿಶ್ವಕಪ್​ಗೆ ಆಸಿಸ್ ತಂಡ ಪ್ರಕಟ- ವೇಗಿ ಪ್ಯಾಟ್ ಕಮ್ಮಿನ್ಸ್​ಗೆ ಉಪನಾಯಕ ಪಟ್ಟ

T20 ವಿಶ್ವಕಪ್​ಗೆ ಆಸಿಸ್ ತಂಡ ಪ್ರಕಟ- ವೇಗಿ ಪ್ಯಾಟ್ ಕಮ್ಮಿನ್ಸ್​ಗೆ ಉಪನಾಯಕ ಪಟ್ಟ

T20 ವಿಶ್ವಕಪ್​ಗೆ ನ್ಯೂಜಿಲೆಂಡ್​ ತಂಡ ಪ್ರಕಟಿಸಿದ ಬೆನ್ನಲ್ಲೆ, ಇದೀಗ ಆಸ್ಟ್ರೇಲಿಯಾ ಕೂಡ 15 ಸದಸ್ಯರ ತಂಡವನ್ನ ಪ್ರಕಟಿಸಿದೆ. ವೆಸ್ಟ್​ ಇಂಡೀಸ್​ ಸರಣಿಯಲ್ಲಿ ಇಂಜುರಿಗೆ ಒಳಗಾಗಿದ್ದ ಆರಂಭಿಕ ಬ್ಯಾಟ್ಸ್​ಮನ್ ಆ್ಯರೋನ್ ಫಿಂಚ್​ ಸಂಪೂರ್ಣ ಚೇತರಿಸಿಕೊಂಡಿದ್ದು, ತಂಡವನ್ನ ಮುನ್ನಡೆಸಲಿದ್ದಾರೆ. ವೇಗಿ ಪ್ಯಾಟ್​ ಕಮ್ಮಿನ್ಸ್​​​ ಉಪನಾಯಕನಾಗಿ ಬಡ್ತಿ ಪಡೆದಿದ್ದಾರೆ. ಬಿಬಿಎಲ್​ ಮತ್ತು ಹಂಡ್ರೆಡ್​ ಲೀಗ್​​ನಲ್ಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶಿಸಿದ ಜೋಶ್​ ಇಂಗ್ಲಿಸ್​​ಗೆ ಚೊಚ್ಚಲ ಕರೆ ಬಂದಿದ್ರೆ, ಕಳೆದ ಕೆಲವು ಸರಣಿಗಳಿಂದ ಕ್ರಿಕೆಟ್​​ ಚಟುವಟಿಕೆಗಳಿಗೆ ದೂರವಿದ್ದ ಸ್ಟಾರ್​ ಆಟಗಾರರು ತಂಡಕ್ಕೆ ವಾಪಾಸ್​ ಆಗಿದ್ದಾರೆ.

ಡೇವಿಡ್​ ವಾರ್ನರ್​​, ಆ್ಯರೋನ್​ ಫಿಂಚ್​ ಮತ್ತು ಸ್ಟೀವ್​ ಸ್ಮಿತ್​ ಹೆಸರು, ಟಾಪ್ 3ಯಲ್ಲಿ ಕಾಣಿಸಿಕೊಂಡಿದೆ. ಮಿಚೆಲ್​ ಮಾರ್ಷ್​​​, ಗ್ಲೇನ್​ ಮ್ಯಾಕ್ಸ್​ವೆಲ್​, ಮಾರ್ಕಸ್​ ಸ್ಟೋಯ್ನಿಸ್​ ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದು, ಮಧ್ಯಮ ಕ್ರಮಾಂಕಕ್ಕೆ ಬಲ ಹೆಚ್ಚಿಸಿದ್ದಾರೆ. ಬೌಲಿಂಗ್​​ನಲ್ಲಿ ಮಿಚೆಲ್​ ಸ್ಟಾರ್ಕ್​​, ಜೋಷ್​​ ಹೆಜಲ್​ವುಡ್​, ಕೇನ್​ ರಿಚರ್ಡ್​​ಸನ್​, ಕಮ್ಮಿನ್ಸ್​​​ಗೆ ಸಾಥ್​ ನೀಡಲಿದ್ದಾರೆ. ಸ್ಪಿನ್​​ನಲ್ಲಿ ಅಸ್ಟನ್​ ಅಗರ್​, ಮಿಚಲ್​​ ಸ್ವೆಪ್ಸನ್​, ಆ್ಯಡಂ ಜಂಪಾ ಕೂಡ ಇದ್ದಾರೆ. ಮ್ಯಾಥ್ಯೂ ವೇಡ್​​ ಹೆಚ್ಚುವರಿ ಓಪನರ್​ ಆಗುವ ಸಾಧ್ಯತೆ ಇದೆ. ಮೀಸಲು ಆಟಗಾರರಾಗಿ ಡೇನಿಯಲ್​​ ಕ್ರಿಶ್ಚಿಯನ್, ನಾಥನ್​ ಎಲ್ಲಿಸ್​, ಡೇನಿಯಲ್​ ಸ್ಯಾಮ್ಸ್​ ಸ್ಥಾನ ಪಡೆದುಕೊಂಡಿದ್ದಾರೆ.

Source: newsfirstlive.com Source link