‘ಅಫ್ಘಾನ್​ನಲ್ಲಿ ಇನ್ನು 1,650 ಜನ ಭಾರತೀಯರಿದ್ದಾರೆ’- ಸಚಿವ ಎಸ್​. ಜೈಶಂಕರ್​

‘ಅಫ್ಘಾನ್​ನಲ್ಲಿ ಇನ್ನು 1,650 ಜನ ಭಾರತೀಯರಿದ್ದಾರೆ’- ಸಚಿವ ಎಸ್​. ಜೈಶಂಕರ್​

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಅರಾಜಕತೆಯಿಂದ ಅಲ್ಲಿರುವ ಭಾರತೀಯರ ರಕ್ಷಣೆ ದೊಡ್ಡ ಸವಾಲಾ​​ಗಿ ಪರಿಣಮಿಸಿದೆ. ಈಗಾಗಲೇ ಅಮೆರಿಕ ಸೇನೆಯ ಸಹಕಾರದಿಂದ 2 ಬ್ಯಾಚ್​​ನಲ್ಲಿ ಭಾರತೀಯರನ್ನ ಸುರಕ್ಷಿತವಾಗಿ ಸ್ಥಳಕ್ಕೆ ಕರೆದುಕೊಂಡು ಬರಲಾಗಿದೆ. ಜೊತೆಗೆ ಇನ್ನುಳಿದವರನ್ನ ವಾಪಸ್ ಕರೆದುಕೊಂಡು ಬರುವ ಎಲ್ಲಾ ತಯಾರಿಗಳು ನಡೆಯುತ್ತಿವೆ.

ಇದನ್ನೂ ಓದಿ: ಅಫ್ಘಾನ್​​ ಮೂಲದ ಸಿಖ್ಖರು ಮತ್ತು ಹಿಂದೂಗಳನ್ನು ಭೇಟಿಯಾದ ತಾಲಿಬಾನ್​​ ನೀಡಿದ ಭರವಸೆಯೇನು?

ಈ ಕುರಿತು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​. ಜೈಶಂಕರ್​ ಮಾತನಾಡಿದ್ದು, ಅಫ್ಘಾನಿಸ್ತಾನದಲ್ಲಿ ಅರಾಜಕತೆ ಉಂಟಾದ ಪರಿಣಾಮ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ಇನ್ನು 1650 ಭಾರತೀಯರು ಅಫ್ಘಾನ್​ನಲ್ಲಿ ಸಿಲುಕಿರುವ ಕುರಿತು ಸಚಿವ ಎಸ್​. ಜೈಶಂಕರ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೋದಿ ಮಹತ್ವದ ಸಭೆ; ಅಫ್ಘಾನ್​ನಿಂದ​ ಹಿಂದೂ, ಸಿಖ್ಖರ ಸುರಕ್ಷಿತ ಸ್ಥಳಾಂತರಕ್ಕೆ ಪ್ರಧಾನಿ ಸೂಚನೆ

ವಿಶ್ವ ಸಂಸ್ಥೆ ಪ್ರಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಫ್ಘಾನಿಸ್ತಾನದಲ್ಲಿ ಇನ್ನು 1650 ಭಾರತೀಯರಿದ್ದು, ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವುದೇ ನಮ್ಮ ಪ್ರಮುಖ ಗುರಿ ಎಂದಿದ್ದಾರೆ. ಇನ್ನು ಅಫ್ಘಾನ್​ ಮತ್ತು ಭಾರತ ಐತಿಹಾಸಿಕ ಸಂಬಂಧ ಹೊಂದಿದ್ದು, ಮುಂದಿನ ದಿನಗಳಲ್ಲಿ ಅಫ್ಘಾನ್​ ಜನರೊಂದಿಗೆ ಭಾರತದ ಸಂಪರ್ಕ ಎಂದಿನಂತೆ ಮುದುವರೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಫ್ಘಾನ್​​ನಿಂದ ತಾಯ್ನಾಡಿಗೆ 120 ಮಂದಿ ಭಾರತೀಯರು- ರಣಾಂಗಣದಂತಾದ ಅಫ್ಘಾನಿಸ್ತಾನದಿಂದ ರಕ್ಷಣೆಯೇ ರೋಚಕ

 

Source: newsfirstlive.com Source link