ಇಂಡಿಯನ್ ಐಡಿಯಲ್​ ಟಾಪ್​ ಫೈನಲ್ಲಿ ಮಿಂಚಿದ ಕನ್ನಡಿಗ ನಿಹಾಲ್​ ತಾವ್ರೋ

ಇಂಡಿಯನ್ ಐಡಿಯಲ್​ ಟಾಪ್​ ಫೈನಲ್ಲಿ ಮಿಂಚಿದ ಕನ್ನಡಿಗ ನಿಹಾಲ್​ ತಾವ್ರೋ

ನಿಹಾಲ್‌ ತಾವ್ರೋ.. ನೀವೆಲ್ಲಾ ಈ ಪ್ರತಿಭೆಯನ್ನ ಸರಿಗಮಪದಲ್ಲಿ ನೋಡಿದ್ದೀರಿ. ಈ ಗಾಯಕನ ಹಾಡು ಕೇಳಿ ಮೆಚ್ಚಿದ್ದೀರಿ. ಈಗ ಕನ್ನಡದ ಈ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ವಿಚಾರದ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ವಿ… ಈಗ ನಿಹಾಲ್ ಇಂಡಿಯನ್‌ ಐಡಲ್‌ ಸೀಸನ್‌ 12ರ ಫೈನಲಿಸ್ಟ್‌ ಆಗಿದ್ದರು.

ಅಪ್ಪಟ ಕನ್ನಡದ ಪ್ರತಿಭೆ ಬಾಲಿವುಡ್‌ ಸ್ಟಾರ್​ಗಳಿಂದ ಶಹಬ್ಬಾಷ್​ಗಿರಿ ಗಳಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯ. ಈ ಮೊದಲು ಜ್ಹೀ ಕನ್ನಡದ ಸರಿಗಮಪ ಸಿಂಗಿಂಗ್​ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು ನಿಹಾಲ್​.

ಮಂಗಳೂರಿನ ಹೆಮ್ಮಯ ಕುಡಿ ನಿಹಾಲ್​ಗೆ ಆಡಿಷನ್‌ನಲ್ಲಿ ಹಾಡಿದಾಗ ಸಂಗೀತ ನಿರ್ದೇಶಕ ಹಿಮೇಶ್ ರೆಶಮಿಯಾ ಹಾಡಲು ಅವಕಾಶ ನೀಡ್ತೀನಿ ಎಂದು ಹೇಳಿದ್ದರು, ನಂತರ ಅವಕಾಶ ನೀಡಿದ್ದು ನಿಹಾಲ್​ ಅವರ ಬಾಲಿವುಡ್​ ಕೆರಿಯರ್​ ಶುರು ಮಾಡಲು ಮೈಲುಗಲ್ಲಾಯಿತು.

blank

ದೇಶ ವಿದೇಶಗಳ ವೀಕ್ಷಕರ ಮನ ಗೆದ್ದಿರುವ ಇಂಡಿಯನ್‌ ಐಡಲ್‌ 12ನೇ ಸೀಸನ್​ ಸಾಕಷ್ಟು ಕುತೂಹಲ ಮೂಡಿಸಿತ್ತು.. ಟಫ್​ ಫೈಟ್​ ಕೂಡಾ ಇತ್ತು. ಈ ಎಲ್ಲದರ ನಡುವೆ ನಿಹಾಲ್​ ಟಾಪ್​ ಸಿಕ್ಸ್​ನಲ್ಲಿದ್ದರು.​

ಇನ್ನೂ ಈ ಶೋ ಪ್ರತಿಭೆಗಳ ಪ್ಯಾಕೇಜ್​ನ್ನೆ ಹೊಂದಿತ್ತು..ಷಣ್ಮುಖಪ್ರೀಯಾ ಆರನೇ ಸ್ಥಾನ ಪಡೆದರು, ನಿಹಾಲ್​ ಐದನೇ ಸ್ಥಾನ ಪಡೆದ್ರು.ಇನ್ನೂ ನಾಲ್ಕು ಮತ್ತು ಮೂರನೇ ಸ್ಥಾನವನ್ನ ಕ್ರಮವಾಗಿ ಮಹ್ಮದ್​ದಾನೇಶ್, ಸಾಹಿಲಿ ಪಡೆದ್ರು…ಇನ್ನೂ ಅರುನಿತಾ ರನ್ನರ್​ ಅಪ್​ ಆದ್ರೆ.. ಉತ್ತರಖಾಂಡ್​ನ ಅದ್ಭುತ ಪ್ರತಿಭೆ ಪವನ್​ದೀಪ್​ ರಾಜನ್​ ಇಂಡಿಯನ್​ ಐಡಿಯಲ್​ ಸೀಸನ್​ ವಿನ್ನರ್​ ಆಗಿ ಹೊರ ಹೊಮ್ಮಿದ್ರು.

ದೇಶದ ಮೂಲೆ ಮೂಲೆಯಿಂದ ಬಂದಿದ್ದ ಘಟಾನುಘಟಿಗಳನ್ನ ಹಿಂದಿಕ್ಕಿ ನಿಹಾಲ್​ ಟಾಪ್​ ಫೈ ಸ್ಥಾನವನ್ನು ಅಲಂಕರಿಸಿದ್ದು ನಿಜಕ್ಕೂ ಗರ್ವ ಪಡುವ ವಿಷಯ. ಕನ್ನಡದ ಹಿರಿಮೆಯನ್ನ ರಾಷ್ಟ್ರಮಟ್ಟದಲ್ಲಿ ಹೆಚ್ಚಿಸುತ್ತಿರುವ ನಿಹಾಲ್ ತಾವ್ರೋಗೆ ಬಾಲಿವುಡ್​ ಅಂಗಳದಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ದೊರೆಯಲಿ ಅನ್ನೊದು ಎಲ್ಲರ ಆಶಯ.

Source: newsfirstlive.com Source link