T-20 World Cup: ಅನುಭವಿ ಆಟಗಾರರಿಗೆ ಕೊಕ್​ ನೀಡುತ್ತಾ ಟೀಮ್ ಇಂಡಿಯಾ ಸೆಲೆಕ್ಷನ್​ ಕಮಿಟಿ?

T-20 World Cup: ಅನುಭವಿ ಆಟಗಾರರಿಗೆ ಕೊಕ್​ ನೀಡುತ್ತಾ ಟೀಮ್ ಇಂಡಿಯಾ ಸೆಲೆಕ್ಷನ್​ ಕಮಿಟಿ?

ಟಿ20 ವಿಶ್ವಕಪ್​​​ನಲ್ಲಿ ಆಡುವ ಹತ್ತು ಆಟಗಾರರ ಹೆಸರು ಕನ್ಫರ್ಮ್​ ಆಗಿದೆ. ಆದರೆ ಉಳಿದ ಸ್ಥಾನಕ್ಕಾಗಿ, ಚಾನ್ಸ್​​​ ಪಡೆಯೋದಕ್ಕೆ ಆಟಗಾರರ ನಡುವೆ ಬಿಗ್​ ಫೈಟ್​ ಏರ್ಪಟ್ಟಿದೆ. ಯಾರು ಯಾವ ಸ್ಥಾನಕ್ಕಾಗಿ ಪೈಪೋಟಿ ನಡೆಸ್ತಿದ್ದಾರೆ ಬನ್ನಿ ನೋಡೋಣ..

ಟಿ20 ವಿಶ್ವಕಪ್​​​ಗೆ ಈಗಾಗಲೇ 10 ಆಟಗಾರರ ಹೆಸರು ಅಂತಿಮಗೊಂಡಿದೆ. ಆದ್ರೀಗ ಟೀಮ್ ಇಂಡಿಯಾಗೆ ದೊಡ್ಡ ಸವಾಲೊಂದು ಎದುರಾಗಿದೆ. ಯುಎಇನಲ್ಲಿ ನಡೆಯುವ ಚುಟುಕು ಸಮರಕ್ಕೆ ಉಳಿದ ಸ್ಥಾನಕ್ಕೆ, ಆಟಗಾರರನ್ನ ಹೇಗೆ ಆಯ್ಕೆ ಮಾಡಲಾಗುತ್ತೆ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ. ತಂಡಕ್ಕೆ ಬೇಕಿರೋದು 15 ಸದಸ್ಯರಷ್ಟೆ.! ಆದರೆ ಒಂದೊಂದು ಸ್ಥಾನಕ್ಕೆ ಕನಿಷ್ಠ ಮೂರರಿಂದ ನಾಲ್ವರು ಆಟಗಾರರು ಪೈಪೋಟಿ ನಡೆಸ್ತಿದ್ದಾರೆ.

blank

ಪೃಥ್ವಿ-ಧವನ್, ಅಯ್ಯರ್-ಕಿಶನ್ ನಡುವೆ ಟಫ್​ ಕಾಂಪಿಟೇಷನ್​.!
ರೋಹಿತ್​​ಗೆ ಜೋಡಿಯಾಗಿ KL ರಾಹುಲ್​​ ಕನ್ಫರ್ಮ್​ ಆಗಿದೆ. ಆದರೆ ಬ್ಯಾಕಪ್​​ ಓಪನರ್ ಸ್ಥಾನಕ್ಕಾಗಿ ಶಿಖರ್ ಧವನ್, ಪೃಥ್ವಿ ಶಾ ನಡುವೆ ರೇಸ್ ನಡೆಯಲಿದೆ. ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್​ ಅಯ್ಯರ್​ ಇಬ್ಬರಲ್ಲಿ ಯಾರು ನಂಬರ್​ ಫೋರ್​ ಸ್ಲಾಟ್​ನಲ್ಲಿ ಆಡ್ತಾರೆ..? ವಿಕೆಟ್​ ಕೀಪರ್​​ ಸ್ಥಾನಕ್ಕೆ ಪಂತ್​, ರಾಹುಲ್, ಇಶಾನ್ ಕಿಶನ್​, ಈ ತ್ರಿಮೂರ್ತಿಗಳಲ್ಲಿ ಯಾರು ಅನ್ನೋ ಪ್ರಶ್ನೆಗೆ, ಸೆಲೆಕ್ಟರ್ಸ್ ಉತ್ತರಿಸಬೇಕಿದೆ.

ಆಲ್​ರೌಂಡರ್​ ಕೋಟಾದಲ್ಲಿ ಕೃನಾಲ್- ಸುಂದರ್​​ಗೆ ಫೈಟ್​​.!
ಆಲ್​ರೌಂಡರ್​​ ಕೋಟಾದಲ್ಲಿ ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ ಹೆಸರು ರೇಸ್​ನ ಮುಂಚೂಣಿಯಲ್ಲಿದ್ದಾರೆ. ಆದ್ರೆ ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್​​​​​​​​​​ ಸಹ ಕಾಂಪಿಟೇಶನ್​ನಲ್ಲಿ ಕಾಣಿಸಿಕೊಂಡಿದ್ದಾರೆ.

blank

​​ಸ್ಪೆಷಲಿಸ್ಟ್ ಸ್ಪಿನ್ನರ್​​ಗಳ ದಂಡು-ಯಾರಿಗೆ ಸಿಗುತ್ತೆ ಲಕ್​​.?
ತಂಡದಲ್ಲಿ ಸ್ಪಿನ್ನರ್​ಗಳ ದಂಡು ಹೆಚ್ಚಾಗಿದ್ದು, ಸೆಲೆಕ್ಟರ್ಸ್​​​ಗೆ ಮತ್ತಷ್ಟು ಗೊಂದಲ ಹೆಚ್ಚಿಸಿದೆ. ಕುಲ್ದೀಪ್​ ಯಾದವ್​, ಯಜುವೇಂದ್ರ ಚಹಲ್​, ರಾಹುಲ್ ಚಹರ್​, ವರುಣ್​ ಚಕ್ರವರ್ತಿ ಜೊತೆಗೆ ಸ್ಪಿನ್​​​​ ಆಲ್​ರೌಂಡರ್ಸ್​ ಕೂಡ ಇದ್ದಾರೆ. ಹಾಗಾಗಿ ಚಹರ್, ವರುಣ್, ಚಹಲ್, ಕುಲ್ದೀಪ್​​​​​ಗೆ ಅಗ್ನಿ ಪರೀಕ್ಷೆಯಾಗಿದೆ.

​​ಅನುಭವಿ ವೇಗಿ ಭುವಿಯೇ ಪೈಪೋಟಿ ರೇಸ್​​​ನಲ್ಲಿ..!
ವೈಟ್ ಬಾಲ್​​​ನಲ್ಲಿ ಭುವಿ ಒಬ್ಬ ಅದ್ಭುತ ಬೌಲರ್​. ಆದರೆ ಇತ್ತೀಚಿಗೆ ಭುವಿ ಫಾರ್ಮ್, ಕಳವಳ ಹುಟ್ಟಿಸಿದೆ. IPLಗೆ ಅಲಭ್ಯರಾಗಿದ್ದ ಭವಿ, ಲಂಕಾ ಸರಣಿಯಲ್ಲೂ ಪರಿಣಾಮಕಾರಿ ಬೌಲಿಂಗ್​ ಮಾಡಲಿಲ್ಲ. ಆದ್ರೂ ಭುವಿ ಮೇಲೆ ಕ್ಯಾಪ್ಟನ್​ ವಿರಾಟ್​ ಕೊಹ್ಲಿಗೆ ಹೆಚ್ಚು ಒಲವಿದೆ. ಇತ್ತ ದೀಪಕ್​ ಚಹರ್ ಕೂಡ ಬ್ಯಾಟಿಂಗ್​ ಬೌಲಿಂಗ್​​ನಲ್ಲಿ ಮಿಂಚಿದ್ದಾರೆ. ನವದೀಪ್ ಸೈನಿ, ಪ್ರಸಿದ್ಧ್​ ಕೃಷ್ಣ ಕೂಡ ರೇಸ್​​​​ನಲ್ಲಿದ್ದಾರೆ. ಒಟ್ನಲ್ಲಿ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಯಾರಿಗೆ ಚಾನ್ಸ್​ ನೀಡುತ್ತೆ ಅನ್ನೋ ಗೊಂದಲಕ್ಕೆ, ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Source: newsfirstlive.com Source link