ಅಫ್ಘಾನ್​​ನಲ್ಲಿದ್ದ ಭಾರತೀಯರಿಗೆ ದೇವರಂತೆ ಕಂಡ್ರು ಜೈಶಂಕರ್, ದೋವಲ್ -ಮಿಡ್​ನೈಟ್​ ಆಪರೇಷನ್​​ ಕಹಾನಿ

ಅಫ್ಘಾನ್​​ನಲ್ಲಿದ್ದ ಭಾರತೀಯರಿಗೆ ದೇವರಂತೆ ಕಂಡ್ರು ಜೈಶಂಕರ್, ದೋವಲ್ -ಮಿಡ್​ನೈಟ್​ ಆಪರೇಷನ್​​ ಕಹಾನಿ

ಕ್ಷಣ ಕ್ಷಣಕ್ಕೂ ಅಫ್ಘಾನಿಸ್ತಾನ ಘನಘೋರ ಸ್ಥಿತಿ ತಲುಪುತ್ತಿದೆ. ಜನರು ಭಯಭೀತರಾಗಿದ್ದು ಅಪಾಯದಲ್ಲೇ ಬದುಕುತ್ತಿದ್ದಾರೆ. ಈ ನಡುವೆ ಅಫ್ಘಾನ್​​ನಲ್ಲಿ ಸಿಲುಕಿದ್ದ 150 ಭಾರತೀಯರನ್ನ ತಡರಾತ್ರಿ ಮೆಗಾ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ. 150 ಭಾರತೀಯರ ರಕ್ಷಣೆ ಮಾಡಿದ ಆ ಮಿಡ್​ನೈಟ್ ಆಪರೇಷನ್​ ಕುರಿತ ಸ್ಪೆಷಲ್ ವರದಿ ಇಲ್ಲಿದೆ.

blank

ಅಫ್ಘಾನ್ ತಾಲಿಬಾನ್​ ತೆಕ್ಕೆಗೆ ಜಾರುತ್ತಿದ್ದಂಗೆ ಅಲ್ಲಿಯ ಅಮಾಯಕ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಒಂದು ಕಡೆ ಜನರು ತಾಲಿಬಾನ್​ಗಳ ಉಪಟಳದಿಂದ ನರಳುತ್ತಿದ್ರೆ, ಮತ್ತೊಂದು ಕಡೆ ತಾಲಿಬಾನ್​ಗಳು ಮೋಜು ಮಸ್ತಿ ಮಾಡಿ ರಕ್ಕಸ ನಗು ಬೀರ್ತಿದ್ದಾರೆ. ಜೈಲಿನಲ್ಲಿದ್ದ ಉಗ್ರರು ಹೊರಗಡೆ ಬಂದಿದ್ದು, ಸ್ವಚ್ಛಂದವಾಗಿ ಇರಬೇಕಿದ್ದ ಮಹಿಳೆಯರು ಮತ್ತೆ ಮನೆಯೊಳಗಡೆ ಬಂಧಿಯಾಗಿದ್ದಾರೆ. ತಾಲಿಬಾನ್ ಆಕ್ರಮಣ ಹೆಚ್ಚಾಗುತ್ತಿದ್ದಂಗೆ ಅಮಾಯಕರ ರೋಧನೆ ಮುಗಿಲು ಮುಟ್ಟಿದೆ. ಎರಡುವರೆ ಲಕ್ಷದಷ್ಟು ಸೈನಿಕರನ್ನ ಹೊಂದಿರುವ ಅಫ್ಘಾನ್ ಸೇನೆಯೇ ತಾಲಿಬಾನ್​ಗಳು ಎದುರು ಮಂಡಿವೂರಿದ್ರೆ, ಅಲ್ಲಿಯ ಅಧ್ಯಕ್ಷರೇ ತಾಲಿಬಾನ್​ಗಳೇ ಹೆದುರಿ ದೇಶ ಬಿಟ್ಟ ಓಡಿ ಹೋಗಿದ್ದಾರೆ. ಅಫ್ಘಾನ್​ನಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಂ ಸಮುದಾಯದವರಿಗೆ ರಕ್ಷಣೆ ಇಲ್ಲ ಅಂದ್ಮೇಲೆ, ಇತರೆ ಅಲ್ಪ ಸಂಖ್ಯಾತರ ಪರಿಸ್ಥಿತಿ ಹೇಗಿರ್ಬೋದು ಅನ್ನೋದನ್ನ ಕಲ್ಪಿಸಲು ಕೂಡ ಅಸಾಧ್ಯವಾಗಿದೆ. ತಾಲಿಬಾನ್​ಗಳ ಆಕ್ರಮಣದ ನೆರಳಲ್ಲಿರೋ ಅಫ್ಘಾನ್​ನಲ್ಲಿ ನೂರಾರು ಭಾರತೀಯರು ಸಂಕಷ್ಟ ಸಿಲುಕಿದ್ರು. ಆದ್ರೆ ಕೇಂದ್ರ ಸರ್ಕಾರದ ಚಾಣಾಕ್ಷ ನಡೆಯಿಂದ ಅಫ್ಘಾನ್​ನಲ್ಲಿದ್ದ ಭಾರತೀಯರನ್ನ ಹಾಲಿವುಡ್​ ಸಿನಿಮಾ ದೃಶ್ಯಗಳನ್ನ ಮೀರಿಸುವ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ.

ಅಫ್ಘಾನ್​ 150 ಭಾರತೀಯರ ರೋಚಕ ಏರ್​ ಲಿಫ್ಟ್​
ಅಜಿತ್ ಧೋವಲ್- ಜೈ ಶಂಕರ್ ಮಾಸ್ಟರ್ ಪ್ಲಾನ್
ನಡೆದೇ ಹೋಯ್ತು ಮಿಡ್ ನೈಟ್ ಮೆಗಾ ಆಪರೇಷನ್

ನಿಜಕ್ಕೂ ಇದು ರೋಚಕ ಕಾರ್ಯಾಚರಣೆ. ತಾಲಿಬಾನ್​ಗಳ ಕಣ್ತಪ್ಪಿಸಿ ಅಫ್ಘಾನ್​ನಲ್ಲಿದ್ದ ಭಾರತೀಯ ರಕ್ಷಣೆ ಮಾಡಿದ ಮೆಗಾ ಆಪರೇಷನ್​. ತಾಲಿಬಾನ್​ ಕೋಟೆಗೆ ನುಗ್ಗಿ ಅಲ್ಲಿದ್ದ ಭಾರತೀಯರನ್ನ ಯಶಸ್ವಿಯಾಗಿ ಕರೆ ತಂದಿರುವ ರಣ ರೋಚಕ ಕಾರ್ಯಾಚರಣೆ. ಇಡೀ ಮೆಗಾ ಆಪರೇಷನ್ ಮಾಸ್ಟರ್ ಮೈಂಡ್ ಆಗಿದ್ದವರು ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್.
ಎಸ್​​.ಜೈ ಶಂಕರ್ ಮತ್ತು ಅಜಿತ್ ದೋವಲ್ ಮಾಡಿರುವ ಮಿಡ್ ನೈಟ್ ಆಪರೇಷನ್​ನಿಂದ ಅಫ್ಘಾನ್​ ಸಿಕ್ಕಿಹಾಕಿಕೊಂಡಿದ್ದ 150 ಭಾರತೀಯರು ಯಶಸ್ವಿಯಾಗಿ ತವರಿಗೆ ಮರಳಿದ್ದಾರೆ. ಇಡೀ ಭಾರತವೇ ಗಾಢ ನಿದ್ರೆಯಲ್ಲಿದ್ದ ಹೊತ್ತಲ್ಲೇ ಇವರು ಮಾಡಿರುವ ಮಿಡ್​ ನೈಟ್​ ಆಪರೇಷನ್​ಗೆ ನಿಜಕ್ಕೂ ಶಭಾಶ್ ಹೇಳಲೇ ಬೇಕು.

blank

ಮಿಡ್​ ನೈಟ್ ಅಪರೇಷನ್ ಹೇಗಿತ್ತು?
ಯಾವಾಗ ಅಫ್ಘಾನ್ ತಾಲಿಬಾನ್​ ಉಗ್ರರ ವಶವಾಯ್ತೋ ಅಲ್ಲಿಯ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿತ್ತು. ಇಡೀ ಅಫ್ಘಾನ್​ ಅಲ್ಲೋಲ ಕಲ್ಲೋಲಗೊಂಡಿದೆ. ಅಫ್ಘಾನ್​ನಲ್ಲಿ ತಾಲಿಬಾನ್​ ರಕ್ಕಸತನದಿಂದ ನೂರಾರು ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ರು. ಅಫ್ಘಾನ್​ ರಾಜಧಾನಿ ಕಾಬೂಲ್​ನಲ್ಲಿ ಸಿಕ್ಕಿ ಹಾಕಿ ಕೊಂಡಿದ್ದ ರಾಯಭಾರ ಸಿಬ್ಬಂದಿ, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಯನ್ನ ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಸೋಮವಾರವೇ ಪ್ಲಾನ್ ಹಾಕೊಂಡಿತ್ತು. ಅದ್ಕೆಂದೆ ಸಿ-17 ವಿಮಾನವನ್ನ ಕೂಡ ಸಜ್ಜು ಮಾಡಲಾಗಿತ್ತು. ಅದರಂತೆ ಭಾರತದ ಭಾರತದ ಗ್ಲೋಬ್​ ಮಾಸ್ಟರ್ ಸಿ-17 ಹೆಸರಿನ ಏರ್​​ಫೋರ್ಸ್​ ಪ್ಲೇನ್ ಭಾರತೀಯರನ್ನ ಕರೆತರಲು ಅಫ್ಘಾನ್ ರಾಜಧಾನಿಗೆ ಹಾರಿತ್ತು. ಎಲ್ಲವು ಅಂದುಕೊಂಡಂತೆ ನಡೆದಿದ್ರೆ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಕಾಬೂಲ್​ನಿಂದ ಹೊರಡಬೇಕಿತ್ತು. ಆದ್ರೆ ಇದೇ ವೇಳೆ ಮತ್ತೊಂದು ಆಘಾತ ಎದುರಾಗಿದೆ. ಹೌದು, ಕಾಬೂಲ್​ನಲ್ಲಿ ಅದಾಗ್ಲೇ ತಾಲಿಬಾನ್​ಗಳು ಅಟ್ಟಹಾಸ ಹೆಚ್ಚಾಗಿತ್ತು. ಇದು ವೇಳೇ ಅಫ್ಘಾನ್​ನಲ್ಲಿ ವಿವಿಧ ಕಡೆಯಲ್ಲಿದ್ದ ಭಾರತೀಯರು ಕಾಬೂಲ್​ ಏರ್​ಪೋರ್ಟ್​ಗೆ ಬಂದು ಸೇರುವುದು ಅಷ್ಟು ಸುಲಭದ ಮಾತಾಗಿರ್ಲಿಲ್ಲ. 150 ಭಾರತೀಯರಿದ್ದರು ಸೋಮವಾರ ರಾತ್ರಿ ಏರ್​ಪೋರ್ಟ್​ಗೆ ಬಂದಿದ್ದು ಕೇವಲ 24 ಭಾರತೀಯರು ಮಾತ್ರ. ಭಾರತೀಯರಿದ್ದ ಭದ್ರತಾ ವಾಹನಗಳನ್ನ ತಾಲಿಬಾನ್​ ಮರಳಿ ಕಳಿಸಿದ್ರು. ಒಂದು ಕಡೆ ತಾಲಿಬಾನ್​ಗಳ ಉಪಟಳ ಹೆಚ್ಚಾಗುತ್ತಿದ್ದಂಗೆ ಮತ್ತೊಂದು ಕಡೆ ಯಾವುದೇ ಕಾರಣಕ್ಕೆ ಫ್ಲೈಟ್​ ಟೇಕ್​ ಆಫ್ ಮಾಡದಂತೆ ಅಮೆರಿಕ ಒತ್ತಡ ಹೇರಲು ಶುರುಮಾಡಿತ್ತು.ಪಾರ್ಕಿಂಗ್​ sಮಸ್ಯೆಯಿಂದ ಸಿ-17 ಗ್ಲೋಬ್​​ಮಾಸ್ಟರ್ ಟೇಕ್​ ಆಫ್​ ಆಗಿತ್ತು. ಅಮೆರಿಕದ ಒತ್ತಡ ತಾಲಿಬಾನ್​ಗಳ ಉಪಟಳದ ನಡುವೆ ಕಾಬೂಲ್​ನಿಂದ ನೇರವಾಗಿ ತಜಕಿಸ್ಥಾನದಲ್ಲಿರುವ ಭಾರತದ ಸೀಕ್ರೇಟ್​ ಏರ್ಪೋಸ್ ಡಿಶಾಂಬೆಯಲ್ಲಿ ಸಿ-17 ಗ್ಲೋಬಲ್ ಮಾಸ್ಟರನ್ನ ಲ್ಯಾಂಡ್ ಮಾಡಲಾಯಿತು.

blank

ಹೀಗೆ ಕಾಬೂಲ್​​ನಿಂದ ಹೊರಟ ವಿಮಾನ ನೇರವಾಗಿ ತಜಕಿಸ್ತಾನದ ಭಾರತದ ಭಾರತದ ಸೀಕ್ರೇಟ್​ ಏರ್ಪೋಸ್ ಡಿಶಾಂಬೆಯಲ್ಲಿ ಸಿ-17 ಗ್ಲೋಬಲ್ ಮಾಸ್ಟರನ್ನ ಬಂದು ತಲುಪುತ್ತಿದ್ದಂಗೆ ಕೇಂದ್ರ ಸರ್ಕಾರ ಕಾರ್ಯ ಪ್ರವೃತ್ತವಾಯಿತು. ಅಫ್ಘಾನ್​ನಲ್ಲಿರುವ ಭಾರತೀಯರ ರಕ್ಷಣಾ ಕಾರ್ಯ ಮತ್ತಷ್ಟು ಚುರುಕು ಪಡೆದುಕೊಂಡಿತು. ಕಾಬೂಲ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಮೆರಿಕದ ಸೇನೆಯ ವಶದಲ್ಲಿರುವ ಕಾರಣ, ಅಮೆರಿಕದ ಅನುಮತಿ ಇಲ್ಲದೆ ಭಾರತದ ವಿಮಾನವನ್ನ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇಳಿಸುವಂತಿರಲಿಲ್ಲ.

blank

ಇದ್ರಿಂದ ಅಫ್ಘಾನ್​ನಲ್ಲಿದ್ದ ಭಾರತೀಯರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತ್ತಾಯಿತು. ಆದ್ರೆ ಇದೇ ವೇಳೆ ಮಧ್ಯ ಪ್ರವೇಶ ಮಾಡಿದ ಭಾರತದ ವಿದೇಶಾಂಗ ಸಚಿವ ಜೈ ಶಂಕರ್,ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ದೇವರ ರೂಪದಲ್ಲಿ ಪ್ರತ್ಯಕ್ಷರಾಗಿ ಸಂಕಷ್ಟದಲ್ಲಿದ್ದ ಭಾರತೀಯರ ರಕ್ಷಣೆಗೆ ಹೆಗಲು ಕೊಟ್ಟರು. ಭಾರತದ ವಿದೇಶಾಂಗ ಸಚಿವ ಜೈ ಶಂಕರ್, ಅಮೆರಿಕದ ವಿದೇಶಾಂಗ ಸಚಿವ ಆ್ಯಂಟಿನಿ ಬ್ಲಿಂಕನ್ ಜೊತೆ ಈ ಕುರಿತು ಮಾತು ಕತೆ ನಡೆಸಿದ್ರು. ಇದೇ ವೇಳೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೆರಿಕದ ರಾಷ್ಟ್ರೀಯ ಭದ್ರತೆಯ ಸಲಹೆಗಾರ ಜಾಕ್ ಸುಲ್ಲಿವಾನ್ ಜೊತೆ ಚರ್ಚೆ ನಡೆಸಿದ್ರು. ಉಭಯ ನಾಯಕರ ಮಾತುಕತೆಯ ಫಲಶ್ರುತಿಯ ಫಲವಾಗಿ ಅಮೆರಿಕವು ಸೋಮವಾರ ಮಧ್ಯರಾತ್ರಿ ಅಫ್ಘಾನ್​ನಲ್ಲಿ ಭಾರತದ ವಿಮಾನ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು.

ಇದನ್ನೂ ಓದಿ: ಆಫ್ಘಾನ್​​ನಿಂದ ತಾಯ್ನಾಡಿಗೆ 120 ಮಂದಿ ಭಾರತೀಯರು- ರಣಾಂಗಣದಂತಾದ ಅಫ್ಘಾನಿಸ್ತಾನದಿಂದ ರಕ್ಷಣೆಯೇ ರೋಚಕ

blank

ರಾತ್ರಿ ಎಲ್ಲಾ ಕಾರ್ಯಾಚರಣೆ ನಡೆಸಿದ ಪರಿಣಾಮ ಎಲ್ಲಾ ಭಾರತೀಯರು ಸುರಕ್ಷಿತವಾಗಿ ಕಾಬೂಲ್​ ಏರ್​​ಫೋರ್ಸ್​ ಬಂದು ತಲುಪಿತು. ಮುಂಜಾಗೃತವಾಗಿ ಭಾರತೀಯ ಸಿಬ್ಬಂದಿಯನ್ನ ಕಾಬೂಲ್​​ನಲ್ಲಿ ಬಿಗಿ ಭದ್ರತೆಯಲ್ಲಿರುವ ಅಮೆರಿಕದ ಭದ್ರತಾ ವಲಯಕ್ಕೆ ಶಿಫ್ಟ್​ ಮಾಡಲಾಗಿತ್ತು. ಸೋಮವಾರ ತಡರಾತ್ರಿ ಮೂರು ಗಂಟೆಗೆ ಭಾರತದ ವಿಮಾನಕ್ಕೆ ಸಂಚಾರ ನಡೆಸಲು ಅನುಮತಿ ಸಿಗ್ತದ್ದಂಗೆ ಕಾಬೂಲ್ ಅಂತಾರಾಷ್ಟ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಸಿ-17 ವಿಮಾನ, ಎಲ್ಲಾ ಭಾರತೀಯರನ್ನ ಹತ್ತಿಸಿಕೊಂಡು ಮಂಗಳವಾರ ಮಧ್ಯಾಹ್ನ ಗುಜರಾತ್​ನ ಜಾಮ್​ನಗರಕ್ಕೆ ಬಂದಿಳಿತು. ಅಲ್ಲಿ ಇಂಧನ ಬರ್ತಿ ಮಾಡಿಸಿಕೊಂಡು ಹೊರಟ ವಿಮಾನ ಸಂಜೆ 5 ಗಂಟೆಯ ವೇಳೆಗೆ ದೆಹಲಿ ತಲುಪಿತು. ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಜನರು ಇಳಿಯುತ್ತಿದ್ದಂಗೆ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಭಾರತೀಯರನ್ನ ಕರೆತರಲು ಎದುರಾಗಿತ್ತು 2 ಪ್ರಮುಖ ಸವಾಲು
ಅಮೆರಿಕ ಅನುಮತಿ ನೀಡಿದ್ರೂ, ಎದುರಾಗಿತ್ತು ತಾಲಿಬಾನ್​ಗಳ ಭಯ
ತಾಲಿಬಾನ್​ಗಳ ಕಣ್ತಪ್ಪಿಸಿ ರಕ್ಷಣೆ ಮಾಡಿದ್ದೆ ರಣ ರೋಚಕ..!

ಹೌದು.. ಅಫ್ಘಾನ್​ ನಲ್ಲಿದ್ದ ಭಾರತೀಯರನ್ನ ಕರೆತರುವ ಪ್ರಕ್ರಿಯೇ ನಿಜಕ್ಕೂ ಅದು ಒಂದು ರೀತಿಯಲ್ಲಿ ತಂತಿ ಮೇಲಿನ ನಡಿಗೇನೆ ಆಗಿತ್ತು. ಒಂದು ಕಡೆ ಅಮೆರಿಕದ ಅನುಮತಿಗಾಗಿ ಭಾರತ ಕಾಯ್ತಿದ್ರೆ, ಮತ್ತೊಂದು ಕಡೆಯಲ್ಲಿ ತಾಲಿಬಾನ್​ಗಳ ಕೆಟ್ಟ ಕಣ್ಣಿನಿಂದ ತಪ್ಪಿಸಿಕೊಂಡು ಬರೋದು ಅಷ್ಟು ಸುಲಭದ ಮಾತಾಗಿರ್ಲಿಲ್ಲ. ಯಾಕಂದ್ರೆ ಎರಡು ದಿನಗಳ ಹಿಂದೆಯಷ್ಟೇ ಹಲವು ಭಾರತೀಯರ ವಸ್ತುಗಳನ್ನ ಈ ತಾಲಿಬಾನ್​ಗಳು ಕಸಿದುಕೊಂಡಿದ್ದರು. ಈ ಭಯ ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡುವಂತೆ ಮಾಡಿತ್ತು.
ಆದರೆ ಜೈ ಶಂಕರ್ ಹಾಗೂ ಅಜಿತ್ ದೋವಲ್ ಚಾಣಾಕ್ಷತದನ ನಡೆಯಿಂದ ಸಂಕಷ್ಟದಲ್ಲಿದ್ದ ಭಾರತೀಯವರು ನೆಮ್ಮದಿಯಾಗಿ ಭಾರತಕ್ಕೆ ಬಂದಿಳಿದಿದ್ದಾರೆ. ವಿದೇಶಾಂಗ ಸಚಿವ ಜೈ ಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡೆಸಿ ಮಿಡ್​ ನೈಟ್​ ಮೆಗಾ ಆಪರೇಷನ್ ತಾಲಿಬಾನ್​ಗಳ ಕಪಿಮುಷ್ಠಿಯಿಂದ ಭಾರತೀಯರನ್ನ ರಕ್ಷಣೇ ಮಾಡಲು ಸಾಧ್ಯವಾಗಿದೆ. ತಾಲಿಬಾನ್​ಗಳ ರಕ್ಕಸ ಕಣ್ಣಿನಿಂದ ತಪ್ಪಿಸಿಕೊಳ್ಳಲು, ಮೊದಲು ಅಲ್ಲಿದ್ದ ಎಲ್ಲಾ ಭಾರತೀಯರನ್ನ ಅಮೆರಿಕದ ಭದ್ರತಾ ವಲಯ ಪ್ರವೇಶಿಸುವಂತೆ ಪ್ಲಾನ್ ಮಾಡಲಾಗಿದೆ. ಇದು ಮೆಗಾ ಕಾರ್ಯಾಚರಣೆಗೆ ಸಿಕ್ಕಿದ ಮೊದಲ ಸಕ್ಸಸ್. ಅಮೆರಿಕ ಗ್ರೀನ್ ಸಿಗ್ನಲ್ ಕೊಡ್ತಿದ್ದಂಗೆ ತಾಲಿಬಾನ್​ಗಳ ಕೋಟೆಗೆ ನುಗ್ಗಿದ್ದ ಸಿ-17 ವಿಮಾನ ತಾಲಿಬಾನ್​ ಗಳ ಸವಾಲನ್ನ ಮೆಟ್ಟಿ ನಿಂತು ಅಲ್ಲಿದ್ದ ಭಾರತೀಯರನ್ನ ಸುರಕ್ಷತೆಯಿಂದ ಭಾರತಕ್ಕೆ ಮಡಿಲಿಗೆ ಕರೆ ತಂದಿದೆ.

ಇದನ್ನೂ ಓದಿ: ಸಂಸತ್​​ ಭವನದಿಂದ ಸಲ್ಮಾ ಅಣೆಕಟ್ಟುವರೆಗೆ; ಅಫ್ಘಾನಿಸ್ತಾನಕ್ಕೆ ಭಾರತ ನೀಡಿದ ಕೊಡುಗೆ!

blank

ಅಫ್ಘಾನ್​ನಲ್ಲಿ ಸಂಕಷ್ಟ ಸಿಲುಕಿರುವ ಕನ್ನಡಿಗರು
ಅಫ್ಘಾನಿಸ್ತಾನದಲ್ಲಿದ್ದ 150 ಭಾರತೀಯರನ್ನ ಸುರಕ್ಷಿತವಾಗಿ ಕರೆ ತಂದ ಖುಷಿಯಲ್ಲಿದ್ದ ಹೊತ್ತಲ್ಲೇ ಮತ್ತೊಂದು ಆತಂಕಕಾರಿ ಸುದ್ದಿ ಹೊರ ಬಂದಿದೆ. ಮಾಜಿ ಸಚಿವ ಯುಟಿ ಖಾದರ್ ಅಫ್ಘಾನಿಸ್ತಾನದಲ್ಲಿ ಕನ್ನಡಿಗರು ಸಂಕಷ್ಟದಲ್ಲಿರುದರ ಕುರಿತು ಮಾಹಿತಿ ನೀಡಿದ್ದಾರೆ. “ಅಫ್ಘಾನಿಸ್ತಾನದಲ್ಲಿ ಹಲವು ಕನ್ನಡಿಗರು ತೊಂದರೆಗೆ ಒಳಗಾಗಿದ್ದಾರೆ. ವಿವಿಧ ಕೆಲಸಗಳಿಗೆ ಅಫ್ಘಾನ್​ಗೆ ತೆರಳಿದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯ ಜನರು ಅಲ್ಲಿ ಸಂಕಷ್ಠಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ನೋಡೆಲ್​ ಅಧಿಕಾರಿಯನ್ನ ನೇಮಿಸಿಕೊಳ್ಳುವ ಮೂಲಕ ಕನ್ನಡಿಗರನ್ನ ಕರೆತರುವ ಪ್ರುಯತ್ನ ಮಾಡ್ಬೇಕೆಂದು ಮನವಿ ಮಾಡಿದ್ದಾರೆ.
ಯುಟಿ ಖಾದರ್, ಮಾಜಿ ಸಚಿವ

blankಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಅರಾಜಕತೆ ಇದೀಗ ಕನ್ನಡಿಗರನ್ನ ಕೂಡ ಆತಂಕಕ್ಕೆ ಸಿಲುಕಿಸಿದೆ. ಅಫ್ಘಾನಿಸ್ತಾನ ಕ್ಷಣ ಕ್ಷಣಕ್ಕೂ ಘನಘೋರ ಪರಿಸ್ಥಿತಿಯನ್ನ ತಲುಪುತ್ತಿತ್ತು, ಜನರು ಭಯದಲ್ಲೇ ಬದುಕುತ್ತಿದ್ದಾರೆ. ಜನರು ಬದುಕಿದ್ರೆ ಸಾಕು ಎಂದು ಹುಟ್ಟಿದ ಊರನ್ನ ಬಿಟ್ಟು ಬರೀಗೈಯಲ್ಲಿ ಹೊರಟು ನಿಂತ್ತಿದ್ದಾರೆ. ಮುಂದೇ ಅಫ್ಘಾನ್​ನಲ್ಲಿ ಇನ್ನೇನು ಡೆವಲಪ್​ಮೆಂಟ್ಸ್​​ಗಳಾಗುತ್ತೋ ಕಾದು ನೋಡ ಬೇಕಾಗಿದೆ. ಒಟ್ಟಿನಲ್ಲಿ ಅಫ್ಘಾನಿಸ್ತಾನದಲ್ಲಿ ಯಾರದ್ದೋ ಅಧಿಕಾರ ದುರಾಸೆಗೆ ಇನ್ಯಾರೋ ಬಲಿಪಶುವಾಗುತ್ತಿದ್ದಾರೆ. ನಿಜಕ್ಕೂ ಇದು ದೊಡ್ಡ ದುರಂತವೇ ಸರಿ. 150 ಜನರನ್ನ ರಕ್ಷಣೆ ಮಾಡಿದ್ದ ಖುಷಿಯಲ್ಲಿದ್ದ ಸರ್ಕಾರಕ್ಕೆ ಇದೀಗ ಮತ್ತೊಂದು ಸವಾಲು ಎದುರಾಗಿದೆ. ಕೂಡಲೇ ಸರ್ಕಾರ ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರ ರಕ್ಷಣೆಗೆ ಮುಂದೆ ಬರ್ಬೇಕಿದೆ. ಅಫ್ಘಾನಿಸ್ತಾದಲ್ಲಿರುವ ಕನ್ನಡಿಗರ ರಕ್ಷಣಾ ಕಾರ್ಯ ತ್ವರಿತ ಗತಿಯಲ್ಲಿ ಸಾಗಲಿ ಅನ್ನೋದೆ ಎಲ್ಲರ ಆಶಯ.

ಇದನ್ನೂ ಓದಿ: ‘ಅಫ್ಘಾನ್​ನಲ್ಲಿ ಇನ್ನು 1,650 ಜನ ಭಾರತೀಯರಿದ್ದಾರೆ’- ಸಚಿವ ಎಸ್​. ಜೈಶಂಕರ್​

Source: newsfirstlive.com Source link