ಮಿನಿ ಬಿಗ್​ ಬಾಸ್​ನಲ್ಲಿ ಫನ್ ಮಾತ್ರವಲ್ಲ, ಟಾಸ್ಕ್​ಗೂ ಸೈ ಎನ್ನುತ್ತಿದ್ದಾರೆ ಸ್ಟಾರ್ಸ್​..!

ಮಿನಿ ಬಿಗ್​ ಬಾಸ್​ನಲ್ಲಿ ಫನ್ ಮಾತ್ರವಲ್ಲ, ಟಾಸ್ಕ್​ಗೂ ಸೈ ಎನ್ನುತ್ತಿದ್ದಾರೆ ಸ್ಟಾರ್ಸ್​..!

ಬಿಗ್ ಬಾಸ್ ಕನ್ನಡ ಮಿನಿ ಸೀಸನ್​ ಸಾಕಷ್ಟು ಕುತೂಹಲ ಮೂಡಿಸುತ್ತಿದ್ದು, ಹಲವು ಬೆಳವಣಿಗೆಗೆ ಕಾರಣವಾಗಿದೆ. ಕಂಫರ್ಟ್ ಝೋನ್ ಬಿಟ್ಟು ಗೊತ್ತಿಲ್ಲದವರ ಜೊತೆ ಹೊಂದ್ಕೊಂಡು ಹೋಗೋದು ಅಷ್ಟು ಸುಲಭವಲ್ಲ. ಬಿಗ್ ಮನೆಯಲ್ಲಿ ಇರೋದು ಅಂದ್ರೆ ತಮಾಷೆಯ ಮಾತೆಯಲ್ಲ.

ಕೇವಲ ಒಂದು ವಾರಕ್ಕೆ ಸೀಮಿತವಾಗಿರುವ ಮಿನಿ ಬಿಗ್ ಬಾಸ್​​ನಲ್ಲಿ ಈಗಾಗಲೇ ಸಣ್ಣ ಅಸಮಾಧಾನದ ಗಾಳಿ ಸುಳಿಯಲು ಶುರು ಮಾಡಿದ್ದು, ಟ್ರೋಫಿ ಇಲ್ಲ.. ಆದ್ರೆ ಬೆಸ್ಟ್ ಎನಸಿಕೊಳ್ಳುವ ಹಠ ಇದೆ.. ಜನರ ವೋಟ್ ಪಡೆಯಲು ಹರಸಾಹಸ ಪಡಬೇಕಿಲ್ಲ, ಆದ್ರೆ ಜನರ ಪ್ರೀತಿ ಗೆಲ್ಲಲು ಸಿಕ್ಕ ಅವಕಾಶ ಮಿಸ್ ಮಾಡಿಕೊಳ್ಳಲು ಯಾರಿಗೂ ಮನಸ್ಸಿಲ್ಲ.. ಇದಿಷ್ಟು ಮಿನಿ ಬಿಗ್ ಬಾಸ್​ನಲ್ಲಿ ಕಂಡ ದೃಶ್ಯಗಳು. ಬೆಸ್ಟ್​ ಆಟಗಾರ ಪ್ರಶಸ್ತಿ ಪಡೆಯಲು ಬಿಗ್​ ಬಾಸ್​ ಸರಣಿ ಅಟಗಳನ್ನು ನೀಡುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿ 120 ದಿನಗಳಾದ್ರೆ ಏನು 6 ದಿನಗಳಾದ್ರೆಯೂ ಅಷ್ಟೆ ಆಟ ಆಟಾನೇ ಅನ್ನೋದನ್ನ ಪ್ರೂವ್ ಮಾಡ್ತಿದ್ದಾರೆ ಸೀರಿಯಲ್ ತಾರೆಯರು.

blank

ಅಡುಗೆ ಟಾಸ್ಕ್​ನಲ್ಲಿ ಮಿಥುನ ರಾಶಿ ಸೀರಿಯಲ್​ನ ಲೀಡ್​ ಆ್ಯಕ್ಟರ್ಸ್​ ವೈಷ್ಣವಿ ಅವಾಂತರ ಮಾಡಿಕೊಂಡರು. ಅಡುಗೆ ಮಾಡಲು ಸರಿಯಾದ ಅಳತೆ ಸಿಗದೆ ಸಾಕಷ್ಟು ಆಹಾರ ಹಾಳಾಯಿತು. ಇದು ಬಿಗ್​ ಮನೆಯ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿತ್ತು. ಇನ್ನೂ ಇದೇ ಅಡುಗೆ ಟಾಸ್ಕ್​ನಲ್ಲಿ ಮಧ್ಯಾಹ್ನದ ಅಡುಗೆಯನ್ನು ಹೂ ಮಳೆ ನಾಯಕಿ ಚಂದನಾ ಅನಂತಕೃಷ್ಣ ಊಟವನ್ನು ಸಿದ್ಧಪಡಿಸುವ ಕೆಲಸವನ್ನು ಒಪ್ಪಿಕೊಂಡು ಕ್ಯಾರೆಟ್ ಹಲ್ವಾ ಮತ್ತು ಗೀ ರೈಸ್​ ತಯಾರಿಸಿದರು. ಚಂದನಾ ಮಾಡಿರುವ ಅಡುಗೆಯನ್ನು ಬಾಯಿ ಚಪ್ಪರಿಸಿ ತಿಂದ್ರು ಸೀರಿಯಲ್​ ತಾರೆಯರು.

blank

ಚಂದನಾ ಮಾಡಿದ್ದ ಕ್ಯಾರೆಟ್​ ಹಲ್ವಾ ತಿಂದು ಅಮ್ಮನ ಕೈ ರುಚಿ ನೆನಪಾಗಿ ಕಣ್ಣೀರು ಹಾಕಿದ್ರು ನಿರಂಜನ್​ ದೇಶಪಾಂಡೆ.. ನನ್ನ ಮತ್ತು ಅಮ್ಮನ ನಡುವೆ ಕೊಂಚ ಗ್ಯಾಪ್​ ಕ್ರಿಯೇಟ್​ ಆಗಿದ್ದು, ಅವರ ಜೊತೆ ಸರಿಯಾಗಿ ಮಾತಾಡೋಕೆ ಆಗಿಲ್ಲ. ಆದ್ರೇ ಅವರು ಮಾಡುವ ಕ್ಯಾರೆಟ್​ ಹಲ್ವಾ ನಂಗೆ ತುಂಬಾ ಇಷ್ಟ ಎಂದು ಕಣ್ಣೀರು ಹಾಕಿದ್ರು ನಿರಂಜನ್​.

ಇನ್ನೂ ಬಿಗ್ ಬಾಸ್ ಟಾಸ್ಕ್ ನೀಡಿದ್ದು, ಮ್ಯೂಸಿಕ್​ ಪ್ರಾರಂಭವಾದ ತಕ್ಷಣ ಸ್ಪರ್ಧಿಗಳು ಒಬ್ಬರೇ ಬಂದು ಡ್ಯಾನ್ಸ್​ ಮಾಡಬೇಕು. ಸಖತ್​ ಸ್ಟೆಪ್ಸ್​ ಹಾಕಿದ್ರು ಸೀರಿಯಲ್​ ತಾರೆಯರು..ಬಿಗ್​ ಮನೆಯ ಕ್ಷಣಗಳನ್ನ ಎಂಜಾಯ್​ ಮಾಡ್ತಿದ್ದಾರೆ. ಚಕ್ರವ್ಯೂಹ ಟಾಸ್ಕ್​ನಲ್ಲಿ ಗಿಣಿರಾಮ ಖ್ಯಾತಿಯ ರಿತ್ವೀಕ್ ಮಠದ್ ಟಾಸ್ಕ್ ವಿಜೇತರಾಗಿ 20 ಅಂಕಗಳನ್ನು ಗಳಿಸಿದರು. ಅವರನ್ನು ಅನುಸರಿಸಿ ತ್ರಿವಿಕ್ರಮ್ ಮತ್ತು ನಯನಾ ನಾಗರಾಜ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

blank

Source: newsfirstlive.com Source link