ವಿದೇಶಿ ಪಿಚ್​ಗಳಲ್ಲೂ ಭಾರತೀಯ ವೇಗಿಗಳ ಪರಾಕ್ರಮ -ಯಶಸ್ಸಿನ ಹಿಂದಿದ್ದಾರೆ ಭರತ್​ ಅರುಣ್

ವಿದೇಶಿ ಪಿಚ್​ಗಳಲ್ಲೂ ಭಾರತೀಯ ವೇಗಿಗಳ ಪರಾಕ್ರಮ -ಯಶಸ್ಸಿನ ಹಿಂದಿದ್ದಾರೆ ಭರತ್​ ಅರುಣ್

ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ.. ಈಗ ಇಂಗ್ಲೆಂಡ್​​ನಲ್ಲಿ ಟೆಸ್ಟ್​ ಮಾದರಿಯಲ್ಲಿ ಟೀಮ್​ ಇಂಡಿಯಾದ ಡಾಮಿನೇಷನ್​​ ಮುಂದುವರೆಯುತ್ತಲೇ ಇದೆ. ಭಾರತದ ಈ ಸಕ್ಸಸ್​ ಜರ್ನಿಯ ಹಿಂದೆ ಬೌಲಿಂಗ್​ ಕೋಚ್​ ಭರತ್​ ಅರುಣ್​ ಪಾತ್ರ ಮಹತ್ವದ್ದಾಗಿದೆ. ಗೆಲುವಿಗಾಗಿ ಭರತ್​​ ಅರುಣ್​ ಮಾಡಿದ್ದೇನು.? ಇಲ್ಲಿದೆ ನೋಡಿ ಇಂಟರೆಸ್ಟಿಂಗ್​ ಡಿಟೇಲ್ಸ್​​..

blank

ಇಂಗ್ಲೆಂಡ್​ ವಿರುದ್ಧದ ಲಾರ್ಡ್ಸ್​ ಟೆಸ್ಟ್​ ಪಂದ್ಯದ ಗೆಲುಚಿನ ಕ್ರೆಡಿಟ್​​ ಟೀಮ್​ ಇಂಡಿಯಾ ಬೌಲಿಂಗ್​ ಯುನಿಟ್​ಗೆ ಸಲ್ಲಬೇಕು. ವಿಶ್ವದ ಪ್ರಮುಖ ತಂಡವನ್ನ ಅವರದ್ದೇ ನೆಲದಲ್ಲಿ ಕೇವಲ 120 ರನ್​ಗಳಿಗೆ ಆಲೌಟ್​ ಮಾಡೋದಂದ್ರೆ, ಸುಲಭದ ಮಾತಲ್ಲ. ಆದ್ರೆ, ಟೀಮ್​ ಇಂಡಿಯಾ ಬೌಲಿಂಗ್ ವಿಭಾಗದ ಮಟ್ಟಿಗೆ ಇದು ತುಂಬಾ ಸಲೀಸಾದ ಕೆಲಸವಾಗಿಬಿಟ್ಟಿದೆ.

ಕಳೆದ 3 ವರ್ಷಗಳಲ್ಲಿ ಟೀಮ್​ ಇಂಡಿಯಾ ಬೌಲರ್​​ಗಳ ಪ್ರದರ್ಶನವನ್ನ ಗಮನಿಸಿದ್ರೆ, ಟೆಸ್ಟ್​ನಲ್ಲಿ ಕನ್ಸಿಸ್ಟೆಂಟ್​​ ಆಗಿ 20 ವಿಕೆಟ್​​ಗಳನ್ನ ಕಬಳಿಸುತ್ತಲೇ ಬಂದಿದ್ದಾರೆ. ವಿದೇಶಿ ನೆಲದಲ್ಲೂ ಭಾರತೀಯ ಬೌಲಿಂಗ್​ ವಿಭಾಗ ಸಾಧಿಸಿರುವ ಪಾರುಪತ್ಯ ಹಾಗಿದೆ. ಭಾರತದ ಬೌಲಿಂಗ್​ ಸಕ್ಸಸ್​ ಕಥೆಯ ಹಿಂದಿರೋದು ಕೋಚ್​ ಭರತ್​ ಅರುಣ್​, ಮತ್ತು ಅವರ ವರ್ಕ್​ ಲೋಡ್​​ ಮ್ಯಾನೇಜ್​ಮೆಂಟ್​ ಪ್ಲಾನ್​!

blank

‘ವರ್ಕ್​ಲೋಡ್​​ಗೆ ವಿಶ್ರಾಂತಿಯ ಯೋಜನೆ’

‘ವರ್ಕ್​ಲೋಡ್​ ಮ್ಯಾನೇಜ್​ಮೆಂಟ್​​ಗೆ ನಾನು ವಿಶ್ರಾಂತಿ ನೀಡುವ ಯೋಜನೆ ರೂಪಿಸಿದ್ದೆ. ಅದನ್ನ ಅನುಭವಿ ವೇಗಿ ಇಶಾಂತ್​ ಶರ್ಮಾ ಮೇಲೆ ಪ್ರಯೋಗ ಮಾಡಿದೆ. ಕೆಲ ದಿನಗಳ ಬಳಿಕ ಬಂದ ಇಶಾಂತ್​, ಹಿಂದಿನ ದಿನ ಹೆಚ್ಚು ಬೌಲಿಂಗ್​ ಮಾಡದಿದ್ರೆ, ಮರು ದಿನ ಕಣಕ್ಕಿಳಿಯುವಾಗ ಹೊಸ ಉತ್ಸಾಹ ಇರುತ್ತೆ ಎಂದು ಹೇಳಿದ್ರು. ಆ ಬಳಿಕ ಅದನ್ನೇ ತಂಡದ ಎಲ್ಲರ ಮೇಲೆ ಪ್ರಯೋಗಿಸಲಾಗುತ್ತಿದೆ’‘

ಭರತ್​ ಅರುಣ್​, ಬೌಲಿಂಗ್​ ಕೋಚ್

ಯೆಸ್​​​..! ಟೀಮ್​ ಇಂಡಿಯಾದ ಬೌಲಿಂಗ್​ ಯುನಿಟ್​ನ ಯಶಸ್ಸಿನ ಹಿಂದಿನ ಸಿಕ್ರೇಟ್​ ಇದೇ. ವೇಗದ ಬೌಲರ್​ಗಳಿಗೆ ಹೆಚ್ಚು ವಿಶ್ರಾಂತಿಯನ್ನ ನೀಡ್ತಾ ಇರೋದೆ ತಂಡದ ಯಶಸ್ಸಿಗೆ ಕಾರಣವಾಗಿದೆ. ಈ ಭರತ್​ ಅರುಣ್​ರ ಈ ಯೋಜನೆ ಸಿದ್ಧವಾಗಿದ್ದು ದಶಕಗಳ ಹಿಂದೆ ಎನ್​​ಸಿಎನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ.! ಒಬ್ಬ ಮಾಜಿ ವೇಗಿಯಾದ ವೇಗದ ಬೌಲರ್​​ಗಳ ವರ್ಕ್​ ಲೋಡ್​ ಬಗ್ಗೆ ಅರಿತಿದ್ದ ಅರುಣ್​ ​ ಈ ಬಗ್ಗೆ ಪ್ಲಾನ್​ ರೂಪಿಸಿದ್ರು.

blank

‘ವಿಶ್ರಾಂತಿಯ ಅಗತ್ಯವಿರುತ್ತದೆ’
‘ಒಬ್ಬ ವೇಗದ ಬೌಲರ್​ ದಿನವೊಂದಕ್ಕೆ 15ರಿಂದ 20 ಓವರ್​​ಗಳನ್ನ ಹಾಕುವುದೆಂದರೇ ಇಡೀ ದೇಹಕ್ಕೆ ವಿರುದ್ಧವಾದ ಕೆಲಸವೇ. ಹೀಗಾಗಿ ದೇಹಕ್ಕೆ ವಿಶ್ರಾಂತಿಯ ಅಗತ್ಯವಿರುತ್ತದೆ. ದೇಹಕ್ಕೆ ವಿಶ್ರಾಂತಿ ನೀಡದಿದ್ದರೆ ಕರಿಯರ್​ ಇಂಜುರಿ, ಒತ್ತಡಗಳಿಂದ ದುಸ್ತರವಾಗಿ ಅಂತ್ಯವಾಗುತ್ತದೆ’

ಭರತ್​ ಅರುಣ್​, ಬೌಲಿಂಗ್​ ಕೋಚ್

ಯೆಸ್​​..! ಒಬ್ಬ ವೇಗದ ಬೌಲರ್​​ ದಿನವೊಂದಕ್ಕೆ 15ರಿಂದ 20 ಓವರ್​​​ಗಳ ಸ್ಪೆಲ್​ ಮಾಡೋದಂದ್ರೆ ಅಷ್ಟು ಸುಲಭದ ಮಾತಲ್ಲ. ಕಾರ್ಯದ ಈ ಒತ್ತಡವೇ ಇಂಜುರಿಗೆ ದಾರಿ ಮಾಡಿಕೊಡೋ ಸಾಧ್ಯತೆ ಅಷ್ಟಿರುತ್ತದೆ. ಆದ್ರೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿರೋ ಟೀಮ್​ ಇಂಡಿಯಾ, ಯಶಸ್ಸಿನ ನಾಗಾಲೋಟವನ್ನ ಮುಂದುವರೆಸುತ್ತಲೇ ಇದೆ.

Source: newsfirstlive.com Source link