‘ಸಂಸದರ ಸುತ್ತ ಗೂಂಡಾಗಳು, ಫ್ರಾಡ್​​ಗಳಿದ್ದಾರೆ’ -ರವೀಂದ್ರ ಶ್ರೀಕಂಠಯ್ಯ ಗಂಭೀರ ಆರೋಪ

‘ಸಂಸದರ ಸುತ್ತ ಗೂಂಡಾಗಳು, ಫ್ರಾಡ್​​ಗಳಿದ್ದಾರೆ’ -ರವೀಂದ್ರ ಶ್ರೀಕಂಠಯ್ಯ ಗಂಭೀರ ಆರೋಪ

ಮಂಡ್ಯ: ಕೆಆರ್​ಎಸ್​ ಬಳಿ ಅಕ್ರಮ ಗಣಿಗಾರಿಕೆ ವಾಕ್ ​​ಸಮರದ ಬಳಿಕ ಈಗ ಮಂಡ್ಯದಲ್ಲಿ ದಳಪತಿಗಳು Vs ಸುಮಲತಾ ಅಂಬರೀಶ್ ನಡುವೆ ಅಕ್ರಮದ ಕುರಿತ ಆರೋಪ ಪ್ರತ್ಯಾರೋಪಗಳು ಕೇಳಿ ಬಂದಿದೆ.

ಮಂಡ್ಯದಲ್ಲಿ ಜಿಲ್ಲಾ ಪಂಚಾಯಿತಿ ನಡೆದ ದಿಶಾ ಸಭೆಯಲ್ಲಿ ಮುಖಾಮುಖಿ ಜಟಾಪಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಸುಮಲತಾ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಭಟ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡುವಂತೆ ಆಗ್ರಹ ಮಾಡಿದರು.

ಇದನ್ನೂ ಓದಿ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸುಮಲತಾ ಅಸಮಾಧಾನ

ಏಕವಚನದಲ್ಲೇ ಆರೋಪ ಮಾಡಿರುವ ಅವರು ಸುಮಲತಾ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಭಟ್, ಸಂಸದರ ಲೆಟರ್​ಹೇಡ್​​ನಲ್ಲಿ ಸಹಿ ಮಾಡಿ ದುರುಪಯೋಗ ಪಡಿಸಿಕೊಂಡಿದ್ದಾನೆ. ಅಲ್ಲದೇ ಜಿಲ್ಲೆಯ ಉನ್ನತ ಅಧಿಕಾರಿಗಳಿಗೆ ಹಣಕ್ಕಾಗಿ ಪೀಡಿಸಿದ್ದಾನೆ. ಸುಮಲತಾ ಅಟೆಂಡರ್ ಚೇತಕ್ ಒಬ್ಬ ಫ್ರಾಡ್, ನಯ ವಂಚಕ. ಮೆಡಿಕಲ್ ಸೀಟ್ ಕೊಡಿಸುವುದಾಗಿ ಜನರಿಗೆ ಪಂಗನಾಮ ಹಾಕಿದ್ದಾನೆ. ಸುಮಲತಾ ಸುತ್ತ ಇರುವುದರಿಂದ ಅಧಿಕಾರಿಗಳಿಗೆ ಧಮ್ಕಿ ಹಾಕಿ ಹಣಕ್ಕಾಗಿ ಪೀಡಿಸಿದ್ದಾರೆ. ಸಂಸದರಿಗೆ ತಿಳಿಯದೆ ಎಲ್ಲಾ ತಪ್ಪುಗಳು ನಡೆದಿವೆ. ಜಿಲ್ಲಾಡಳಿತ ಸಂಪೂರ್ಣ ಕುಸಿದಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ಬಗ್ಗೆ ಗಮನಹರಿಸಿಲ್ಲ. ನಾವು ಇಂತಹ ದೌರ್ಜನ್ಯಗಳನ್ನು ನೋಡಿಕೊಳ್ಳಲು ಕುಳಿತುಕೊಳ್ಳಲು ಆಗೋದಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸಭೆಗೂ ಮುನ್ನವೇ ಸದ್ದು-ಗದ್ದಲ.. ಟಾಂಗ್ ಕೊಟ್ಟ ರವೀಂದ್ರ ಶ್ರೀಕಂಠಯ್ಯಗೆ ಸುಮಲತಾ ತಿರುಗೇಟು

ಸುಮಲತಾಗೆ ಆಪ್ತ ಕಾರ್ಯದರ್ಶಿ ಎಂಬ ಹುದ್ದೆಯೆ ಇಲ್ಲಾ. ಶ್ರೀನಿವಾಸ್ ಭಟ್ ಎಂಬುವವನನ್ನ ಅನಧಿಕೃತವಾಗಿ ಪಿಎಸ್ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಮಾನಸಿಕವಾಗಿ ಜರ್ಜರಿತವಾಗಿದ್ದಾರೆ. ಸಂಸದರ ಸುತ್ತ ಗುಂಡಾಗಳು, ಫ್ರಾಡ್​​ಗಳೇ ಇದ್ದಾರೆ. ಇವರು ಇನ್ನು ಯಾವ ಅಕ್ರಮ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೋ ಗೊತ್ತಿಲ್ಲ. ಎದುರು ಕುಳಿತುಕೊಂಡು ಸಂಸದರನ್ನೇ ಪ್ರಶ್ನಿಸಿದರೂ ಉತ್ತರ ಕೊಡಲಿಲ್ಲ. ಮೊದಲು ಆತನನ್ನು ಬಂಧನ ಮಾಡಿ ಆತ ಯಾರಿಗೆಲ್ಲ ಫೋನ್​ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ಆಗಬೇಕು. ಇಲ್ಲಿಗೆ ನಮ್ಮ ಹೋರಾಟ ನಿಲ್ಲೋದಿಲ್ಲ. ಕಾನೂನಿನ ಅನ್ವಯ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

Source: newsfirstlive.com Source link