ಸಲಿಂಗಕಾಮಿಗಳಿಗೆ ಜೊತೆಯಾಗಿ ವಾಸಿಸಲು ಅನುಮತಿ ನೀಡಿದ ಯುಪಿ ಕೋರ್ಟ್

ಲಕ್ನೋ: ರಾಂಪುರ ನ್ಯಾಯಾಲಯವು ಸಂಬಂಧ ಹೊಂದಿದ್ದ ಇಬ್ಬರು ಮಹಿಳೆಯರಿಗೂ ಜೊತೆಯಾಗಿ ವಾಸಿಸಲು ಅನುಮತಿ ನೀಡಿದೆ.

ಸುಮಾರು 20 ವರ್ಷ ಆಸುಪಾಸಿನ ಯುವತಿ ರಾಂಪುರದ ಶಹಬಾದ್ ಪ್ರದೇಶದಲ್ಲಿರುವ ತನ್ನ ಗೆಳತಿಯೊಂದಿಗೆ ತಂಗಿದ್ದಳು. ಈ ಕುರಿತಂತೆ ಯುವತಿಯ ಪೋಷಕರು ಜುಲೈನಲ್ಲಿ ಆಕೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಯುವತಿ ಇತ್ತೀಚೆಗಷ್ಟೇ ತನ್ನ ಸ್ನೇಹಿತೆಯೊಂದಿಗೆ ಶಹಬಾದ್‍ನ ಮನೆಯಲ್ಲಿ ಕಾಣಿಸಿಕೊಂಡಿದ್ದು, ತಾನು ತನ್ನ ಸ್ನೇಹಿತೆಯೊಂದಿಗೆ ಇರಲು ಬಯಸಿ ಮನೆಯನ್ನು ಸ್ವಇಚ್ಛೆಯಿಂದ ತೊರೆದು ಬಂದಿರುವುದಾಗಿ ತಿಳಿಸಿದ್ದಾಳೆ. ಇದನ್ನೂ ಓದಿ:ಕಾರು, ಬೈಕ್ ಮಧ್ಯೆ ಅಪಘಾತ- ಮೂವರು ಸ್ಥಳದಲ್ಲೇ ಸಾವು

ಇಬ್ಬರು 18 ವರ್ಷ ಮೇಲ್ಪಟ್ಟವರಾಗಿರುವುದರಿಂದ ಹಾಗೂ ಯುವತಿ ತನ್ನ ಸ್ವಇಚ್ಛೆಯಿಂದ ಮನೆ ಬಿಟ್ಟು ಬಂದಿರುವುದರಿಂದ, ಇಬ್ಬರನ್ನು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಯಿತು. ನಂತರ ಇಬ್ಬರಿಗೂ ಜೊತೆಯಾಗಿ ಬದುಕಲು ಅನುಮತಿ ನೀಡಲಾಯಿತು ಎಂದು ಅಧಿಕಾರಿ ಧರಂ ಸಿಂಗ್ ಮಾರ್ಚಲ್ ಹೇಳಿದ್ದಾರೆ.

ಈ ಮುನ್ನ ಯುವತಿ ಪೋಷಕರು, ಆಕೆ ಇನ್ನೂ ಅಪ್ರಾಪ್ತ ವಯಸ್ಕಳು ಎಂದು ತಿಳಿಸಿದ್ದರು. ಆದರೆ ಯುವತಿ ತನ್ನ ಪ್ರೌಢ ಶಾಲೆಯ ಪ್ರಮಾಣ ಪತ್ರವನ್ನು ತೋರಿಸಿದ್ದಳು. ಈ ವೇಳೆ ಯುವತಿಗೆ 20 ವರ್ಷವಾಗಿದ್ದು, ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ನಂತರ ಯುವತಿ ಹಾಗೂ ಆಕೆಯ ಕುಟುಂಬದವರು ಒಟ್ಟಿಗೆ ಕುಳಿತು ಸಮಾಲೋಚನೆ ನಡೆಸಿದ್ದಾರೆ. ಆದರೂ ಹಠ ಬಿಡದೇ ಯುವತಿ ಒಟ್ಟಿಗೆ ವಾಸಿಸುವುದಾಗಿ ತಿಳಿಸಿದ್ದು, ತನ್ನ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅರ್ಹಳು ಎಂದು ಹೇಳಿದ್ದಾಳೆ. ಇದನ್ನೂ ಓದಿ:ಪ್ರಜಾಪ್ರಭುತ್ವ ಸರ್ಕಾರ ಇಲ್ಲ, ಷರಿಯಾ ಕಾನೂನುಗಳೇ ಜಾರಿ – ತಾಲಿಬಾನ್

Source: publictv.in Source link