ತೆಲಂಗಾಣದಲ್ಲಿ ಕೊರೊನಾ ಮೀರಿಸಿದ ಡೆಂಗ್ಯೂ; ಹೈದರಾಬಾದ್​​ನಲ್ಲಿ ಒಂದೇ ವಾರದಲ್ಲಿ 447 ಕೇಸ್​

ತೆಲಂಗಾಣದಲ್ಲಿ ಕೊರೊನಾ ಮೀರಿಸಿದ ಡೆಂಗ್ಯೂ; ಹೈದರಾಬಾದ್​​ನಲ್ಲಿ ಒಂದೇ ವಾರದಲ್ಲಿ 447 ಕೇಸ್​

ನವದೆಹಲಿ: ಕೊರೊನಾದಿಂದ ಜಸ್ಟ್​ ನಿಟ್ಟುಸಿರು ಬಿಡುವಂತಹ ಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ತೆಲಂಗಾಣದಲ್ಲಿ ಡೆಂಗ್ಯೂ ಎಲ್ಲರನ್ನೂ ಗಾಬರಿಪಡಿಸಿದೆ. ಕಳೆದ ಒಂದು ವಾರದಲ್ಲಿ ಹೈದರಾಬಾದ್​ನಲ್ಲಿ ಬರೋಬ್ಬರಿ 450ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ

  • ಹೈದರಾಬಾದ್​ -447
  • ಖಮ್ಮಮ್ -128
  • ರಂಗರೆಡ್ಡಿ -144
  • ಮೇದ್​ಚಲ್ -89
  • ಅದಿಲ್​ಬಾದ್​ -69
  • ಕೊಟುಗುಡೆಮ್ -49
  • ನಿಜಮಾಬಾದ್ -39
  • ನಿರ್ಮಲ್​ -30

ಹೈದರಾಬಾದ್​ನಲ್ಲಿ ಡೆಂಗ್ಯೂ ಹರಡುವಿಕೆಯ ಪ್ರಮಾಣ ಮಿತಿ ಮೀರಿದೆ. ಹೀಗಾಗಿ ಡೆಂಗ್ಯೂ ತಡೆಗಟ್ಟಲು, ಜಿಎಚ್‌ಎಂಸಿ ಸಹಯೋಗದೊಂದಿಗೆ ಆರೋಗ್ಯ ಇಲಾಖೆ ಮುಂದಾಗಿದೆ. ಸಾರ್ವಜನಿಕರು ಕೂಡ ಮುನ್ನೆಚ್ಚರಿಕೆ ವಹಿಸಬೇಕು. ಇದೇ ರೀತಿ 2019ರಲ್ಲಿಯೂ ಡೆಂಗ್ಯೂ ಉಲ್ಬಣಗೊಂಡಿತ್ತು ಅಂತಾ ಸಾರ್ವಜನಿಕ ಆರೋಗ್ಯ ನಿರ್ದೇಶಕ (ಡಿಪಿಎಚ್) ಡಾ.ಜಿ ಶ್ರೀನಿವಾಸ್ ರಾವ್ ಹೇಳಿದ್ದಾರೆ. ಇನ್ನು ರಾಜ್ಯಾದ್ಯಂತ ಡೆಂಗ್ಯೂ ಸಂಬಂಧ 1500ಕ್ಕೂ ಹೆಚ್ಚು ಮಂದಿ ನಿತ್ಯ ಟೆಸ್ಟ್​ ಮಾಡಲಾಗುತ್ತಿದೆ.

Source: newsfirstlive.com Source link