ನಾಡಬಂದೂಕು ಸಿಡಿಸಿ ಖೂಬಾಗೆ ಸ್ವಾಗತ- ಉನ್ನತ ಅಧಿಕಾರಗಳ ಬದಲು 3 ಕಾನ್ಸ್​ಟೇಬಲ್​ ಅಮಾನತು

ನಾಡಬಂದೂಕು ಸಿಡಿಸಿ ಖೂಬಾಗೆ ಸ್ವಾಗತ- ಉನ್ನತ ಅಧಿಕಾರಗಳ ಬದಲು 3 ಕಾನ್ಸ್​ಟೇಬಲ್​ ಅಮಾನತು

ಯಾದಗಿರಿ: ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ಸ್ವಾಗತಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿ ಪ್ರಕರಣ ಸಂಬಂಧ ಮೂರು ಪೊಲೀಸ್​ ಕಾನ್ಸ್​​ಟೇಬಲ್​​ಗಳನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

ಯಾದಗಿರಿ ಎಸ್.ಪಿ.ವೇದಮೂರ್ತಿ ಅವರು ಯಾದಗಿರಿ ಗ್ರಾಮೀಣ ಠಾಣೆಯ ಸಿಬ್ಬಂದಿಯಾದ ವಿರೇಶ್, ಸಂತೋಷ ಹಾಗೂ ಮೆಹಬೂಬ್ ಎಂಬ ಮೂವರು ಕಾನ್ಸ್​​ಟೇಬಲ್​​ಗಳನ್ನು ಅಮಾನತು ಮಾಡಿ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ಗುಂಡಿನ ಸದ್ದು; ಕೇಂದ್ರ ಸಚಿವರ ಸ್ವಾಗತಕ್ಕಾಗಿ ಬಿಜೆಪಿ ನಾಯಕರ ಕೈಯಲ್ಲಿ ಬಂದೂಕು

ನಿನ್ನೆ ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಪಿಎಸ್ಐ ವಿರುದ್ಧ ಕಟ್ಟು ನಿಟ್ಟಿನ ಕ್ರಮಕ್ಕೆ ಎಸ್​​ಪಿ ಸೂಚನೆ ನೀಡಿದ್ದಾರೆ. ಆದರೆ ಇದುವರೆಗೂ ಮಾಜಿ ಶಾಸಕ ಬಾಬುರಾವ್ ಚಿಂಚನಸೂರ ಹಾಗೂ ಕರ್ತವ್ಯಲೋಪಲ್ಲಿ ಆಧಾರದಲ್ಲಿ ಡಿವೈಎಸ್ಪಿ, ಪಿಎಸ್ಐ ಹಾಗೂ ಉನ್ನತ ಅಧಿಕಾರಿಗಳ ಮೇಲೆ ಯಾವುದೇ ಕ್ರಮಕೈಗೊಳ್ಳದೆ ಕಾನ್ಸ್‌ಟೇಬಲ್​​ಗಳ ಮೇಲೆ ಮಾತ್ರ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಗುಂಡು ಹಾರಿಸಿ ಕೇಂದ್ರ ಸಚಿವ ಖೂಬಾಗೆ ಸ್ವಾಗತ ಪ್ರಕರಣ​; ನಾಲ್ವರ ವಿರುದ್ಧ FIR

Source: newsfirstlive.com Source link