ಹಬ್ಬಕ್ಕೆ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಸಾರಿಗೆ ನೌಕರರು

ಹಬ್ಬಕ್ಕೆ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಸಾರಿಗೆ ನೌಕರರು

ಬೆಂಗಳೂರು: ರಾಜ್ಯಾದ್ಯಂತ ವರಮಹಾಲಕ್ಷ್ಮಿ ಹಬ್ಬ ಆಚರಣೆಗೆ ಜನ ಸಂಭ್ರಮ ಸಡಗರದಿಂದ ಸಜ್ಜಾಗುತ್ತಿದ್ದರೆ, ಈ ಹೊತ್ತಿನಲ್ಲಿ ಸಾರಿಗೆ ನಿಗಮಗಳ ನೌಕರರು ವೇತನ ಇಲ್ಲದೆ ಹಬ್ಬ ಹೇಗಪ್ಪಾ ಮಾಡೋದು ಎಂಬ ಚಿಂತೆಯಲ್ಲಿದ್ದಾರೆ.

ಕೊರೋನಾದಿಂದ ತೀವ್ರ ಸಂಕಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಆಗಸ್ಟ್‌ ಅರ್ಧ ತಿಂಗಳು ಮುಗಿದರೂ ನೌಕರರಿಗೆ ಜುಲೈ ತಿಂಗಳ ವೇತನ ಬಿಡುಗಡೆ ಮಾಡಿಲ್ಲ. ಪರಿಣಾಮ 4 ಸಾರಿಗೆ ನಿಗಮಗಳಿಂದ 1 ಲಕ್ಷ 30 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಸಂಬಳ ಇಲ್ಲದೆ ಪರದಾಡುವಂತಾಗಿದೆ.

ಇದನ್ನೂ ಓದಿ: ಸಾಲು ಸಾಲು ಹಬ್ಬಗಳಿಂದ ಹೂವಿಗೆ ಬೇಡಿಕೆ -ಕೊರೊನಾ ಹೊಡೆತಕ್ಕೆ ಸಿಲುಕಿದ ರೈತನ ಮೊಗದಲ್ಲಿ ಮಂದಹಾಸ

ಅನ್‌ಲಾಕ್‌ ಬಳಿಕ ಪ್ರಯಾಣಿಕರ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗದ ಪರಿಣಾಮ ಸಾರಿಗೆ ಆದಾಯ ಕುಸಿತವಾಗಿದೆ. ಸದ್ಯ ಸಂಗ್ರಹವಾಗುತ್ತಿರುವ ಆದಾಯ ಡೀಸೆಲ್‌ ವೆಚ್ಚ ಹಾಗೂ ನಿರ್ವಹಣಾ ವೆಚ್ಚ ಭರಿಸಲು ಕಷ್ಟವಾಗುತ್ತಿದೆ. ಹೀಗಾಗಿ ಸಾರಿಗೆ ನಿಗಮಗಳು ನೌಕರರ ಜುಲೈ ತಿಂಗಳ ವೇತನ ಪಾವತಿಗಾಗಿ ಸರ್ಕಾರಕ್ಕೆ ಮನವಿ ಮಾಡಿವೆ.

ಆದರೆ, ಕಳೆದ ಒಂದೂವರೆ ವರ್ಷದಿಂದ ಪ್ರತಿ ತಿಂಗಳು ನೌಕರರ ವೇತನಕ್ಕಾಗಿ ಅನುದಾನ ನೀಡುತ್ತಾ ಬಂದಿರುವ ರಾಜ್ಯ ಸರ್ಕಾರ, ಈ ಬಾರಿ ಅನುದಾನ ನೀಡುವ ಸಂಬಂಧ ಪರಿಶೀಲಿಸುತ್ತಿದೆ. ಆದರೆ, ನೌಕರರು ಆಗಸ್ಟ್‌ ನಲ್ಲಿ 18 ದಿನ ಕಳೆದರೂ ಜುಲೈ ತಿಂಗಳ ವೇತನ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Source: newsfirstlive.com Source link