ಸಚಿವರ ಸಹೋದರನ ಮೊಬೈಲ್​ ಕನ್ನ ಹಾಕಿದ್ದ ಕಿಲಾಡಿ ಗ್ಯಾಂಗ್​ ಅಂದರ್..

ಸಚಿವರ ಸಹೋದರನ ಮೊಬೈಲ್​ ಕನ್ನ ಹಾಕಿದ್ದ ಕಿಲಾಡಿ ಗ್ಯಾಂಗ್​ ಅಂದರ್..

ಬೆಂಗಳೂರು: ನೀವೆನಾದ್ರೂ OLX ನಲ್ಲಿ ಸೆಕೆಂಡ್​ಹ್ಯಾಂಡ್​ ಮೊಬೈಲ್​ ತಗೊಳ್ಳೊ ಯೋಚನೆಯಲ್ಲಿದ್ದೀರಾ? ಹಾಗಾದ್ರೇ ಈ ಸ್ಟೋರಿ ಮೇಲೆ ಒಂಚೂರು ಕಣ್ಣಾಯಿಸಿ ಬಿಡಿ. ನಗರದಲ್ಲಿ ಮೊಬೈಲ್​, ಬೈಕ್​ ಕದ್ದು ಹೈಟೆಕ್​ ಆಗಿ ಮಾರಾಟ ಮಾಡುತ್ತಿದ್ದ ಕಿಲಾಡಿ ಕಳ್ಳರ ಗ್ಯಾಂಗೊಂದು ಸದ್ಯ ಪೊಲೀಸರ ಬಲೆಗೆ ಬಿದ್ದಿದೆ.

ಇವರು ಕಳ್ಳರು, ಆದ್ರೆ ಅಂತಿತ ಕಳ್ಳರಲ್ಲ, ಮಹಾನ್ ಕಳ್ಳರು. ವಿಐಪಿ ಕಳ್ಳರು ಇವರು ಮಾಡೋ ಕಳ್ಳತನಕ್ಕೂ ಒಂದು ಸ್ಟ್ಯಾಂಡರ್ಡ ಇದೆ. ಇವ್ರು ಸಾಮಾನ್ಯರನ್ನು ಟಚ್ ಕೂಡಾ ಮಾಡಲ್ಲ. ಅವ್ರು ಇವರ ವ್ಯಾಪ್ತಿಗೂ ಬರೋದಿಲ್ಲ. ಹಾಗಂತ ಸಾಕಷ್ಟು ದುಡ್ಡು ಇರೋರು ಇವರ ಟಾರ್ಗೆಟ್​ ಅಲ್ವೇ ಅಲ್ಲಾ. ಇವರ ಟಾರ್ಗೆಟ್​ ಏನಿದ್ದರೂ ವಿಐಪಿಗಳು ಮಾತ್ರ!.ಮಂತ್ರಿಗಳು, ರಾಜಕೀಯ ಮುಖಂಡರುಗಳ ಮೊಬೈಲ್​ ಮೇಲೆಯೇ ಇವರ ಕಣ್ಣು..

blank

ಇದನ್ನೂ ಓದಿ: ಸಂಸತ್​​ ಭವನದಿಂದ ಸಲ್ಮಾ ಅಣೆಕಟ್ಟುವರೆಗೆ; ಅಫ್ಘಾನಿಸ್ತಾನಕ್ಕೆ ಭಾರತ ನೀಡಿದ ಕೊಡುಗೆ!

ಸಿಲಿಕಾನ್​ ಸಿಟಿಯಲ್ಲಿ ದರೋಡೆ ಮಾಡಿದ ಮಾಲನ್ನ, ಹೈಟೆಕ್​ ಆಗಿ ಮಾರೋ ದಂಧೆ ಬೆಳಕಿಗೆ ಬಂದಿದೆ.​ಜನರ ನಂಬಿಕೆಯನ್ನೆ ಬಂಡವಾಳ ಮಾಡಿಕೊಂಡಿರುವ ಇವರು, ಇವರನ್ನ ನಂಬಿ ಏನಾದ್ರೂ ವ್ಯವಹಾರ ಮಾಡಿಬಿಟ್ಟರೆ ಮುಗೀತು ಮೂರು ಪಂಗನಾಮ ಬಿದ್ದಂಗೇನೆ.

ಹೌದು ವಿಐಪಿ ಜನರ ಮೊಬೈಲ್​ಗಳನ್ನೇ ಟಾರ್ಗೆಟ್​ ಮಾಡ್ತಿದ್ದ ಈ ಚಾಲಾಕಿ ಕಳ್ಳರ ಗ್ಯಾಂಗ್​, ಸ್ವತಃ ಸಚಿವ ಅಶ್ವಥ್​ ನಾರಾಯಣ ಅವರ ಸಹೋದರನ ಮೊಬೈಲ್​ನ್ನೆ ಕನ್ನ ಹಾಕಿದ್ದರಂತೆ. ಹೀಗೆ ವಿಐಪಿಗಳ ಮೊಬೈಲ್​ಗಳಿಗೆ ಕನ್ನ ಹಾಕ್ತಿದ್ದ ಖದೀಮರು, ಕದ್ದ ಮೊಬೈಲ್​ಗಳಿಗೆ ಅಮೇಜಾನ್​ನಲ್ಲಿ ​ ಕೊಂಡಿರುವುದಾಗಿ ಫೇಕ್​ ಬಿಲ್​ ರೆಡಿ ಮಾಡಿ ಅದನ್ನು OLX ನಲ್ಲಿ ಮಾರಾಟಕ್ಕಿಡುತ್ತಿದ್ದರಂತೆ.

ಅಷ್ಟೇ ಅಲ್ಲದೇ ನಗರದಲ್ಲಿನ VOGO ಬೈಕ್ ಕೂಡಾ ಕಳ್ಳತನ ಮಾಡ್ತಿದ್ದ ಖದೀಮರು.. ಬೈಕ್ ಕದ್ದು ಅದರಲ್ಲಿನ GPS ತೆಗೆದು ಮಾರುತ್ತಿದ್ದರಂತೆ. ನಾಲ್ಕೈದು ತಿಂಗಳಿನಿಂದ 17 ಕ್ಕೂ ಹೆಚ್ಚು ಪ್ರಕರಣಗಳು ಅನ್ನಪೂರ್ಣೇಶ್ವರಿನಗರ ಪೊಲೀಸ್​ ಠಾಣೆಯಲ್ಲಿ ದಾಖಲಾಗಿವೆ. ವಿಐಪಿ ಮೊಬೈಲ್​ಗಳೇ ಕಳ್ಳತನವಾದ್ದರಿಂದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಕೇವಲ ನಾಲ್ಕೆ ದಿನದಲ್ಲಿ ದೀಪಕ, ಆಕಾಶ್​, ವಿಜಯ್​​, ಮತ್ತು ಮದನ್​ಕುಮಾರ್​ ಎಂಬ 4 ಖತರ್ನಾಕ್​ ಖದೀಮರನ್ನು ಬಂಧಿಸಿದ್ದು, ಬಂಧಿತರಿಂದ ಮೊಬೈಲ್​ಗಳು ಸೇರಿದಂತೆ 4 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ..

ಇದನ್ನೂ ಓದಿ: ಸೂಪರ್​ ಮಾರ್ಕೆಟ್​ನಲ್ಲಿ ಖರೀದಿಗೆ ಬಂದಿದ್ದ ಮಹಿಳೆಗೆ ಕೈಗೆ ಸಿಕ್ಕಿದ್ದು ಭಯಂಕರ ಹಾವು

Source: newsfirstlive.com Source link