ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ – ಸಿಬಿಐ ತನಿಖೆಗೆ ಆದೇಶ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರ ನಡೆದ ಹಿಂಸೆಯ ಕುರಿತು ಸಿಬಿಐ ತನಿಖೆ ನಡೆಸಲು ಕೋಲ್ಕತ್ತಾ ಹೈಕೋರ್ಟ್ ಆದೇಶ ನೀಡಿದೆ.

ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆ ಸಿಬಿಐ ನಡೆಸಲಿದ್ದು, ಇನ್ನುಳಿದ ಪ್ರಕರಣಗಳ ತನಿಖೆಯನ್ನು ಎಸ್‍ಐಟಿ ನಡೆಸಬೇಕು. ಇದರ ಜೊತೆಗೆ ಪ್ರಕರಣದ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕೆಂದು ಆದೇಶಿಸಿದೆ.

ರಾಜ್ಯ ಸರ್ಕಾರಕ್ಕೆ ‘ಹೈ’ ಚಾಟಿ:
ನ್ಯಾಯಾಲಯ ಸಿಬಿಐ ಮತ್ತು ಎಸ್‍ಐಟಿ ಆರು ವಾರಗಳಲ್ಲಿ ತನಿಖೆಯ ವರದಿ ನೀಡುವಂತೆ ಹೇಳಿದೆ. ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಲು ವಿಫಲವಾಗಿದ್ದು, ಚುನಾವಣಾ ಆಯೋಗ ಉತ್ತಮವಾಗಿ ಕೆಲಸ ಮಾಡಬಹುದಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕೋಲ್ಕತ್ತಾದ ಪೊಲೀಸ್ ಕಮೀಷನರ್ ಸೋಮೆನ್ ಮಿತ್ರಾ ತನಿಖೆಯ ಭಾಗವಾಗಲಿದ್ದಾರೆ.

ಪೊಲೀಸರು ಹೇಳಿದ್ದು 17 ಸಾವು:
ರಾಜಕೀಯ ಹಿಂಸಾಚಾರದಲ್ಲಿ ಒಟ್ಟು 17 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದರು. ಆದ್ರೆ 17ಕ್ಕಿಂತ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಇದಾದ ಬಳಿಕ ಹಿಂಸಾಚಾರದ ಕುರಿತು ಸಮೀಕ್ಷೆ ನಡೆಸಿ ಬಿಜೆಪಿ ವರದಿ ಸಿದ್ಧಪಡಿಸಿತ್ತು. ಈ ವರದಿಯಲ್ಲಿ ಹಿಂಸೆ, ಕೊಲೆ, ದರೋಡೆ ಮತ್ತು ಬೆಂಕಿ ಹಾಕಿದ ಒಟ್ಟು 273 ಘಟನೆಗಳು ನಡೆದಿವೆ ಎಂದ ಆರೋಪಿಸಿತ್ತು. ಇದನ್ನೂ ಓದಿ: ಮೂರನೇ ಬಾರಿ ಬಂಗಾಳದ ಗದ್ದುಗೆ ಏರಿದ ಮಮತಾ ಬ್ಯಾನರ್ಜಿ

blank

ಏಪ್ರಿಲ್-ಮೇನಲ್ಲಿ ಚುನಾವಣೆ ನಡೆದ ಬಳಿಕ ಅಂದ್ರೆ ಫಲಿತಾಂಶದ ದಿನ ಕೋಲ್ಕತ್ತಾದ ಬಿಜೆಪಿ ಕಚೇರಿಗಳ ಮೇಲೆ ದಾಳಿ ನಡೆಸಿ ಬೆಂಕಿ ಹಾಕಲಾಗಿತ್ತು. ಈ ಘಟನೆ ನಡೆದ ಮರುದಿನವೇ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಗಲಾಟೆಯಲ್ಲಿ ಸಾವು-ನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿತ್ತು. ತಮ್ಮ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂದು ಆರೋಪಿಸಿದ್ದ ವಿಪಕ್ಷ, ಗೃಹ ಸಚಿವಾಲಯದಿಂದ ಪ್ರಕರಣದ ವರದಿಯನ್ನು ಕೇಳಿತ್ತು. ಇದನ್ನೂ ಓದಿ:  ಪಶ್ಚಿಮ ಬಂಗಾಳದಲ್ಲಿ ಮತ್ತಷ್ಟು ಹಿಂಸಾಚಾರ – ಕೇಂದ್ರ ಸಚಿವರ ಕಾರಿನ ಗಾಜು ಪುಡಿಪುಡಿ

blank

NHRC ಹೇಳಿದ್ದೇನು?:
ಜುಲೈ 13ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೋಲ್ಕತ್ತಾ ಹೈಕೋರ್ಟಿಗೆ ತನ್ನ ವರದಿಯನ್ನು ಸಲ್ಲಿಸಿತ್ತು. ಬಂಗಾಳದಲ್ಲಿ ಕಾನೂನುಗಳ ಪಾಲನೆ ಆಗುತ್ತಿಲ್ಲ. ಆದ್ರೆ ನಾಯಕ ಕಾನೂನು ಚಲಾಯಿಸುತ್ತಾನೆ. ಬಂಗಾಳದಲ್ಲಿ ನಡೆದ ಹಿಂಸೆಯ ಪ್ರಕರಣಗಳ ತನಿಖೆ ರಾಜ್ಯದ ಹೊರಗಿನವರಿಂದ ನಡೆಯಬೇಕಿದೆ ಎಂದು ಹೇಳಿತ್ತು. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: ಕಚ್ಚಾ ಬಾಂಬ್, ಗುಂಡಿನ ದಾಳಿಗೆ ಇಬ್ಬರ ಸಾವು

ಮಾನವ ಹಕ್ಕುಗಳ ಆಯೋಗ ವರದಿಯಲ್ಲಿನ ಪ್ರಮುಖ ಅಂಶಗಳು:
1. ಚುನಾವಣೆ ನಂತರ ಬಂಗಾಳದಲ್ಲಿ ನಡೆದ ಹಿಂಸಾಚಾರದ ಕುರಿತು ಸಿಬಿಐ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಕೊಲೆ, ಅತ್ಯಾಚಾರದಂತೆ ಗಂಭೀರ ಪ್ರಮಾಣದ ಕೃತ್ಯಗಳ ಕುರಿತ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ.
2. ಬಂಗಾಳದ ಬಡೇ ಪೈಮಾನ್ ನಲ್ಲಿ ನಡೆದ ಹಿಂಸೆ ಕಾಣುತ್ತಿದೆ. ಆದ್ರೆ ರಾಜ್ಯ ಸರ್ಕಾರ ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ಹೊಂದಿದೆ.
3. ಅಧಿಕಾರಕ್ಕೆ ಬಂದ ಪಕ್ಷದ ಬೆಂಬಲದಿಂದಲೇ ಈ ಕೃತ್ಯಗಳು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಚುನಾವಣೆಯಲ್ಲಿ ಬೇರೆ ಪಕ್ಷ ಬೆಂಬಲಿಸಿದವರ ಮೇಲೆಯೇ ದೌರ್ಜನ್ಯಗಳು ನಡೆದಿವೆ.
4. ರಾಜ್ಯ ಸರ್ಕಾರ ಕೆಲ ಇಲಾಖೆಗಳು ಮತ್ತು ಅಧಿಕಾರಿಗಳು ಹಿಂಸಾಚಾರಕ್ಕೆ ಮೂಕ ಪ್ರೇಕ್ಷಕರಾಗಿದ್ದರು. ಇನ್ನೂ ಕೆಲ ಅಧಿಕಾರಿಗಳೇ ಈ ಹಿಂಸಾಚಾರದಲ್ಲಿ ಭಾಗಿಯಾಗಿರುವ ಅನುಮಾನಗಳು ವ್ಯಕ್ತವಾಗಿವೆ.

Source: publictv.in Source link