‘ನಮ್ಮನ್ನ ದೂಡಿದ್ರೆ, ನಾವು ತಿರುಗಿಸಿ ದೂಡುತ್ತೇವೆ’ -ಸರಣಿಯ ಉಳಿದ ಪಂದ್ಯಗಳಲ್ಲೂ ನಡೆಯುತ್ತಾ ಸ್ಲೆಡ್ಜಿಂಗ್​?

‘ನಮ್ಮನ್ನ ದೂಡಿದ್ರೆ, ನಾವು ತಿರುಗಿಸಿ ದೂಡುತ್ತೇವೆ’ -ಸರಣಿಯ ಉಳಿದ ಪಂದ್ಯಗಳಲ್ಲೂ ನಡೆಯುತ್ತಾ ಸ್ಲೆಡ್ಜಿಂಗ್​?

ಜಿದ್ದಾ ಜಿದ್ದಿನ ಹೋರಾಟಕ್ಕೆ ಲಾರ್ಡ್ಸ್​​ ಟೆಸ್ಟ್​ ಪಂದ್ಯ ಸಾಕ್ಷಿಯಾದಂತೆ, ಸರಣಿಯಲ್ಲಿ ಉಳಿದ 3 ಪಂದ್ಯಗಳು ಮತ್ತಷ್ಟು ರೋಚಕವಾಗಿರೋದಂತೂ ಕನ್​ಫರ್ಮ್. ಉಳಿದ ಪಂದ್ಯಗಳೂ, ಸ್ಲೆಡ್ಜಿಂಗ್​ ಆಟಗಾರರ ನಡುವಿನ ಮಾತಿನ ಚಕಮಕಿಗೆ ಸಾಕ್ಷಿಯಾಗೋದ್ರಲ್ಲಿ ಅನುಮಾನವೇ ಇಲ್ಲ..! ಅದ್ಯಾಕೆ ಅಂತೀರಾ..? ಈ ಸ್ಟೋರಿ ಓದಿ.

ಲಾರ್ಡ್ಸ್​​ ಟೆಸ್ಟ್​ ಪಂದ್ಯ ಮುಗಿಸಿರುವ ಉಭಯ ತಂಡಗಳ ಚಿತ್ತ, ಇದೀಗ ಲೀಡ್ಸ್​ನತ್ತ ಹರಿದಿದೆ. ಮುನ್ನಡೆ ಸಾಧಿಸಿರುವ ಭಾರತ ಸರಣಿ ಗೆಲುವಿನ ಕಡೆ ಗಮನ ಹರಿಸಿದ್ರೆ, ಇಂಗ್ಲೆಂಡ್​ ಸಮಭಲ ಮಾಡಿಕೊಳ್ಳುವ ತವಕದಲ್ಲಿದೆ. ಆದ್ರೆ ಅಭಿಮಾನಿಗಳಲ್ಲಿ ಮುಂದಿನ ಪಂದ್ಯಗಳು ಇನ್ನಷ್ಟು ಜಿದ್ದಾಜಿದ್ದಿನಿಂದ ಕೂಡರಲಿವೆ ಅನ್ನೋ ಲೆಕ್ಕಾಚಾರ ಆರಂಭವಾಗಿದೆ. ಉಭಯ ತಂಡಗಳು ನೀಡ್ತಾ ಇರೋ ಹೇಳಿಕೆಗಳು, ಈ ಕುತೂಹಲವನ್ನ ಹುಟ್ಟಿಸಿವೆ.

blank

ರೋಚಕ ಹಣಾಹಣಿಯೊಂದಿಗೆ ಅಂತ್ಯ ಕಂಡ 2ನೇ ಟೆಸ್ಟ್,​​ ಆಟಗಾರರ ನಡುವಿನ ಮಾತಿನ ಚಕಮಕಿಗೂ ಸಾಕ್ಷಿಯಾಗಿತ್ತು. ಅಂತಿಮವಾಗಿ ಪಂದ್ಯ ಗೆದ್ದ ಬಳಿಕ ಮಾತನಾಡಿದ್ದ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್ ಕೆ.ಎಲ್​ ರಾಹುಲ್, ಇಂಗ್ಲೆಂಡ್​ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ರು. ‘ನಮ್ಮಲ್ಲಿ ಒಬ್ಬರನ್ನ ಕೆಣಕಿದ್ರೆ, ಉಳಿದ 10 ಆಟಗಾರರೂ ಸೇರಿ ತಿರುಗಿಬೀಳುತ್ತೇವೆ’ ಎಂದು ರಾಹುಲ್​ ಎಚ್ಚರಿಸಿದ್ರು. ಇದೀಗ ಎದುರಾಳಿ ಇಂಗ್ಲೆಂಡ್​ ಕೂಡ ಅದೇ ಮಾತುಗಳನ್ನಾಡಿದೆ.

‘ನಾವು ಹೆದರಿಲ್ಲ’
‘ಈ ಒಂದು ಹೋರಾಟದಿಂದ ನಾವು ಹೆದರಿಲ್ಲ. ಅವರು ನಮ್ಮನ್ನ ದೂಡಿದರೆ, ನಾವು ಅವರನ್ನ ಹಿಂದಕ್ಕೆ ದೂಡುತ್ತೇವೆ’
ಸಿಲ್ವರ್​​ವುಡ್​​, ಇಂಗ್ಲೆಂಡ್​ ಕೋಚ್

ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಇಂಗ್ಲೆಂಡ್​ ತಂಡವೂ, ತನ್ನ ಅಭಿಪ್ರಾಯವನ್ನ ಹೊರ ಹಾಕಿದೆ. ಈ ಬಗ್ಗೆ ಆಂಗ್ಲ ಪಡೆಯ ಹೆಡ್​ ಕೋಚ್​​ ಕ್ರಿಸ್​ ಸಿಲ್ವರ್​ವುಡ್​ ಮಾತನಾಡಿದ್ದು, ಭಾರತ ನಮ್ಮನ್ನ ಮುಂದೆ ದೂಡಿದ್ರೆ, ನಾವೂ ಅವರನ್ನ ಹಿಮ್ಮೆಟ್ಟಿಸುತ್ತೇವೆ ಎಂದು ಹೇಳಿದ್ದಾರೆ. ಆ ಮೂಲಕ ಉಳಿದ ಪಂದ್ಯಗಳಲ್ಲೂ ಸ್ಲೆಡ್ಜಿಂಗ್​, ಮಾತಿನ ಸಮರ ಮುಂದುವರೆಯುತ್ತಾ ಅನ್ನೋ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.

blank

‘ಆಟ ಇನ್ನೂ ಬಾಕಿ ಇದೆ’’
‘ಇದು ಸೋಲಿನಿಂದ ಆತಂಕಪಡುವ ಸಮಯವಲ್ಲ, ಆಟ ಇನ್ನೂ ಬಾಕಿ ಇದೆ​’
ಜೋ ರೂಟ್​​, ಇಂಗ್ಲೆಂಡ್​ ನಾಯಕ

ಕೋಚ್​​ ಸಿಲ್ವರ್​ವುಡ್​ ಮಾತ್ರವಲ್ಲ..! ನಾಯಕ ಜೋ ರೂಟ್​ ಕೂಡ ಇದೇ ಮಾತುಗಳನ್ನಾಡಿದ್ದಾರೆ. ಈ ಸೋಲಿನಿಂದ ಆತಂಕ ಪಡೋ ಅಗತ್ಯವೇನಿಲ್ಲ.. ಇನ್ನೂ 3 ಪಂದ್ಯಗಳು, ಬಾಕಿ ಇವೆ ಅನ್ನೋದು ರೂಟ್​ ಮಾತಾಗಿದೆ. ಉಭಯ ತಂಡಗಳ ಆಟಗಾರರು ಹೀಗೇ ನೀಡ್ತಾ ಇರೋ ಹೇಳಿಕೆಗಳೇ, ಸರಣಿಯಲ್ಲಿ ಉಳಿದ ಪಂದ್ಯಗಳೂ ಬ್ಯಾಟಲ್​ಗಳಾಗಿ ಬದಲಾಗ್ತಾವಾ ಅನ್ನೋ ಅನುಮಾನ ಹುಟ್ಟಿಸಿದೆ.

Source: newsfirstlive.com Source link