ಮಮತಾಗೆ ಮುಖಭಂಗ: ಅತ್ಯಾಚಾರ, ಕೊಲೆ ಕೇಸ್ CBI ತನಿಖೆಗೆ ಕೊಟ್ಟ ಹೈಕೋರ್ಟ್​

ಮಮತಾಗೆ ಮುಖಭಂಗ: ಅತ್ಯಾಚಾರ, ಕೊಲೆ ಕೇಸ್ CBI ತನಿಖೆಗೆ ಕೊಟ್ಟ ಹೈಕೋರ್ಟ್​

ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಬಳಿಕ ನಡೆದ ಹಿಂಸಾಚಾರ ಪ್ರಕರಣದ ವಿಚಾರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ದೊಡ್ಡ ಹಿನ್ನಡೆಯಾಗಿದೆ. ಗಲಾಟೆ ಸಂಬಂಧ ಕೋಲ್ಕತ್ತಾ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದವು. ಇದರ ವಿಚಾರಣೆ ನಡೆಸಿ ತೀರ್ಪು ನಡೆಸಿದ ಹೈಕೋರ್ಟ್​, ಗಂಭೀರ ಪ್ರಕರಣಗಳನ್ನ ಸಿಬಿಐಗೆ ಹಾಗೂ ಸಣ್ಣಪುಟ್ಟ ಪ್ರಕರಣಗಳ ತನಿಖೆಯನ್ನ ಎಸ್​ಐಟಿಗೆ ನೀಡಿ ಆದೇಶ ಹೊರಡಿಸಿದೆ.

ಕೋರ್ಟ್ ಆದೇಶದ ಪ್ರಕಾರ ಅತ್ಯಾಚಾರ, ಅಸಹಜ ಸಾವು ಮತ್ತು ಕೊಲೆ ಪ್ರಕರಣಗಳ ತನಿಖೆಯನ್ನ ಸಿಬಿಐ ನಡೆಸಲಿದೆ. ಕಡಿಮೆ ಪ್ರಾಮುಖ್ಯತೆಯ ಪ್ರಕರಣವನ್ನು 3 ಸದಸ್ಯರ ಎಸ್‌ಐಟಿ ತನಿಖೆ ನಡೆಸಲಿದೆ. ಈ ಎರಡೂ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿ ಕೋರ್ಟ್​ಗೆ ವರದಿ ಸಲ್ಲಿಸಲಿವೆ.

blank

ಸ್ಪೆಷಲ್ ಇನ್ವೆಸ್ಟಿಗೇಷನ್ ತಂಡದಲ್ಲಿ ಐಪಿಎಸ್​ ಅಧಿಕಾರಿಗಳು ಇರಲಿದ್ದಾರೆ. ಕೋಲ್ಕತ್ತಾ ಪೊಲೀಸ್ ಕಮಿಷನರ್ ಸೌಮೇನ್ ಮಿತ್ರಾ ಇದರ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಹಂಗಾಮಿ ಚೀಫ್ ಜಸ್ಟೀಸ್ ರಾಜೇಶ್ ಬಿಂದಾಲ್ ನೇತೃತ್ವದ ಪಂಚ ಪೀಠವು ಈ ಆದೇಶ ನೀಡಿದೆ. ಆಗಸ್ಟ್ 3 ರಂದು, ಕೋಲ್ಕತ್ತಾ ಹೈಕೋರ್ಟ್‌ನ ಐವರು ಸದಸ್ಯರ ಪೀಠವು ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು.

ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಜುಲೈನಲ್ಲಿ ಈ ಪ್ರಕರಣ ಸಂಬಂಧ ವಿವರವಾದ ವರದಿಯನ್ನು ತಯಾರಿಸಿ ಹೈಕೋರ್ಟ್‌ಗೆ ಸಲ್ಲಿಸಿತ್ತು. ವರದಿಯ ಪ್ರಕಾರ ಕೂಚ್ ಹಿಹಾರ್‌ನಲ್ಲಿ 322, ಬಿರ್ಭೂಮ್‌ನಲ್ಲಿ 314, ದಕ್ಷಿಣ 24 ಪರಗಣಗಳಲ್ಲಿ 203, ಉತ್ತರ 24 ಪರಗಣಗಳಲ್ಲಿ 198, ಕೋಲ್ಕತ್ತಾದಲ್ಲಿ 182 ಮತ್ತು ಪೂರ್ವ ಬುರ್ದ್ವಾನ್‌ನಲ್ಲಿ 113 ಹಿಂಸಾಚಾರ ಪ್ರಕರಣಗಳು ನಡೆದಿವೆ ಎಂದು ಹೇಳಿತ್ತು.

Source: newsfirstlive.com Source link