ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್ ಧಾರಾವಾಹಿಯ ಪ್ರೋಮೋ ರಿಲೀಸ್​ ಮಾಡಿದ ಸಿಎಂ ಬೊಮ್ಮಾಯಿ

ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್ ಧಾರಾವಾಹಿಯ ಪ್ರೋಮೋ ರಿಲೀಸ್​ ಮಾಡಿದ ಸಿಎಂ ಬೊಮ್ಮಾಯಿ

ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್ ಧಾರಾವಾಹಿ ಮಾಡಿರೋ ಇಂಪ್ಯಾಕ್ಟ್‌ ಅಷ್ಟಿಷ್ಟಲ್ಲ. ಶಿಕ್ಷಣದ ಬಗ್ಗೆ ಇರಬಹುದು, ಜಾತಿ ವ್ಯವಸ್ಥೆ ಬಗ್ಗೆ ಇರಬಹುದು ಈ ಧಾರಾವಾಹಿ ಚೆಲ್ಲಿರೋ ಬೆಳಕು ಮೆಚ್ಚುಗೆಗೆ ಅರ್ಹ.

ಇದಿಷ್ಟೇ ಅಲ್ಲ, ಈ ಧಾರಾವಾಹಿಯಲ್ಲಿ ಬಾಲ ಭೀಮನ ಪಾತ್ರ ಮಾಡಿರೋ ಬಾಲಾನಟ ಆಯುಧ್‌ನ ಅಭಿನಯವನ್ನ ಇಡೀ ದೇಶವೇ ಮೆಚ್ಚಿದೆ. ಈ ಧಾರಾವಾಹಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆಯೋಕೇ ಕಾರಣವೇ ಆಯುಧ್‌ ನಟನೆ.

ಅಂದ್ಹಾಗೇ, ಹೊಸ ವಿಷಯ ಏನಂದ್ರೆ, ಸದ್ಯದಲ್ಲಿಯೇ ಭೀಮನ ಪಾತ್ರ ಮಾಡಿರೋ ಆಯುಧ್‌ ಕಿರುತೆರೆಯಲ್ಲಿ ಕಾಣಿಸಿಕೊಳ್ಳೋದಿಲ್ಲ. ಹಾಗಂತಾ ಅವರು ಸೀರಿಯಲ್‌ ತ್ಯಜಿಸಿಲ್ಲ. ಬದಲಿಗೆ ಕತೆಯಲ್ಲಿ ಬದಲಾವಣೆಯಾಗಿದೆ. ಅಂಬೇಡ್ಕರ್‌ ಪ್ರೌಢಾವಸ್ಥೆಯ ಕಥೆ ಶುರುವಾಗಲಿದ್ದು, ಬಾಲ ಭೀಮನ ಎಪಿಸೋಡ್ ಮುಕ್ತಾಯವಾಗಿದೆ.

blank

ಕನ್ನಡದಲ್ಲಿ ಅಭೂತಪೂರ್ವ ಯಶಸ್ಸು ಕಂಡ ಧಾರಾವಾಹಿ ʻಮಹಾನಾಯಕ ಅಂಬೇಡ್ಕರ್‌ʼ. ಈಗ ಅಂಬೇಡ್ಕರ್‌ ಅವರ ಜೀವನದ ಮತ್ತೊಂದು ಮಜಲನ್ನು ತೋರಿಸಲು ಜೀ ಕನ್ನಡ ಸಿದ್ಧವಾಗಿದೆ. ಇದೇ ಶುಕ್ರವಾರ ಆಗಸ್ಟ್ 20 ರಂದು ʻಮಹಾನಾಯಕ ಅಂಬೇಡ್ಕರ್‌ʼ ಧಾರಾವಾಹಿಯಲ್ಲಿ ಯುವ ಅಂಬೇಡ್ಕರ್‌ ಕಾಣಿಸಿಕೊಳ್ಳಲಿದ್ದಾರೆ.

ಅತ್ಯಂತ ಜನಪ್ರಿಯ ಧಾರಾವಾಹಿ ಮಹಾನಾಯಕ ಅಂಬೇಡ್ಕರ್ ಜೀವನಗಾಥೆ ಅಪಾರ ವೀಕ್ಷಕರನ್ನು ಸೆಳೆದಿದೆ…ಅಂಬೇಡ್ಕರ್ ಬದುಕಿನ ಮತ್ತೊಂದು ಮಜಲು ತೆರೆದಿಡುವ ಧಾರಾವಾಹಿಯ ವಿಶೇಷ ಪ್ರೊಮೋವನ್ನು ಕರ್ನಾಟಕ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದ್ದಾರೆ.

ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಧಾರಾವಾಹಿಯ ಶೀರ್ಷಿಕೆ ಗೀತೆಯ ಕಾಲರ್ ಟ್ಯೂನ್ ಅನ್ನು ಬಿಡುಗಡೆ ಮಾಡಲಾಗಿದೆ. ಧಾರಾವಾಹಿಯ ಪೋಸ್ಟರ್​ಗಳು ಮಾರುಕಟ್ಟೆಗೆ ಬಂದಿವೆ. ಇವೆಲ್ಲ ಒಂದು ಧಾರಾವಾಹಿಗೆ ಹಿಂದೆಂದೂ ಕಾಣದಂತಹ ಅಭೂತಪೂರ್ವ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ.

ಇನ್ನೂ ಪ್ರೌಢಾವಸ್ಥೆಯ ಅಂಬೇಡ್ಕರ್ ಪಾತ್ರ ಮಾಡ್ತಿರೋದು ಯಾರು ಅಂದ್ರೆ…ನಟ ಅಥರ್ವ ಕಾರ್ವೆ ಯುವ ಭೀಮರಾವ್ ಅಂಬೇಡ್ಕರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅಥರ್ವ ಯಾರು ಎಂಬ ಪ್ರಶ್ನೆ ಮೂಡಬಹುದು. ಇವರು ಮರಾಠಿ ಭಾಷೆಯಲ್ಲಿ ಚಿರಪರಿಚಿತರು. ಈ ಹಿಂದೇ ಕೂಡಾ ಕೆಲವು ಹಿಂದಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Source: newsfirstlive.com Source link