ಬಾರ್​, ಮಾಲ್ ಓಪನ್​​​ ಓಕೆ; ದೇವಾಲಯಕ್ಕೆ ಅನುಮತಿ ಇಲ್ಲ ಯಾಕೆ? -ಮಹಾರಾಷ್ಟ್ರ ಸರ್ಕಾರ ‘ಹಿಂದೂ ವಿರೋಧಿ’ ಎಂದ ಬಿಜೆಪಿ

ಬಾರ್​, ಮಾಲ್ ಓಪನ್​​​ ಓಕೆ; ದೇವಾಲಯಕ್ಕೆ ಅನುಮತಿ ಇಲ್ಲ ಯಾಕೆ? -ಮಹಾರಾಷ್ಟ್ರ ಸರ್ಕಾರ ‘ಹಿಂದೂ ವಿರೋಧಿ’ ಎಂದ ಬಿಜೆಪಿ

ಮುಂಬೈ: ಕೊರೊನಾ ಹಿನ್ನೆಲೆ ಬಂದ್ ಮಾಡಲಾಗಿದ್ದ ಬಾರ್​ ಹಾಗೂ ರೆಸ್ಟೋರೆಂಟ್​ಗಳನ್ನ ಮತ್ತೆ ತೆರೆಯಲು ಮಹಾರಾಷ್ಟ್ರ ಸರ್ಕಾರ ಅನುವು ಮಾಡಿಕೊಟ್ಟಿದೆ. ಬಾರ್​ ಹಾಗೂ ರೆಸ್ಟೋರೆಂಟ್​ಗಳ ರೀ-ಓಪನ್​ಗೆ ಅನುಮತಿ ನೀಡಿ, ದೇವಾಲಯಗಳನ್ನ ತೆರೆಯಲು ಬಿಟ್ಟಿಲ್ಲ. ಇದು ಅಲ್ಲಿನ ವಿಪಕ್ಷ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ.

ಸರ್ಕಾರದ ಈ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ, ಮಹಾರಾಷ್ಟ್ರ ಸರ್ಕಾರ ಆಂಟಿ ಹಿಂದೂ ಎಂದು ಕರೆದು ವಾಗ್ದಾಳಿ ನಡೆಸಿದೆ. ಅಲ್ಲದೇ ನಾಶಿಕ್​​ ಜಿಲ್ಲೆಯ ತ್ರಯಂಬಕೇಶ್ವರ ದೇವಾಲಯದ ಎದುರು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಮುಂಬೈನ ಶಾಸಕ ರಾಮ್ ಕದಮ್ ಮಾತನಾಡಿ ನಾನು ಮುಂಬೈನಲ್ಲಿರುವ ಸಿದ್ದಿವಿನಾಯಕ ದೇವರಿಗೆ ಪೂಜೆ ಸಲ್ಲಿಸಲು ಮುಂದಾಗಿದ್ದೆ. ಆದರೆ ಪೊಲೀಸರು ನನ್ನನ್ನ ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ದೇವಾಲಯಗಳನ್ನ ಇನ್ನು ತೆರೆದಿಲ್ಲ. ರಾಜ್ಯ ಸರ್ಕಾರಕ್ಕೆ ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ದೇವಾಲಯಗಳನ್ನೇ ನಂಬಿಕೊಂಡು ಬದುಕುತ್ತಿರುವ ಬಡ ಕುಟುಂಬ ಏನು ಮಾಡಬೇಕು ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಮಮತಾಗೆ ಮುಖಭಂಗ: ಅತ್ಯಾಚಾರ, ಕೊಲೆ ಕೇಸ್ CBI ತನಿಖೆಗೆ ಕೊಟ್ಟ ಹೈಕೋರ್ಟ್​

ಮಹಾರಾಷ್ಟ್ರ ಸರ್ಕಾರ ಆಗಸ್ಟ್​ 15 ರಿಂದ ಮಾಲ್, ಅಂಗಡಿ, ರೆಸ್ಟೊರೆಂಟ್​ಗಳನ್ನ ರಾತ್ರಿ 10 ಗಂಟೆಯವರೆಗೆ ಓಪನ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಕೊರೊನಾ ಎರಡನೇ ಅಲೆಯಲ್ಲೂ ತತ್ತರಿಸಿದ್ದ ಮಹಾರಾಷ್ಟ್ರ ಕೆಲವು ತಿಂಗಳು ಕಾಲ ಮತ್ತೆ ಕಂಪ್ಲೀಟ್ ಲಾಕ್​ಡೌನ್​ ಜಾರಿ ಮಾಡಿತ್ತು. ಇನ್ನು ಮಹಾರಾಷ್ಟ್ರದಲ್ಲಿ ಇದುವರೆಗೆ ದಾಖಲೆಯ ಪ್ರಮಾಣ ಅಂದರೆ 64.01 ಲಕ್ಷ ಮಂದಿಗೆ ಕೊರೊನಾ ಸೊಂಕು ತಗುಲಿದೆ, ಸದ್ಯ 61,306 ಆ್ಯಕ್ಟೀವ್ ಕೇಸ್​ಗಳಿವೆ.

Source: newsfirstlive.com Source link