​ಪ್ರೀತಿಯಲ್ಲಿ ಬಿದ್ರು ಅಪರ್ಣ-ವಸಂತ! ‘ಸರಸು’ ಸಂಭ್ರಮಕ್ಕೆ ಮತ್ತೊಂದು ದಾಖಲೆ

​ಪ್ರೀತಿಯಲ್ಲಿ ಬಿದ್ರು ಅಪರ್ಣ-ವಸಂತ! ‘ಸರಸು’ ಸಂಭ್ರಮಕ್ಕೆ ಮತ್ತೊಂದು ದಾಖಲೆ

ಸರಸು ಹಾಗೂ ಮತ್ತೆ ವಸಂತ ಧಾರಾವಾಹಿಯ ಬಗ್ಗೆ ಹೆಚ್ಚು ಹೇಳೋದೇ ಬೇಡ.. ಹೊಸ ಕಥೆಯ ಮೂಲಕ ಪ್ರೇಕ್ಷಕ ವರ್ಗವನ್ನು ರಂಜಿಸ್ತಾಯಿರುವ ಈ ಧಾರಾವಾಹಿಗಳು ವಿಭಿನ್ನ ರೀತಿಯಲ್ಲಿ ಮೂಡಿ ಬರ್ತಾಯಿದ್ದು, ದಿನಕ್ಕೊಂದು ಟ್ವಿಸ್​​ ಹಾಗೂ ಆಗಾಗ ಹೊಸ ಪಾತ್ರಗಳ ಎಂಟ್ರಿ ನೋಡುಗರಿಗೆ ಇನ್ನು ಇಂಟರೆಸ್ಟಿಂಗ್​ ಅನಿಸುತ್ತದೆ. ಹೀಗೇ ಈ ಎರಡು ಧಾರಾವಾಹಿಗಳು ಹೊಸ ಮೈಲಿಗಲ್ಲುಗಳನ್ನೆ ಸೃಷ್ಟಿಸಿವೆ.

ಹೌದು.. ಮತ್ತೆ ವಸಂತ ಧಾರಾವಾಹಿ ಅಪರ್ಣ ಎಂಬ ಹುಡುಗಿ ಹಾಗೂ ಅವಳ ಕುಟುಂಬದ ಸುತ್ತ ಹೆಣೆದಿರುವ ಕಥೆಯಾಗಿದೆ. ಇಲ್ಲಿ ಆಸ್ತಿ ಗೋಸ್ಕರ ಅಣ್ಣಾಜಿ ಎಂಬ ವ್ಯಕ್ತಿ ವಸಂತ ಎನ್ನುವ ಹುಡುಗನನ್ನು ಅಪರ್ಣ ಕುಟುಂಬದ ವಿರುದ್ಧ ಬಿಡುತ್ತಾನೆ. ಆದ್ರೆ ದ್ವೇಷದಿಂದ ಇದ್ದ ಅಪರ್ಣ ಹಾಗೂ ವಸಂತ ಸದ್ಯ ಪ್ರೀತಿಗೆ ಬಿದಿದ್ದಾರೆ. ಇದೀಗ ಮತ್ತೆ ವಸಂತ ಧಾರಾವಾಹಿ ಬರೊಬ್ಬರಿ 400 ಎಪಿಸೋಡ್​ಗಳನ್ನ ಕಂಪ್ಲೀಟ್​ ಮಾಡಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸದ್ಯ ಇಡಿ ತಂಡ ಆ ಖುಷಿಯಲ್ಲಿದೆ.

blank

ಸರಸು ಧಾರಾವಾಹಿ ನವೆಂಬರ್​ 11 ರಂದು ಲಾಂಚ್​ ಆಗಿ ಸದ್ಯ 200 ಎಪಿಸೋಡ್​ಗಳನ್ನು ಕಂಪ್ಲೀಟ್​ ಮಾಡಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಇಲ್ಲಿ ಕನ್ನಡದ ನಟಿ ಸುಪ್ರಿತಾ ನಾರಯಣ್​ ಮುಖ್ಯ ಲೀಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ಸುಪ್ರಿತಾಗೆ ಜೋಡಿಯಾಗಿ ಸ್ಕಂದ ಅಶೋಕ್​ ಸ್ಕ್ರೀನ್​ ಶೇರ್​ ಮಾಡಿದ್ದಾರೆ. ನಟ ಅಭಿಜಿತ್​ ಕೂಡ ಪ್ರಮುಖ ರೋಲ್​ ಮೂಲಕ ಪ್ರೇಕ್ಷಕರ ಮನ ಗೆದಿದ್ದಾರೆ.
blank

Source: newsfirstlive.com Source link