ಸಿಎಂ ಬಸವರಾಜ್​​ ಬೊಮ್ಮಾಯಿ ದೆಹಲಿ ಪ್ರವಾಸ ದಿಢೀರ್​​ ರದ್ದು..!

ಸಿಎಂ ಬಸವರಾಜ್​​ ಬೊಮ್ಮಾಯಿ ದೆಹಲಿ ಪ್ರವಾಸ ದಿಢೀರ್​​ ರದ್ದು..!

ಬೆಂಗಳೂರು: ಖಾತೆ ಹಂಚಿಕೆ ಬೆನ್ನಲ್ಲೇ ಎದ್ದಿರುವ ಅಸಮಾಧಾನವನ್ನು ಬಿಜೆಪಿ ಹೈಕಮಾಂಡ್​​ ಗಮನಕ್ಕೆ ತರಲು ಹಮ್ಮಿಕೊಂಡಿದ್ದ ಸಿಎಂ ಬಸವರಾಜ್​​ ಬೊಮ್ಮಾಯಿ ದೆಹಲಿ ಪ್ರವಾಸ ದಿಢೀರ್​​ ರದ್ದಾಗಿದೆ. ಎಲ್ಲವೂ ಅಂದುಕೊಂಡತಾದರೆ ಈ ವಾರದ ಬದಲಿಗೆ ಮುಂದಿನ ವಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಕ್ಯಾಬಿನೆಟ್​​ ವಿಸ್ತರಣೆ ಬಳಿಕ ಅಸಮಾಧಾನ, ಕೊರೊನಾ ಮೂರನೇ ಅಲೆ, ಕೋವಿಡ್​​​ ಲಸಿಕೆ ಹಂಚಿಕೆ ಪ್ರಸ್ತಾಪ ಸೇರಿದಂತೆ ಹಲವಾರು ವಿಚಾರಗಳನ್ನು ಚರ್ಚಿಸಲು ದೆಹಲಿ ಪ್ರವಾಸ ಹಮ್ಮಿಕೊಂಡಿದ್ದರು. ಸಿಎಂ ಬಸವರಾಜ್​​ ಬೊಮ್ಮಾಯಿ. ಆದರೀಗ, ದಿಢೀರ್​​ ದೆಹಲಿ ಪ್ರವಾಸ ರದ್ದಗಾಗಿದೆ. ಈ ದೆಹಲಿ ಪ್ರವಾಸವನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.

ನಾಳೆ ದೇವರಾಜ ಅರಸು ಜನ್ಮದಿನ ಇದೆ. ಶನಿವಾರ ವಿಜಯಪುರ ಹಾಗೂ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ ವಾರವೇ ದೆಹಲಿಗೆ ಹೋಗಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಲಸಿಕೆ ಹಂಚಿಕೆ ಸಂಬಂಧ ಚರ್ಚಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದರು.

ಇದನ್ನೂ ಓದಿ: ಮಮತಾಗೆ ಮುಖಭಂಗ: ಅತ್ಯಾಚಾರ, ಕೊಲೆ ಕೇಸ್ CBI ತನಿಖೆಗೆ ಕೊಟ್ಟ ಹೈಕೋರ್ಟ್​

Source: newsfirstlive.com Source link