ಅಫ್ಘಾನ್​ ನಿರಾಶ್ರಿತರಿಗೆ ಟರ್ಕಿ ಬಾಗಿಲು ಕ್ಲೋಸ್​! ‘ಮಹಾಗೋಡೆ’ಯ ರಹಸ್ಯದ ಹಿಂದಿದೆ ಕಠೋರ ಕಥೆ

ಅಫ್ಘಾನ್​ ನಿರಾಶ್ರಿತರಿಗೆ ಟರ್ಕಿ ಬಾಗಿಲು ಕ್ಲೋಸ್​! ‘ಮಹಾಗೋಡೆ’ಯ ರಹಸ್ಯದ ಹಿಂದಿದೆ ಕಠೋರ ಕಥೆ

ತಾಲಿಬಾನ್ ಗುಂಡಿನ ಸದ್ದು ಈಗ ಕಾಬೂಲ್ ದಾಟಿ ಹೋಗಿದೆ. ಇನ್ನು ಇವರ ಅಟ್ಟಹಾಸ ಕೊನೆಗೊಂಡಿಲ್ಲ. ಕೈಗಳಲ್ಲಿ ಬಲವಾದ ವೆಪೆನ್ಸ್ ಹಿಡಿದು ದಿನಕ್ಕೊಂದು ಕುಚೇಷ್ಟೆ ಮಾಡುತ್ತಲಿದ್ದಾರೆ. ಅಫ್ಘಾನ್ ಗಡಿ ದಾಟಿ ಇರಾನ್, ಅಲ್ಲಿಂದ ಟರ್ಕಿ ಹೀಗೆ ಮುಂದುವರೆಯಲಿದೆ ಆಕ್ರಮಣಕಾರಿ ಕೆಲಸ. ಇವರ ಈ ಕೆಲಸಕ್ಕೆ ಬ್ರೇಕ್ ಹಾಕಲು ಟರ್ಕಿ ಮಾಡಿರುವ ಪ್ಲಾನ್ ಈ ಮಹಾಗೋಡೆ!

ಮಂಗನ ಕೈಗೆ ಮಾಣಿಕ್ಯ ಸಿಕ್ರೇ ಅದೇನಾಗುತ್ತೆ ಹೇಳಿ? ಈಗ ಅಫ್ಘಾನಲ್ಲಿ ಆಗುತ್ತಿರುವುದು ಅದೇ. ಇಲ್ಲಿ ತಾಲಿಬಾನ್​ಗಳ ಕೈಗೆ ಆ ಒಂದು ದೇಶ ಸಿಕ್ಕೀದ್ದೆ ಸಿಕ್ಕಿದ್ದು.. ಅವರ ಅಟ್ಟಹಾಸಕ್ಕೆ ಮಿತಿಯೇ ಇಲ್ಲದಂತಾಗಿದೆ. ಅಫ್ಘಾನ್ ನಲ್ಲಿ ಬದುಕಲು ಆಗದೇ ಅಥವಾ ಅಲ್ಲಿಂದ ಎಲ್ಲಾದರೂ ವಲಸೆ ಹೋಗಲು ಆಗದೆ ಅಫ್ಘಾನ್ ಪ್ರಜೆಗಳು ದಿನಗಳನ್ನು ಕಲೆ ಹಾಕುತ್ತಿದ್ದಾರೆ.

ದೇಶವನ್ನೆ ಆಟದ ಮೈದಾನವೆನ್ನುವ ಹಾಗೆ ಬಂದೂಕಗಳನ್ನು ಹೊತ್ತು ಆಡುತ್ತಿದ್ದಾರೆ. ಈ ಉಗ್ರರ ನಡೆಯನ್ನು ಕೇಳುವವರು ಯಾರು ಇಲ್ಲದಂತಾಗಿದೆ. 2 ದಶಕಗಳ ತನಕ ಅಮೆರಿಕದ ಕೈ-ಕೆಳಗೆ ಮೌನವಾಗಿದ್ದ ತಾಲಿಬಾನ್, ಈಗ ಮತ್ತೆ ತನ್ನಾಟವನ್ನು ಶುರು ಮಾಡಿಬಿಟ್ಟಿದೆ. ಒಂದೊಂದೆ ಹೆಜ್ಜೆ ಅನ್ನೋ ಹಾಗೆ, ಸಣ್ಣ ಹಳ್ಳಿಗಳಿಂದ ತನ್ನಾಕ್ರಮಣ ಶುರು ಮಾಡಿದ್ದ ತಾಲಿಬಾನ್​, ಈಗ ಕಾಬೂಲ್ ನಗರವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಅಫ್ಘಾನ್ ದೇಶದ ಸುತ್ತಲು ಪಾಕಿಸ್ತಾನ, ಇರಾನ್, ಇರಾಕ್, ಟರ್ಕಿ ಹೀಗೆ ಎಲ್ಲವೂ ಇಸ್ಲಾಮಿಕ್ ದೇಶಗಳೇ ಇವೆ. ಆದರೆ ಕೆಲವು ದೇಶಗಳು ತಾಲಿಬಾನಿಗಳಿಂದ ತಮ್ಮ ದೇಶವನ್ನು ದೂರವಿಡಲು ಬಯಸುತ್ತಿದೆ. ಈಗಾಗಲೇ ತಾಲಿಬಾನ್ ಆಕ್ರಮಣಗಳ ಬಗ್ಗೆ ಅರಿವಿರುವ ದೇಶಗಳು ಆ ತಲೆ ನೋವೇ ಬೇಡ. ನಮ್ಮ ದೇಶಕ್ಕೆ ಕಾಲಿಡಲೇ ಬೇಡಿ ಅನ್ನೋ ರೀತಿ ಗಡಿ ಭದ್ರತೆಗಳನ್ನು ನಡೆಸುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಟರ್ಕಿ ತೆಗೆದುಕೊಂಡಿರುವ ಈ ನಿರ್ಧಾರ ತಾಲಿಬಾನಿಗಳಿಗೆ ಕಂಪ್ಲೀಟ್ ನಿರ್ಬಂಧ ಹೇರಿದಂತಾಗಿದೆ.

295 ಕಿಲೋ ಮೀಟರ್ ಗೋಡೆ ನಿರ್ಮಾಣಕ್ಕೆ ಟರ್ಕಿ ಸಿದ್ಧ
ಗೋಡೆ ನಿರ್ಮಾಣಕ್ಕೆ 150 ಕಿಲೋ ಮೀಟರ್​ ಕಂದಕಗಳು

ಅಫ್ಘಾನ್​ನಲ್ಲಿ ತಾಲಿಬಾನ್ ಆಕ್ರಮಣದಿಂದ ಅದೆಷ್ಟೋ ಜನ ನಿರಾಶ್ರಿತರಾಗಿದ್ದಾರೆ. ಸಹಜವಾಗಿ ಈ ಊರಿನಲ್ಲಿ ಇಲ್ಲದಿದ್ದರೆ ಮುಂದಿನ ಊರಿನಲ್ಲಿ ಅನ್ನೋ ಹಾಗೆ ನಿರಾಶ್ರಿತರು ನೆರೆಯ ದೇಶಗಳಿಗೆ ಪಾದ ಬೆಳೆಸಲು ಶುರು ಮಾಡಿದ್ದಾರೆ. ಅಫ್ಘಾನ್​ನಿಂದ ಪಕ್ಕಕ್ಕೆ ಇರುವ ಪಾಕ್​ಗೆ ಅಥವಾ ಸುತ್ತಲು ಇರುವ ಇರಾನ್, ಇರಾಕ್​ಗೆ ಹೊರಟು ಬಿಡ್ತಾರೆ. ಆದರೆ ಟರ್ಕಿ ಈ ಎಲ್ಲಾ ದೇಶಗಳಿಗಿಂತ ಸೇಫ್ ಅನ್ನೋದು ಕೆಲವರ ಅಭಿಪ್ರಾಯ. ಇದರಿಂದ ನಿರಾಶ್ರಿತರು ಸಹಜವಾಗಿ ಟರ್ಕಿ ಕಡೆ ಮುಖ ಮಾಡಿಬಿಡ್ತಾರೆ.

ಆದರೆ ಟರ್ಕಿ ಈ ವಿಚಾರವಾಗಿ ಕಂಪ್ಲೀಟ್ ನೋ ಅನ್ನುತ್ತಿದೆ. ಅಫ್ಘಾನ್ ನಿಂದ ಇರಾನ್ ದಾಟಿ ಟರ್ಕಿ ಪ್ರವೇಶಿಸಿ ಬಿಡುತ್ತಾರೆ ಅನ್ನೋ ಯೋಚನೆಗೆ, ಟರ್ಕಿ ಸರ್ಕಾರ ಗಡಿ ಭಾಗದಲ್ಲಿ 295 ಕಿಲೋ ಮೀಟರ್​ಗಳ ಬೃಹತ್ ಗೋಡೆ ನಿರ್ಮಾಣ ಮಾಡಲು ಮುಂದಾಗಿದೆ. ಈಗಾಗಲೇ 5 ಕಿಲೋ ಮೀಟರ್​ಗಳ ನಿರ್ಮಾಣ ಹಂತ ಮುಗಿದಿದ್ದು , 150 ಕಿಲೋ ಮೀಟರ್ ಗಳ ಕಂದಕಗಳನ್ನು ಸಿದ್ಧಪಡಿಸಿದೆ ಟರ್ಕಿ.

37 ಲಕ್ಷ ಸಿರಿಯನ್ ನಿರಾಶ್ರಿತರಿಗೆ ಆಶ್ರಯ ನೀಡಿದ್ದ ಟರ್ಕಿ
ಈಗ ಟರ್ಕಿಯನ್ನು ಹಾದು ಹೋಗಲು ಅವಕಾಶವಿಲ್ಲ

ಈ ಹಿಂದೆ ಸಿರಿಯದಲ್ಲಿ ನಡೆದ ಸಿವಿಲ್ ವಾರ್ ನಲ್ಲಿ ಅದೆಷ್ಟೋ ನಿರಾಶ್ರಿತರು ಚಲ್ಲಾ ಪಿಲ್ಲಿಯಾಗಿದ್ದರು. ಅಂತಹ 37 ಲಕ್ಷ ಇಮಿಗ್ರೇಂಟ್ಸ್ ಗಳನ್ನು ಟರ್ಕಿ ಬರಮಾಡಿಕೊಂಡು ಆರೈಕೆ ಮಾಡಿ, ಕಾಪಾಡಿಕೊಂಡಿದೆ. ಟರ್ಕಿ ಈಗಲೂ ಸಹ ಆ ಸಿರಿಯನ್​ಗಳಿಗೆ ನೆಲೆಯಾಗಿದೆ. ಇದಿಷ್ಟೆ ಅಲ್ಲ ಇಸ್ಲಾಮಿಕ್ ಒಕ್ಕೂಟ ರಾಷ್ಟ್ರಗಳಲ್ಲಿ ಏನೇ ತೊಂದರೆ ಆದರೂ ಟರ್ಕಿ ಕೈ ಚಾಚುತ್ತಿತ್ತು. ಆದರೆ ಈ ಬಾರಿ ಮಾತ್ರ ಟರ್ಕಿ, ಅಫ್ಘಾನ್ ನಿಂದ ಹೊರಟಿರುವ ಎಲ್ಲ ನಿರಾಶ್ರಿತರು ಟರ್ಕಿ ಗಡಿ ಕಾಯಬೇಕೆ ಹೊರೆತು ಪ್ರವೇಶವನ್ನು ನಿಷೇದಿಸಲಾಗಿದೆ ಎಂದು ಮಹಾ ಗೋಡೆಯನ್ನು ನಿರ್ಮಿಸಿ ಬಿಟ್ಟಿದೆ.

blank

ತಾಲಿಬಾನಿಗಳು ಅಫ್ಘಾನ್ ಬಿಟ್ಟು ಶೀಯಾ ಜನಾಂಗದವರು ಇರುವ ಇರಾನ್ ಹಾಗೂ ಇರಾಕ್​ಗಳಲ್ಲಿ ನೆಲೆಸಲು ಆಗುವುದಿಲ್ಲ. ಅದಕ್ಕಾಗಿ ಟರ್ಕಿ ಪ್ರವೇಶಿಸಿ ಬಿಡ್ತಾರೆ ಎನ್ನುವ ಆಲೋಚನೆಯಿಂದ ಈ ಮಹಾ ಗೋಡೆಯನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಟರ್ಕಿಯಿಂದ ಒಳ ಹೊಕ್ಕು ಯೂರೋಪ್ ತಲುಪುವ ಅವಕಾಶವನ್ನು ರದ್ದು ಮಾಡಿದೆ.

ಇತ್ತಿಚೆಗೆ ಹೆಚ್ಚಾಗುತ್ತಿದೆ ಅಫ್ಘಾನ್ ನಿರಾಶ್ರಿತರ ದಂಡು
ಜನವರಿ 2021ರಿಂದ 2 ಲಕ್ಷ 70 ಸಾವಿರ ವಲಸಿಗರು ಟರ್ಕಿಗೆ

ಅಮೆರಿಕ ಕೈಗಳಿಂದ ಅಫ್ಘಾನ್ ಕೈ ತಪ್ಪಿದ ಕೂಡಲೇ ಅಲ್ಲಿ ತಾಲಿಬಾನ್ ಆಕ್ರಮಣ ಶುರುವಾಗೆ ಬಿಟ್ಟಿತ್ತು. ಇದರ ಸುಳಿವು ಇದ್ದ ಕೆಲವರು 2021ರ ಜನವರಿಯಿಂದಲೇ. ಅಫ್ಘಾನ್ ನಿಂದ ವಲಸೆ ಹೋಗಲು ಶುರು ಮಾಡಿದ್ದರು. ತಾಲಿಬಾನ್ ಆಡಳಿತಕ್ಕೆ ಬಂದರೇ ಖಂಡಿತವಾಗಿ ಪಾಲಿಸಲಾಗದ ನಿರ್ಭಂದಗಳನ್ನು ಹೇರುತ್ತಾರೆ ಅನ್ನೋ ಆಲೋಚನೆಯಿಂದ ಅಫ್ಘಾನ್ ತೊರೆಯಲು ಮುಂದಾಗಿದ್ದರು.

ಇದರಿಂದ ಸುಮಾರು 2 ಲಕ್ಷದ 70 ಸಾವಿರ ವಲಸಿಗರೂ ಟರ್ಕಿಯನ್ನು ದಾಟಿ ಹೋಗಿರುವ ವರದಿ ಇದೆ. ಅದುವೆ ಅಫ್ಘಾನ್ ತಾಲಿಬಾನ್ ಕೈಗೆ ಸೇರಿದಾಗಲಿಂದ ಅಂತೂ ಅತಿ ಹೆಚ್ಚು ಜನ ಟರ್ಕಿಗೆ ಆಗಮಿಸುತ್ತಿದ್ದಾರೆ ಅನ್ನೋ ಮಾತಿದೆ. ಇದರ ಮಧ್ಯೆ ಅಫ್ಘಾನ್ ಪ್ರಜೆಗಳು ತಮ್ಮ ದೇಶವನ್ನು ಪ್ರವೇಶಿಸದಿರಲಿ ಎಂದು ಟರ್ಕಿ ಈ ಯೋಜನೆಯನ್ನು ಹಾಕಿಕೊಂಡಿದೆ.

ಗಡಿ ಭಾಗದಲ್ಲಿ ಮಿಲಿಟರಿ ಸೇನೆ ವೃಧ್ಧಿ
ಗೇಟ್ ಕಾಯುತ್ತಿರುವ ಅಫ್ಘಾನ್ ನಿರಾಶ್ರಿತರು

ತಾಲಿಬಾನ್​ಗಳ ಆಕ್ರಮಣ ಮುಂದುವರೆಯುತ್ತಿದ್ದಂತೆ ಟರ್ಕಿ ಸಂಪೂರ್ಣವಾಗಿ ಸಿದ್ಧವಾಗ್ತಿದೆ. ಯಾವುದೇ ಕಾರಣಕ್ಕೂ ಟರ್ಕಿ ಪ್ರವೇಶಿಸಲು ಅವಕಾಶವನ್ನೆ ನೀಡುತ್ತಿಲ್ಲ. ಇದರಿಂದ ಈಗಾಗಲೇ ಅದೆಷ್ಟೋ ಅಫ್ಘಾನ್ ನಿರಾಶ್ರಿತರು ಗೇಟ್ ಕಾಯುತ್ತಾ ಕುಳಿತ್ತಿದ್ದಾರೆ. ಇಷ್ಟೆ ಅಲ್ಲದೆ ಟರ್ಕಿ ರಕ್ಷಣಾ ಸಚಿವ ಹುಲಸಿ ಅಕರ್ ಗಡಿ ಭಾಗದ ಮಿಲಿಟರಿ ಸೇನೆಯನ್ನು ಹೆಚ್ಚಳಗೊಳಿಸಿದ್ದಾರೆ. ಜೊತೆಗೆ ಸೇನೆಗೆ ಸಹಾಯವಾಗುವಂತೆ ಥರ್ಮಲ್ ನೈಟ್ ವಿಷನ್, ಸೆನ್ಸಾರ್ ಕಂಬಿಗಳನ್ನು ಸಹ ಜೋಡಿಸಲಾಗಿದೆ. ಇದನ್ನು ದಾಟಿ ಯಾರು ಒಳ ಪ್ರವೇಶಿಸಲು ಸಾಧ್ಯವೆ ಇಲ್ಲ ಎನ್ನುತ್ತಿದ್ದಾರೆ.

ನಾವು ಬೃಹತ್ ಗೋಡೆಯನ್ನು ನಿರ್ಮಿಸುತ್ತಿದ್ದೇವೆ. ಅದರ ಒಂದು ದೊಡ್ಡ ಭಾಗವನ್ನು ಪೂರ್ಣಗೊಳಿಸಲಾಗಿದೆ. ಸುಮಾರು 150 ಕಿಲೋಮೀಟರ್ ಕಂದಕಗಳನ್ನು ಅಗೆಯಲಾಯಿತು. ನಮ್ಮ ಗಡಿ ಹೊರ ವಲಯ ಮತ್ತು ಕೇಂದ್ರ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ. ನಾವು ಥರ್ಮಲ್ ನೈಟ್ ವಿಷನ್ ಸಾಧನಗಳನ್ನು ಒಳಗೊಂಡಂತೆ ಸುಮಾರು ಒಂದು ಸಾವಿರ ವಿಚಕ್ಷಣ ಕಣ್ಗಾವಲು ವಾಹಕಗಳೊಂದಿಗೆ ಕಾರ್ಯನಿರ್ವಹಿಸುತ್ತೇವೆ. ಗಡಿರೇಖೆಯಲ್ಲಿ ಚಲನಶೀಲತೆಯನ್ನು ಪತ್ತೆಹಚ್ಚುವುದನ್ನು ತುಂಬಾ ಸುಲಭಗೊಳಿಸಿದ ಎಲೆಕ್ಟ್ರೋ-ಆಪ್ಟಿಕಲ್ ಟವರ್‌ಗಳು ಮತ್ತು ಅಕೌಸ್ಟಿಕ್ ಸೆನ್ಸರ್‌ಗಳಿವೆ.

-ಹುಲಸಿ ಅಕರ್ , ಟರ್ಕಿ ರಕ್ಷಣಾ ಸಚಿವ

ಅಫ್ಘಾನ್ ತೊರೆಯಲು ಹಲವರು ಸಿದ್ಧ
2001ರ ತಾಲಿಬಾನ್ ಆಡಳಿತ ನೋಡಿದ ಜನ್ರೂ ಪರಾರಿ

ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ದೇಶದ ಲಕ್ಷಾಂತರ ಜನರು ಆಘಾತಕ್ಕೊಳಗಾದರು. ಮುಂದಿನ ಭವಿಷ್ಯದ ಭೀತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ದೇಶವನ್ನೇ ತೊರೆದು ಹೋಗುವುದಕ್ಕೆ ಶುರು ಮಾಡಿದ್ದಾರೆ. 1996 ರಿಂದ 2001ರ ಅವಧಿಯಲ್ಲಿ ಆಡಳಿತ ನಡೆಸಿದ ಇದೇ ತಾಲಿಬಾನ್ ಉಗ್ರರು ಕ್ರೂರಾತೀಕ್ರೂರ ಶಿಕ್ಷೆಗಳನ್ನು ನೀಡುವ ಮೂಲಕ ಜನರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. 1990ರ ದಶಕದ ತಾಲಿಬಾನ್ ಉಗ್ರರ ಆಳ್ವಿಕೆಯಲ್ಲಿ ಜಾರಿಗೊಳಿಸಿದ ಶರಿಯಾ ಕಾನೂನಿನ ಕ್ರೌರ್ಯತೆ ಬಗ್ಗೆ ಅರಿತಿರುವ ಜನರು ಉಗ್ರರ ಮುಷ್ಠಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಹಾತೊರೆಯುತ್ತಿದ್ದಾರೆ. ಮತ್ತದೆ ಶಿಕ್ಷೆಗೆ ಬಲಿಯಾಗಲು ಭಯ ಪಡುತ್ತಿದ್ದಾರೆ. ಆ ದೇಶವನ್ನು ತೊರೆದು ಹೋಗಲೇ ಬೇಕು ಎಂದು ಸಿದ್ಧವಾಗುತ್ತಿದ್ದಾರೆ.

blank

ಅಫ್ಘಾನಿಗಳಿಗೆ ಎಲ್ಲೂ ಇಲ್ಲದ ಆಶ್ರಯ!

ತಾಲಿಬಾನಿಗಳ ಕೈ ಕೆಳಗೆ ಬದಕಲು ಸಾಧ್ಯವೇ ಇಲ್ಲ ಅನ್ನೋದು ಅರಿತಿರುವ ಅಫ್ಘಾನಿಗಳಿಗೆ ಟರ್ಕಿ ಗಡಿ ನಿರ್ಭಂದ ಹೇರಿಯಾಗಿದೆ. ಇದಲ್ಲದೆ ಉಳಿದ ಇಸ್ಲಾಮಿಕ್ ಒಕ್ಕೂಟದ ದೇಶಗಳೂ ಸಹ ಅಫ್ಘಾನ್ ಪ್ರಜೆಗಳನ್ನು ದೂರವೇ ಉಳಿಸಿದೆ. ಅರಬ್ ರಾಷ್ಟ್ರಗಳಾಗಲೀ, ಬಾಂಗ್ಲಾ, ಈಜಿಪ್ಟ್ ಸೇರೆ ಯಾವ ದೇಶಗಳಿಗೂ ಅಫ್ಘಾನ್ ನಿರಾಶ್ರಿತರನ್ನು ಅಪ್ಪಿಕೊಳ್ಳಲು ಒಪ್ಪಿಗೆ ಇಲ್ಲ.

ಜೊತೆಗೆ ನಮ್ಮ ದೇಶಕ್ಕೆ ಬರಬೇಡಿ ಎನ್ನುವ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಧ್ಯಾ ಪಾಕ್ ಮಿಶ್ರ ಒಪ್ಪಂದದಂತೆ ಅಫ್ಘಾನಿಗರನ್ನು ಬರಮಾಡಿಕೊಳ್ತಾ ಇದ್ದಾರೆ. ಒಟ್ಟಿನಲ್ಲಿ ಅಫ್ಘಾನ್ ತಾಲಿಬಾನಿಗಳ ಅಟ್ಟಹಾಸ ತಾಳಲಾರದೆ, ದೇಶ ತೊರೆಯಲು ಮುಂದಾದವರಿಗೆ ಬೇರೆಲ್ಲೂ ಖಾಂ ನೆಲೆ ಸಿಗದಂತಾಗಿದೆ. ತಾಲಿಬಾನಿಗಳ ಸಿದ್ಧಾಂತಗಳನ್ನು ಸಹಿಸದೆ ಅಫ್ಘಾನ್ ನಿಂದ ಹೊರಟ ನಿರಾಶ್ರಿತರಿಗೆ ಯಾವ ದೇಶ ಗೇಟ್ ಒಪನ್ ಮಾಡುತ್ತೋ ಕಾದು ನೋಡ್ಬೇಕು. ತಾಲಿಬಾನಿಗಳಿಗೆ ಅಟ್ಟಹಾಸವನ್ನು ಮಟ್ಟ ಹಾಕಲು, ವಿಶ್ವದ ಬಲಿಷ್ಠರು ಪ್ಲಾನ್ ನಡೆಸುತ್ತಿರಬಹುದು. ಆದರೆ ಸದ್ಯಕ್ಕಂತೂ ಅಫ್ಘಾನ್ ನಿರಾಶ್ರಿತರು ಇಲ್ಲೂ ಇಲ್ಲ, ಅಲ್ಲೂ ಇಲ್ಲ ಎನ್ನುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.

Source: newsfirstlive.com Source link