ಯೋಗೇಶ್​ ಗೌಡ ಕೊಲೆ ಕೇಸ್​: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಡುಗಡೆ ಭಾಗ್ಯ

ಯೋಗೇಶ್​ ಗೌಡ ಕೊಲೆ ಕೇಸ್​: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಡುಗಡೆ ಭಾಗ್ಯ

ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಸಾಕ್ಷ್ಯನಾಶ ಪ್ರಕರಣದಲ್ಲಿ ಜಾಮೀನು ಮಾಡಿ ಆದೇಶ ಹೊರಡಿಸಿದೆ.

ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ವಿರುದ್ಧ ಆರೋಪ ಕೇಳಿಬಂದಿತ್ತು. ಪ್ರಕರಣದ ತನಿಖೆಯನ್ನ ನಡೆಸಿದ್ದ ಸಿಬಿಐ ಅಧಿಕಾರಿಗಳು ಕಳೆದ 9 ತಿಂಗಳ ಹಿಂದೆ ವಿನಯ್ ಕುಲಕರ್ಣಿಯನ್ನ ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಆಗಸ್ಟ್​ 11 ರಂದು ವಿನಯ್ ಕುಲಕರ್ಣಿ ಸುಪ್ರೀಂಕೋರ್ಟ್​ನಲ್ಲಿ ಜಾಮೀನು ತಂದಿದ್ದರು.

ಇದನ್ನೂ ಓದಿ: ವಿನಯ್​ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು -ಆದ್ರೆ ಧಾರವಾಡಕ್ಕೆ ಕಾಲಿಡುವಂತಿಲ್ಲ

ಸುಪ್ರೀಂ ಕೋರ್ಟ್​ನಲ್ಲಿ ಜಾಮೀನು ಸಿಕ್ಕಿದ್ದರೂ ವಿನಯ್ ಕುಲಕರ್ಣಿಗೆ ಸಾಕ್ಷನಾಶ ಪ್ರಕರಣದ ಕಂಟಕ ಎದುರಾಗಿತ್ತು. ಹೀಗಾಗಿ ವಿನಯ್ ಕುಲಕರ್ಣಿ ಆಗಸ್ಟ್​ 11 ರಂದು ಜೈಲಿನಿಂದ ಬಿಡುಗಡೆಯಾಗಿರಲಿಲ್ಲ. ಇಂದು ಸಾಕ್ಷ್ಯನಾಶ ಪ್ರಕರಣದಲ್ಲೂ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಇಂದು ಅಥವಾ ನಾಳೆ ವಿನಯ್ ಕುಲಕರ್ಣಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿನಯ್ ಕುಲಕರ್ಣಿಗೆ ಜಾಮೀನು ಷರತ್ತುಗಳು

  • ಯಾವುದೇ ಕಾರಣಕ್ಕೂ ಧಾರವಾಡ ಜಿಲ್ಲೆ ಪ್ರವೇಶಿಸಬಾರದು
  • ವಾರಕ್ಕೆ ಎರಡು ಬಾರಿ‌ ಸಿಬಿಐ ಮುಂದೆ ಹಾಜರಾಗಬೇಕು
  • ಇಬ್ಬರು ವ್ಯಕ್ತಿಗಳ ಶ್ಯೂರಿಟಿ‌ ಬಾಂಡ್ ನೀಡಬೇಕು
  • ಪ್ರಕರಣದ ಸಾಕ್ಷಿ ನಾಶ ಮಾಡಬಾರದು, ಪ್ರಭಾವ ಬೀರಬಾರದು

Source: newsfirstlive.com Source link