ಒಂದೇ ವಾರಕ್ಕೆ ಸೀರಿಯಲ್​ ಸ್ಟಾರ್ಸ್ ಸುಸ್ತು.. ಹುಡುಗಿಯರ ಮಧ್ಯೆ ತಂದಿಟ್ಟ ‘ಬೆಂಕಿ ಕಡ್ಡಿ’..!

ಒಂದೇ ವಾರಕ್ಕೆ ಸೀರಿಯಲ್​ ಸ್ಟಾರ್ಸ್ ಸುಸ್ತು.. ಹುಡುಗಿಯರ ಮಧ್ಯೆ ತಂದಿಟ್ಟ ‘ಬೆಂಕಿ ಕಡ್ಡಿ’..!

ಮಿನಿ ಬಿಗ್​ ಬಾಸ್​ನಲ್ಲಿ ಎಂಟರ್​ಟೈಮೆಂಟ್ ಜೊತೆಗೆ ಟಾಸ್ಕ್​​ ಕೂಡ ಸಖತ್​ ಸೌಂಡ್​ ಮಾಡುತ್ತಿದೆ. ಬೆಸ್ಟ್​ ಆಟಗಾರ ಪ್ರಶಸ್ತಿಗೆ ಅಂಕಗಳಿಸಲು ಬಿಗ್​ ಬಾಸ್​ ಟಾಸ್ಕ್​ ನೀಡುತ್ತಿದ್ದು, ನಿನ್ನೆಯ ಎಪಿಸೋಡ್​ನಲ್ಲಿ ಹುಡುಗರ ಟೀಮ್​ ಹಾಗೂ ಹುಡುಗಿಯರ ಟೀಮ್​ ಮಾಡಲಾಗಿತ್ತು. ಬೆಂಕಿ ಕಡ್ಡಿ ಟಾಸ್ಕ್​ನಲ್ಲಿ ಮೊದಲಿಗೆ ಹುಡುಗರ ಟೀಮ್​ನಿಂದ ಕಿರಣ್​ ರಾಜ್​, ಗಗನ್​ ಚಿನ್ನಪ್ಪ ಮತ್ತು ಧನುಷ್​ ಆಡಿದ್ರು. ಇತ್ತ ಹುಡುಗಿಯರ ಟೀಮ್​ನಿಂದ ವೈಷ್ಣವಿ, ಯಶಸ್ವಿನಿ ಹಾಗೂ ರಮೋಲಾ ಕಾಂಪಿಟೇಶನ್​ ನೀಡಿದ್ರು. ಆದ್ರೆ ಬೇಗ ಬೆಂಕಿ ಕಡ್ಡಿಗಳನ್ನ ಜೊಡಿಸಿ ಹುಡುಗರು ಆ ಸುತ್ತನ್ನು ಗೆದ್ದರು.

blank
ಇತ್ತ ಹುಡುಗಿಯರ ಟೀಮ್​ನಲ್ಲಿ ಅಸಮಾಧಾನ ಭುಗಿಲೆದ್ದಿತು. ವೈಷ್ಣವಿ ಈ ಬಗ್ಗೆ ರಮೋಲಾ ಅತ್ರಾ ಮಾತ್ನಾಡಿ.. ಬೆಂಕಿ ಕಡ್ಡಿ ಅಂಟಿಸುವಾಗ ಹೊಂದಾಣಿಕೆ ಇರಲಿಲ್ಲ. ನೀವು ಗ್ಯಾಪ್​ ಇರೋದನ್ನ ನಂತರ ತುಂಬಬಹುದಿತ್ತು ಅಲ್ಲಿ ಸ್ವಲ್ಪ ಮಿಸ್​ ಹೊಡೆಯಿತು ಅಂದ್ರು. ಇದಕ್ಕೆ ರಮೋಲಾ ತಿರುಗೇಟು ನೀಡಿ, ಮೊದಲೆ ಮಾತ್ನಾಡಿದಂತೆ ಗ್ಯಾಪ್​ ಫಿಲ್​ ಮಾಡಿದೆ. ನನ್ನಿಂದ ಏನಾದ್ರೂ ಪ್ರಾಬ್ಲಾಂ ಆಯ್ತಾ? ಇದ್ರೆ ನೇರವಾಗಿ ಹೇಳಿ ಎಂದು ಖಾರವಾಗಿಯೇ ಕೇಳಿದ್ರು.

ಈ ಬಗ್ಗೆ ಯಶಸ್ವನಿ ಹತ್ತಿರ ಮಾತನಾಡಿದ ನಯನಾ ಹಾಗೂ ಚಂದನಾ.. ನೀವು ಮೊದಲೇ ಪ್ಲಾನ್​ ಮಾಡಿಕೊಳ್ಳಬೇಕಿತ್ತು. ಒಬ್ಬರಿಗೊಬ್ಬರು ಮಾತಾಡಿಕೊಂಡು ಮಾಡಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ರು.

blank
ಕಿಚನ್​ಗೆ ಹೋದರೆ ಮಾತ್ರ ಅಟೆನ್ಶನ್​ ಸಿಗುತ್ತಾ? ಬಿಗ್​ ಮನೆಯಲ್ಲಿ ಬೇರೆ ಜಾಗಗಳು ಇವೆ ಅದನ್ನ ಯಾರು ತಿಳಿದುಕೊಳ್ಳಿ. ಎಲ್ಲರೂ ಅಡುಗೆ ಮನೆಯಲ್ಲಿಯೇ ತುಂಬ್ಕೊಂಡು ಮಿಕ್ಕಿದ ಎಲ್ಲಾ ಜಾಗವನ್ನು ಗಲಿಜಾಗಿಟ್ಟರೇ ಹೇಗೆ ಎಂದು ಕೌಸ್ತುಬಾ ಬೇಸರ ವ್ಯಕ್ತಪಡಿಸಿದ್ರು.

ಅಡುಗೆ ಟಾಸ್ಕ್​ನಲ್ಲಿ ಒಂದೊಂದು ಹೊತ್ತು ಒಬ್ಬಬ್ಬರು ಅಡುಗೆ ಮಾಡಬೇಕು. ಆ ಅಡುಗೆಯ ರುಚಿ ಮೇಲೆ ಬೇರೆಯವರು ಅಂಕ ನೀಡಬೇಕು. ಮೊದಲಿಗೆ ಬೆಳಗಿನ ತಿಂಡಿ ಸಿದ್ಧಪಡಿಸಲು ಹೋಗಿ ವೈಷ್ಣವಿ ಪೇಚಿಗೆ ಸಿಲುಕಿದ್ರು. ಅಡುಗೆ ಮಾಡಲು ಟೈಮ್​ ಲೀಮಿಟ್​ ಇದ್ದಿದ್ರಿಂದ ಸ್ವೀಟ್​ ಮಾಡಲು ಹೋಗಿ ರವೆ ಗಂಟು ಆಗಿ ಆಹಾರ ವೇಸ್ಟ್​ ಆಯ್ತು ಎಂದು ನಯನಾ ಹಾಗೂ ಚಂದನಾ ಬೇಸರ ವ್ಯಕ್ತಪಡಿಸಿದ್ರು.

ಬೇಗ ಬೇಗ ಅಡುಗೆ ಆಗ್ತಿಲ್ಲ ಅಂತಾ ವೈಷ್ಣವಿ ಕಣ್ಣೀರು ಹಾಕಿದ್ರು. ಇನ್ನೂ ಮಧ್ಯಾಹ್ನದ ಅಡುಗೆಯನ್ನು ಚಂದನಾ ಮಾಡಿದ್ರು. ಎಲ್ಲರೂ ಚಂದನಾ ಅವರ ಅಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ರಾತ್ರಿಯ ಅಡುಗೆಯನ್ನು ನಯನಾ ಮಾಡಿದ್ರು. ಆದ್ರೆ ಅಡುಗೆ ಅಷ್ಟಕ್ಕಷ್ಟೆ ಇತ್ತು ಎಂದು ಮನೆಯವರು ಮೂಗು ಮೂರಿದ ಪ್ರಸಂಗ ಕಂಡುಬಂತು.

Source: newsfirstlive.com Source link