ಅಫ್ಘಾನ್​ನ ಕರಾಳ ಕ್ಷಣಗಳ ‘ಆ ದಿನಗಳು’ ಹೇಗಿದ್ದವು? -ಕನ್ನಡಿಗ ಬಿಚ್ಚಿಟ್ಟ ಸತ್ಯಗಳು

ಅಫ್ಘಾನ್​ನ ಕರಾಳ ಕ್ಷಣಗಳ ‘ಆ ದಿನಗಳು’ ಹೇಗಿದ್ದವು? -ಕನ್ನಡಿಗ ಬಿಚ್ಚಿಟ್ಟ ಸತ್ಯಗಳು

ಉಡುಪಿ: ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಅರಾಜಕತೆಯಿಂದ ಅಲ್ಲಿರುವ ಭಾರತೀಯರ ರಕ್ಷಣೆ ದೊಡ್ಡ ಸವಾಲಾ​​ಗಿ ಪರಿಣಮಿಸಿದೆ. ಈಗಾಗಲೇ ಅಮೆರಿಕ ಸೇನೆಯ ಸಹಕಾರದಿಂದ 2 ಬ್ಯಾಚ್​​ನಲ್ಲಿ ಭಾರತೀಯರನ್ನ ಸುರಕ್ಷಿತವಾಗಿ ಸ್ಥಳಕ್ಕೆ ಕರೆದುಕೊಂಡು ಬರಲಾಗಿದೆ. ಜೊತೆಗೆ ಇನ್ನುಳಿದವರನ್ನ ವಾಪಸ್ ಕರೆದುಕೊಂಡು ಬರುವ ಎಲ್ಲಾ ತಯಾರಿಗಳು ನಡೆಯುತ್ತಿವೆ.

ಇನ್ನು 8 ತಿಂಗಳುಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದ ಉಡುಪಿ ಮೂಲದ ಮಂಜುನಾಥ್ ಎಂಬುವವರು, ಅಫ್ಘಾನ್​ ಕರಾಳ ದಿನಗಳು ಮತ್ತು ಅಲ್ಲಿಯ ವಿದ್ಯಮಾನಗಳು ಕುರಿತು ನ್ಯೂಸ್​ಫಸ್ಟ್​ನ ಜೊತೆ ಹಂಚಿಕೊಂಡಿದ್ದಾರೆ..

blank

ನಾನು ಎಂಟು ತಿಂಗಳ ಹಿಂದೆಯೇ ಭಾರತಕ್ಕೆ ಬಂದಿದ್ದೆ, ಮರಳಿ ಅಫ್ಘಾನ್​ಗೆ ಹೋಗಲು ಸಾಧ್ಯವಿಲ್ಲ ಎಂಬುಂದು ಮೊದಲೇ ಗೊತ್ತಿತ್ತು ಎಂದಿದ್ದಾರೆ. ನಾನು ಅಲ್ಲಿ ಯುಎಸ್​ ಆರ್ಮಿಯ ವೆಹಿಕಲ್​ ಮೆಂಟೆನೆನ್ಸ್​ನಲ್ಲಿ ಮೆಕಾನಿಲ್​ ಆಗಿ ಕೆಲಸ ಮಾಡುತ್ತಿದ್ದೆ. ಆದರೆ ಗಲಾಟೆ ಹೆಚ್ಚಿದಂತೆ ಒಂದೊಂದೆ ಬೇಸ್ ನಿಲ್ಲಿಸುತ್ತಾ ಬಂದರು. ಹೊರಗಡೆಗೂ ಬೇಸ್​ನ ಒಳಗಡೆಗೂ ಯಾವುದೇ ಟಚ್ ಇರ್ಲಿಲ್ಲ.

blank

ಅಲ್ಲಿ ಯಾವಾಗಲೂ ಗಲಾಟೆ ನಡೆಯುತ್ತಿತ್ತು. ಗಲಾಟೆ ಅಂದ್ರೆ ಮಾಮೂಲಿ ಗಲಾಟೆ ಅಲ್ಲ ಬರೀ ಮದ್ದು, ಗುಂಡಿನ ಗಲಾಟೆ ಅದು. ಅಲ್ಲಿನ ಜನರು ಗಲಾಟೆಗೆ ಒಗ್ಗಿ ಹೋಗಿದ್ರು. ಕಾಬೂಲ್​ನಲ್ಲಿ ಈಗಲೂ ನನ್ನ ಸ್ನೇಹಿತರು ಇದ್ದಾರೆ. ತಾಲಿಬಾನಿಗಳು ಅಧಿಕಾರ ತೆಗೆದುಕೊಂಡಾಗ ಅವರು ಹೆಚ್ಚು ಭಯ ಪಟ್ಟಿದ್ರಂತೆ ಎಂದು ಅಲ್ಲಿಯ ಭಯಾನಕ ಕಥನವನ್ನ ಬಿಚ್ಚಿಟ್ಟಿದ್ದಾರೆ. ಇನ್ನು ಉಡುಪಿ ಮಂಗಳೂರು ಭಾಗದ ಹೆಚ್ಚಿನ ಜನ ಅಫ್ಘಾನ್ ‌ನಲ್ಲಿ ಇದ್ರು. ಸದ್ಯ ಈಗ ಅಲ್ಲಿ ಯಾರು ಇಲ್ಲ. ಆರ್ಮಿಯವರು ನಮ್ಮನೆಲ್ಲ ಕಳುಹಿಸಿ ಕೊಟ್ಟಿದ್ದಾರೆ ಎಂದು ಮಂಜುನಾಥ್​ ಆ ದಿನಗಳನ್ನ ನೆನೆದಿದ್ದಾರೆ.

Source: newsfirstlive.com Source link