‘ದ್ವಿತ್ವ’ ಚಿತ್ರದ ಪ್ಲಾನ್ ಉಲ್ಟಾ-ಪಲ್ಟಾ ಮಾಡಿದ ಪಾಪಿ ಕೊರೊನಾ..!

‘ದ್ವಿತ್ವ’ ಚಿತ್ರದ ಪ್ಲಾನ್ ಉಲ್ಟಾ-ಪಲ್ಟಾ ಮಾಡಿದ ಪಾಪಿ ಕೊರೊನಾ..!

‘ದ್ವಿತ್ವ’ ಹೊಂಬಾಳೆಯ ಅಂಗಳದಲ್ಲಿ ಅರಳಲು ರೆಡಿಯಾಗಿರುವ ಸಸ್ಪೆನ್ಸ್ ಥ್ರಿಲ್ಲರ್​ ಸಿನಿಮಾ.. ಟೈಟಲ್​ ಪೋಸ್ಟರ್​ನಿಂದಲೇ ಸಿನಿರಸಿಕರಲ್ಲಿ ಕುತೂಹಲ ಹೆಚ್ಚಿಸಿರೋ ಚಿತ್ರ.. ಫಸ್ಟ್​ ಟೈಂ ಅಪ್ಪು, ನಿರ್ದೇಶಕ ಪವನ್​ ಜೊತೆ ದ್ವಿತ್ವ ಅಂಗಳಕ್ಕೆ ಕಾಲಿಡೋ ಹೊತ್ತಲ್ಲೇ ಪವರ್​ಸ್ಟಾರ್ ಅಭಿಮಾನಿಗಳಿಗೆ ಕೊಂಚ ಕಾಯುವ ನಿರಾಸೆಯ ಸುದ್ದಿಯೊಂದು ಹೊರ ಬಿದ್ದಿದೆ.

ಇದನ್ನೂ ಓದಿ: ಅಂದೇ ಹೇಳಿದ್ವಿ.. ದ್ವಿತ್ವಕ್ಕೆ ತ್ರಿಶಾನೇ ನಾಯಕಿ..!

ಹೊಂಬಾಳೆಯಲ್ಲಿ ಅಪ್ಪುಗೆ ದ್ವಿತ್ವ ಚಿತ್ರ ನಿರ್ದೇಶನ ಮಾಡೋಕೆ ಹೊರಟ ಪವನ್​​ಗೆ ಈಗ ಕೊರೊನಾ ಅಡ್ಡ ಬಂದಿದೆ. ಪ್ರೀ ಪ್ರೊಡಕ್ಷನ್​ ಮುಗಿಸಿ ಶೂಟಿಂಗ್​ ಅಖಾಡಿಕ್ಕಿಳಿಯಲು ರೆಡಿಯಾಗಿದ್ದ ಪವನ್​ ದೇಹವನ್ನ ಮಹಾಮಾರಿ ಕೊರೊನಾ ಅವರಿಸಿದೆ. ಕಿಲ್ಲರ್ ಕೊರೊನಾ ಕಿರಿಕ್​ನಿಂದ ಡೈರೆಕ್ಟರ್​ ಪವನ್ ಕ್ವಾರಂಟೀನ್​ ಆಗಿದ್ದು, ಪವನ್ ದ್ವಿತ್ವ ಶೂಟಿಂಗ್ ಲೆಕ್ಕಚಾರ ಉಲ್ಟಾ ಪಲ್ಟಾ ಆಗಿದೆ.

blank

ಯೆಸ್​.. ನಿರ್ದೇಶಕ ಪವನ್​ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಈ ವಿಷಯವನ್ನು ಸ್ವತಃ ಪವನ್​ ಅವರೇ ಖಚಿತ ಪಡಿಸಿದ್ದಾರೆ. ಅಲ್ಲದೇ ಅವರ ಶ್ವಾಸ ಕೋಶದ ಫೋಟೋ ಶೇರ್​ ಮಾಡಿ, ಆದಷ್ಟು ಬೇಗ ರಿಕವರಿ ಆಗಿಬರುವುದಾಗಿ ವಿಶ್ವಾಸದಿಂದಲೇ ಹೇಳಿಕೊಂಡಿದ್ದಾರೆ. ಜೊತೆಗೆ ಕೊರೊನಾ ಗೆದ್ದು ಎದ್ದು ಬನ್ನಿ ಎಂದು ಪವನ್​ಗೆ ಅವರ​ ಹಿತೈಶಿಗಳು ಹಾರೈಸಿದ್ದಾರೆ.

ಇದನ್ನೂ ಓದಿ:‘ದ್ವಿತ್ವ’ ಸಿನಿಮಾದಲ್ಲಿ ಮತ್ತೊಮ್ಮೆ ಮೋಡಿ ಮಾಡುತ್ತಾ ‘ಪವರ್’ ಜೋಡಿ?

ಪವನ್​ಗೆ ಕೊರೊನಾ ಬಂದಿರುವ ಹಿನ್ನಲೆ ಸೆಪ್ಟೆಂಬರ್​ನಲ್ಲಿ ಶುರುವಾಗಬೇಕಿದ್ದ ದ್ವಿತ್ವ ಶೂಟಿಂಗ್ ಸ್ವಲ್ಪ ತಡವಾಗಿ ಆರಂಭವಾಗಲಿದೆ. ಪವನ್ ಕೊರೊನಾದಿಂದ ಚೇತರಿಸಿಕೊಂಡ ನಂತರ ಮೊದಲ ಶೆಡ್ಯೂಲ್​ ಪ್ಲಾನ್​ ಮಾಡಿ.. ಅಕ್ಟೋಬರ್​ನಲ್ಲಿ ಪವನ್​ ತಮ್ಮ ಟೀಂ ಜೊತೆ ಶೂಟಿಂಗ್​ ಆಖಾಡಕ್ಕೆ ಇಳಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಿನಿ ರಸಿಕರ ತಲೆಗೆ ಹುಳು ಬಿಟ್ಟ ‘ದ್ವಿತ್ವ’ ಟೈಟಲ್​.. ಹಾಗಂದ್ರೆ ಏನು?

 

Source: newsfirstlive.com Source link