ಗುಂಡು ಹಾರಿಸಿ ಖೂಬಾಗೆ ಸ್ವಾಗತ​; ಕಾರ್ಯಕ್ರಮ ಆಯೋಜಕರ ವಿರುದ್ಧ ಬಿತ್ತು ಕೇಸ್

ಗುಂಡು ಹಾರಿಸಿ ಖೂಬಾಗೆ ಸ್ವಾಗತ​; ಕಾರ್ಯಕ್ರಮ ಆಯೋಜಕರ ವಿರುದ್ಧ ಬಿತ್ತು ಕೇಸ್

ಯಾದಗಿರಿ: ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾಗೆ ಸ್ವಾಗತ ಕೋರಿದ ಪ್ರಕರಣ ಸಂಬಂಧ ಪೊಲೀಸರು ಕಾರ್ಯಕ್ರಮ ಆಯೋಜಕರು ಮತ್ತು ನಗರದ ವೀರಶೈವ ಕಲ್ಯಾಣ ಮಂಟಪದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮ್ಮ ವೀರಶೈವ ಕಲ್ಯಾಣ ಮಂಟಪದಲ್ಲಿ ರಾತ್ರಿ ವೇಳೆ ಬಿಜೆಪಿ ಜನಾಶೀರ್ವಾದ ಯಾತ್ರೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದ ಮಾಲೀಕರ ವಿರುದ್ಧವೂ ಕೇಸ್​​ ಆಗಿದೆ. ಪೊಲೀಸರ ಅನುಮತಿ ಪಡೆಯದೆ ಕಾರ್ಯಕ್ರಮ ಆಯೋಜಿಸುವ ಮೂಲಕ ಕೊರೊನಾ ರೂಲ್ಸ್​ ಬ್ರೇಕ್​​ ಮಾಡಿದ ಎಲ್ಲರ ವಿರುದ್ಧ ಕೇಸ್​​ ಮಾಡಲಾಗಿದೆ.

ಇದನ್ನೂ ಓದಿ: ಹಾಡಹಗಲೇ ಗುಂಡಿನ ಸದ್ದು; ಕೇಂದ್ರ ಸಚಿವರ ಸ್ವಾಗತಕ್ಕಾಗಿ ಬಿಜೆಪಿ ನಾಯಕರ ಕೈಯಲ್ಲಿ ಬಂದೂಕು

ಈ ಹಿಂದೆಯೇ ಗುಂಡು ಹಾರಿಸಿದ ಯರಗೋಳ ಗ್ರಾಮದ ನಾಲ್ವರ ವಿರುದ್ಧ FIR​​​​​ ದಾಖಲಿಸಿದ್ದರು. ಶರಣಪ್ಪ, ಮೋನಪ್ಪ, ನಿಂಗಪ್ಪ, ದೇವಿಂದ್ರ ಎಂಬ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​​​ ನಂಬರ್​​​ 115/2021 ಕಲಂ 25 ಆಯುಧ ಅಧಿನಿಯಮದ ಪ್ರಕಾರ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೇ ಯಾದಗಿರಿ ಎಸ್.ಪಿ ವೇದಮೂರ್ತಿ, ತಮ್ಮ ಠಾಣೆಯ ಸಿಬ್ಬಂದಿಯಾದ ವಿರೇಶ್, ಸಂತೋಷ ಹಾಗೂ ಮೆಹಬೂಬ್ ಎಂಬ ಮೂವರು ಕಾನ್ಸ್​​ಟೇಬಲ್​​ಗಳನ್ನು ಅಮಾನತು ಮಾಡಿ ಆದೇಶ ನೀಡಿದ್ದರು.

ಇತ್ತೀಚೆಗೆ ಯಾದಗಿರಿಯಲ್ಲಿ ನಡೆದ ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಗಾಳಿಯಲ್ಲಿ ಗುಂಡುಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾಗೆ ಸ್ವಾಗತ ಕೋರಲಾಗಿತ್ತು. ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಬಳಿ ಫೈರಿಂಗ್​ ಮಾಡಲಾಗಿತ್ತು. ಗಾಳಿಯಲ್ಲಿ ಗುಂಡು ಹಾರಿಸಲು ನಾಡ ಬಂದೂಕು ವ್ಯವಸ್ಥೆಯನ್ನು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮಾಡಿದ್ದಾರೆ ಎಂದು ತಿಳಿದುಬಂದಿತ್ತು.

ಇದನ್ನೂ ಓದಿ: ಗುಂಡು ಹಾರಿಸಿ ಕೇಂದ್ರ ಸಚಿವ ಖೂಬಾಗೆ ಸ್ವಾಗತ ಪ್ರಕರಣ​; ನಾಲ್ವರ ವಿರುದ್ಧ FIR

Source: newsfirstlive.com Source link