14 ವರ್ಷಗಳ ನಂತರ ತೆರೆ ಮೇಲೆ ಮತ್ತೆ ಒಂದಾದ ಜಗ್ಗೇಶ್​-ಗುರುಪ್ರಸಾದ್​ ಜೋಡಿ

14 ವರ್ಷಗಳ ನಂತರ ತೆರೆ ಮೇಲೆ ಮತ್ತೆ ಒಂದಾದ ಜಗ್ಗೇಶ್​-ಗುರುಪ್ರಸಾದ್​ ಜೋಡಿ

ನವರಸ ನಾಯಕ ಜಗ್ಗೇಶ್​ರ ಌಕ್ಟಿಂಗ್​ ಸ್ಕಿಲ್ಸ್​ ಬಗ್ಗೆ ಕೇಳ್ಬೇಕಾ? ಅವ್ರು ಸುಮ್ನೇ ಸ್ಕ್ರೀನ್​ ಮೇಲೆ ಬಂದ್ರೆ ಸಾಕು, ಅವ್ರನ್ನ ನೋಡಿಯೇ ನಗೋದಕ್ಕೆ ಜನ ಶುರು ಮಾಡ್ಬಿಡ್ತಾರೆ. ಇನ್ನ, ಜಗ್ಗೇಶ್​ರವರ ಜೊತೆ ಗುರುಪ್ರಸಾದ್​ ಬಂದ್ರೆ ಕತೆ ಮುಗೀತು, ಕೂತ್​ ಜಾಗದಿಂದ ಕೆಳಗೆ ಬಿದ್ದು ನಗ್ತಾಯಿರ್ತೀವಿ. ಇದೀಗ, ಮತ್ತೆ ಈ ಜೋಡಿ ತೆರೆ ಮೇಲೆ ಮೋಡಿ ಮಾಡೋದಕ್ಕೆ ಬರ್ತಾಯಿದೆ.

ಹೌದೂ, ಮಠ, ಎದ್ದೇಳು ಮಂಜುನಾಥ ಸಿನಿಮಾ ಆಗಿ 14 ವರ್ಷಗಳ ನಂತರ ಜಗ್ಗೇಶ್ ಹಾಗೂ ನಿರ್ದೇಶಕ ಗುರುಪ್ರಸಾದ್ ಅವರು ಮತ್ತೆ ಸಿನಿಮಾಗಾಗಿ ಒಂದಾಗಿದ್ದಾರೆ. ಆ  ರಂಗನಾಯಕ ಚಿತ್ರ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಚಿತ್ರದ ಬಗ್ಗೆ ಹಾಗೂ ಚಿತ್ರದ ನಟರ ಬಗ್ಗೆ ಮಾತು ಕತೆಯನ್ನ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಸ್ವತಃ ಜಗ್ಗೇಶ್​​ರವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ, ಚೀತ್ರೀಕರಣದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

 

 

Source: newsfirstlive.com Source link