4 ವರ್ಷಗಳ ಬಳಿಕ ಮಾಜಿ ರೌಡಿ ಶೀಟರ್ಸ್​​ ಅಗ್ನಿ ಶ್ರೀಧರ್​​, ಬಚ್ಚನ್​​ಗೆ ವಾರ್ನಿಂಗ್​​ ಕೊಟ್ಟ ಪೊಲೀಸರು​?

4 ವರ್ಷಗಳ ಬಳಿಕ ಮಾಜಿ ರೌಡಿ ಶೀಟರ್ಸ್​​ ಅಗ್ನಿ ಶ್ರೀಧರ್​​, ಬಚ್ಚನ್​​ಗೆ ವಾರ್ನಿಂಗ್​​ ಕೊಟ್ಟ ಪೊಲೀಸರು​?

ಬೆಂಗಳೂರು: ​ನಾಲ್ಕು ವರ್ಷಗಳ ಬಳಿಕ ಪತ್ರಕರ್ತ ಮತ್ತು ಮಾಜಿ ರೌಡಿ ಶೀಟರ್ ಅಗ್ನಿ ಶ್ರೀಧರ್​​ ಅವರಿಗೆ ಬೆಂಗಳೂರು ಪೊಲೀಸರು ವಾರ್ನಿಂಗ್​​ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಯಾವ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಡಿಸಿಪಿ ಹರೀಶ್​​ ಪಾಂಡೆ ಕುಮಾರಸ್ವಾಮಿ ಲೇಔಟ್ ಠಾಣೆಗೆ ಕರೆಸಿ ವಾರ್ನ್​​ ಮಾಡಿದ್ದಾರೆ. ಅಲ್ಲದೇ CRPC 110 ಅಡಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದಾರೆ.

ಅಗ್ನಿ ಶ್ರೀಧರ್​​​, ಬಚ್ಚನ್​​ ಸೇರಿದಂತೆ 100ಕ್ಕೂ ಹೆಚ್ಚು ರೌಡಿ ಶೀಟರ್​​​ಗಳಿಗೆ ವಾರ್ನಿಂಗ್​​ ಕೊಟ್ಟು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಬೆಂಗಳೂರು ಸೌತ್​​ನಲ್ಲಿ ಇನ್ನೂ ಕ್ರೈಮ್​​ನಲ್ಲಿ ಭಾಗಿಯಾಗುತ್ತಿರುವ ಮತ್ತು ಹಳೆಯ ಪ್ರಕರಣಗಳಲ್ಲಿ ಆರೋಪಿಗಳಾದ ರೌಡಿ ಶೀಟರ್ಸ್​​ಗೆ ವಾರ್ನಿಂಗ್​​ ನೀಡಲಾಗಿದೆ.

ಇನ್ನು, ಒಂದು ಲಕ್ಷದಿಂದ ಹತ್ತು ಲಕ್ಷದವರೆಗೂ ಬಾಂಡ್ ಬರೆಸಿಕೊಂಡ ಬೆಂಗಳೂರು ಸೌತ್​​ ಪೊಲೀಸರು, ಯಾವುದಾರೂ ಕ್ರೈಂನಲ್ಲಿ ಭಾಗಿಯಾದರೆ ಬಂಧಿಸಲಾಗುವುದು. ಭಾರೀ ಮೊತ್ತದ ದಂಡದ ಜತೆಗೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿ ಭೇಟಿಗೆ ಸುಪ್ರೀಂಕೋರ್ಟ್ ಒಪ್ಪಿಗೆ

ಯಾವ ಯಾವ ಗ್ಯಾಂಗ್ಸ್​ಗೆ ವಾರ್ನಿಂಗ್​​

ಇನ್ನು, ಸೈಲೆಂಟ್ ಸುನೀಲ್ ಗ್ಯಾಂಗ್​​, ಸೈಕಲ್ ರವಿ ಗ್ಯಾಂಗ್, ಮೃತ ರೌಡಿಶೀಟರ್ ಕಾರದ ಪುಡಿ ಅರಸಯ್ಯ ಗ್ಯಾಂಗ್​​, ಕುಳ್ಳು ರಿಜ್ವಾನ್ & ಬೇಕರಿ ರಘು ಗ್ಯಾಂಗ್ ಮತ್ತು ಬನಶಂಕರಿ ಸ್ಟಾಂಡ್ ಕುಟ್ಟಿ & ಪಳನಿ ಗ್ಯಾಂಗ್​​ಗೆ ವಾರ್ನಿಂಗ್​​ ನೀಡಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.

Source: newsfirstlive.com Source link