‘ಡ್ಯಾನ್ಸ್ ರಾಜಾ​ ಡ್ಯಾನ್ಸ್​’ ಅಂತಿದ್ದಾರೆ ‘ಕನ್ನಡತಿ’ ನಟ ರಕ್ಷಿತ್

‘ಡ್ಯಾನ್ಸ್ ರಾಜಾ​ ಡ್ಯಾನ್ಸ್​’ ಅಂತಿದ್ದಾರೆ ‘ಕನ್ನಡತಿ’ ನಟ ರಕ್ಷಿತ್

ಸ್ಟಾರ್ ಸುವರ್ಣದಲ್ಲಿ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ಬರ್ತಿದೆ ಅಂತಾ ನಾವು ನಿಮಗೆ ಮೊದಲೇ ಹೇಳಿದ್ವಿ. ಆ ಶೋನ ಪ್ರೊಮೋ ಕೂಡ ರಿಲೀಸ್​ ಆಗಿದ್ದು, ಬಿಗ್​ಬಾಸ್​ ಸೀಸನ್​ 7ರ ವಿನ್ನರ್​ ಶೈನ್​ ಶೆಟ್ಟಿ ಈ ಶೋ ಹೋಸ್ಟ್​ ಮಾಡ್ತಿದ್ದಾರೆ.

ಡ್ಯಾನ್ಸ್​ ಡ್ಯಾನ್ಸ್​ ಶೋ ಬಗ್ಗೆ ನಿಮಗೆ ನಾವು ಹೆಚ್ಚು ಹೇಳೋದೆ ಬೇಡ. ಆಡಿಷನ್ ಪ್ರೊಸೆಸ್‌ ಕೂಡ ನಡೆದಿದೆ. ಈ ಶೋಗೆ ಕನ್ನಡದ ನಟ ಮಾತ್ರವಲ್ಲ ಸೂಪರ್​ ಡ್ಯಾನ್ಸ​ರ್​ ಡೈನಾಮಿಕ್​ ಪ್ರಿನ್ಸ್​ ಪ್ರಜ್ವಲ್​ ದೇವ್​ರಾಜ್ ಜಡ್ಜ್​ ಸೀಟ್​ ಅಲಂಕರಿಸಲಿದ್ದಾರೆ. ಕನ್ನಡ ಇಂಡಸ್ಟ್ರಿಯ ಸೂಪರ್​ ಕೊರಿಯೋಗ್ರಫರ್​ ಹಾಗೂ ನಿದೇರ್ಶಕರಾಗಿರುವ ಹರ್ಷ ಈ ಶೋಗೆ ಜಡ್ಜ್​ ಆಗಿದ್ದಾರೆ. ಕನ್ನಡದ ಹುಡುಗಿ ಹರಿಪ್ರಿಯ ಡ್ಯಾನ್ಸ್​ ಡ್ಯಾನ್ಸ್​ ಶೋಗೆ ಜಡ್ಜ್​ ಆಗಿದ್ದಾರೆ.

blank

ಡ್ಯಾನ್ಸ್​ ಡ್ಯಾನ್ಸ್​ ಶೋ ಈಗಾಗಲೇ ಕ್ರೇಜ್​ ಮೂಡಿಸಿರುವ ರಿಯಾಲಿಟಿ ಶೋಗಳಲ್ಲಿ ಒಂದು. ಕಳೆದ ಆವೃತ್ತಿಯಲ್ಲಿ ಗೆಸ್ಟ್​ ಆಗಿ ಬಂದಿದ್ದ ಅಪ್ಪು, ಕಾರ್ಯಕ್ರಮದ ಲಾಂಚ್​ ಮಾಡಿದ್ದ ವಿಷಯವನ್ನು ಕೂಡಾ ತಿಳಿಸಿದ್ವಿ. ಇನ್ನೂ ಡ್ಯಾನ್ಸ್​ ಶೋಗೆ ಕಂಟೆಸ್ಟೆಂಟ್​ ಆಗಿ ಕನ್ನಡದ ನಟಿ ಸುಪ್ರಿತಾ ನಾರಾಯಣ್​ ಪರ್​ರ್ಫಾಮ್​ ಮಾಡಲಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿದ್ವಿ.

ಇದೀಗ ಮತ್ತೊಬ್ಬ ಕನ್ನಡದ ನಟ ಡ್ಯಾನ್ಸ್​ ಡ್ಯಾನ್ಸ್​ ಶೋಗೆ ಕಂಟೆಸ್ಟೆಂಟ್​ ಆಗಿದ್ದಾರೆ. ಯೆಸ್​ ಅವರು ಮತ್ಯಾರು ಅಲ್ಲಾ ರಕ್ಷಿತ್​. ಸದ್ಯ ಕನ್ನಡತಿ ಧಾರಾವಾಹಿಯಲ್ಲಿ ಆದಿ ಪಾತ್ರದ ಮೂಲಕ ನಿಮ್ಮನ್ನು ರಂಜಿಸ್ತಾಯಿರುವ ರಕ್ಷಿತ್​. ಇನ್ನೇನು ಕೆಲವೇ ದಿನಗಳಲ್ಲಿ ಡ್ಯಾನ್ಸ್​ ಮಾಡಿ ನಿಮ್ಮನ್ನು ಮತ್ತಷ್ಟು ರಂಜಿಸಲಿದ್ದಾರೆ. ರಕ್ಷಿತ್​ ಒಬ್ಬ ಸೂಪರ್​ ಡ್ಯಾನ್ಸರ್​ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಮಾತ್ರವಲ್ಲದೇ ರಕ್ಷಿತ್​ ಒಂದು ಡ್ಯಾನ್ಸ್​ ಕ್ಲಾಸ್​ ಕೂಡ ಮಾಡಿದ್ದು, ಸಾಕಷ್ಟು ಮಕ್ಕಳಿಗೆ ಡ್ಯಾನ್ಸ್​ ಕಲಿಸುತ್ತಿದ್ದಾರೆ.

Source: newsfirstlive.com Source link