ರಾಜ್ಯದಲ್ಲಿ ಇಂದು 1,432 ಮಂದಿಗೆ ಕೊರೊನಾ- 27 ಮಂದಿ ಸಾವು

– ಪಾಸಿಟಿವಿಟಿ ರೇಟ್ ಶೇ.0.80ಕ್ಕೆ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಇಂದು ಒಂದೂವರೆ ಸಾವಿರ ಸನಿಹಕ್ಕೆ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಂದು ಕೂಡ ರಾಜ್ಯದಲ್ಲಿ 1,432 ಕೋವಿಡ್ ಕೇಸ್ ದಾಖಲಾಗಿದ್ದು, 27 ಜನ ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ರೇಟ್ 0.80%ಗೆ ಇಳಿಕೆಯಾಗಿದೆ. 100 ಜನರಿಗೆ ಟೆಸ್ಟ್ ಮಾಡಿದರೆ ಒಬ್ಬರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.

ಬೆಂಗಳೂರಿನಲ್ಲಿ ಕೂಡ ಇಂದು 318 ಕೇಸ್ ದಾಖಲಾಗಿದ್ದು, ಕೊರೊನಾಗೆ ಇಬ್ಬರು ಮೃತಪಟ್ಟಿದ್ದಾರೆ. ಜೊತೆಗೆ ರಾಜ್ಯದಲ್ಲಿ ಇಂದು 1,538 ಜನ ಡಿಸ್ಚಾರ್ಜ್ ಆಗಿದ್ದು, ಬೆಂಗಳೂರಿನಲ್ಲಿ 294 ಮಂದಿ ಇಂದು ಡಿಸ್ಚಾರ್ಜ್ ಆಗಿದ್ದಾರೆ.

 

ಇಂದು ರಾಜ್ಯದಲ್ಲಿ ಆ್ಯಕ್ಟೀವ್ ಕೇಸ್ ಗಳ ಸಂಖ್ಯೆ 21,133ಕ್ಕೆ ಏರಿಕೆಯಾಗಿದೆ. ಜೊತೆಗೆ ಇಂದು ಕೋವಿಡ್ ಟೆಸ್ಟ್ ಕೂಡ ಒಂದು ಲಕ್ಷಕ್ಕೂ ಹೆಚ್ಚು ಕೊವಿಡ್ ಟೆಸ್ಟ್ ಆಗಿದೆ. 1,76,977 ಕೋವಿಡ್ ಟೆಸ್ಟ್ ಆಗಿದ್ದು, 1,432 ಪಾಸಿಟಿವ್ ಆಗಿರೋದು ಕೊರೊನಾ ಕಂಟ್ರೋಲ್ ನಲ್ಲಿ ಇರೋದು ಗೊತ್ತಾಗ್ತಿದೆ.

ರಾಜಧಾನಿ ಬೆಂಗಳೂರಿನಲ್ಲಿ 318 ಜನರಿಗೆ ಸೋಂಕು ತಗುಲಿದ್ರೆ 294 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಬೆಂಗಳೂರು ನಗರದಲ್ಲಿ 7,942 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಮಹಾಮಾರಿ ಬೆಂಗಳೂರಿನಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಮತ್ತು ಮೈಸೂರಿನಲ್ಲಿ ಕೋವಿಡ್ ಶತಕ ದಾಖಲಿಸಿದೆ. ಇದನ್ನೂ ಓದಿ: “ಜೋರಾದ ಸದ್ದು ಕೇಳಿಸ್ತು.. ನೋಡಿದ್ರೆ ಮನೆ ಮೇಲೆ ಇಬ್ರು ಬಿದ್ದಿದ್ರು”

blank

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 4, ಬೆಳಗಾವಿ 46, ಬೆಂಗಳೂರು ಗ್ರಾಮಾಂತರ 11, ಬೆಂಗಳೂರು ನಗರ 318, ಬೀದರ್ 1, ಚಾಮರಾಜನಗರ 6, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 32, ಚಿತ್ರದುರ್ಗ 09, ದಕ್ಷಿಣ ಕನ್ನಡ 326, ದಾವಣಗೆರೆ 28, ಧಾರವಾಡ 7, ಗದಗ 1, ಹಾಸನ 94, ಹಾವೇರಿ 3, ಕಲಬುರಗಿ 6, ಕೊಡಗು 72, ಕೋಲಾರ 20, ಕೊಪ್ಪಳ 2, ಮಂಡ್ಯ 30, ಮೈಸೂರು 103, ರಾಯಚೂರು 4, ರಾಮನಗರ 4, ಶಿವಮೊಗ್ಗ 47, ತುಮಕೂರು 46, ಉಡುಪಿ 162, ಉತ್ತರ ಕನ್ನಡ 42, ವಿಜಯಪುರ 1 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Source: publictv.in Source link