‘ಮೇಡ್​ ಇನ್​​ ಇಟಲಿ’ಗಾಗಿ ಸೋನಿಯಾ, ‘ಮೇಡ್​ ಇನ್​​ ಇಂಡಿಯಾ’ಗಾಗಿ ಮೋದಿ-ಬಿ.ಶ್ರೀರಾಮುಲು

‘ಮೇಡ್​ ಇನ್​​ ಇಟಲಿ’ಗಾಗಿ ಸೋನಿಯಾ, ‘ಮೇಡ್​ ಇನ್​​ ಇಂಡಿಯಾ’ಗಾಗಿ ಮೋದಿ-ಬಿ.ಶ್ರೀರಾಮುಲು

ಬಳ್ಳಾರಿ: ರಾಜ್ಯ ಭಾರತೀಯ ಜನತಾ ಪಕ್ಷದಿಂದ ನಡೆಸುತ್ತಿರುವ ಜನಾಶೀರ್ವಾದ ಯಾತ್ರೆ ಈಗ ಬಳ್ಳಾರಿ ತಲುಪಿದೆ. ಇಂದು ಬಳ್ಳಾರಿಯಲ್ಲಿ ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ರಾಜ್ಯ ಸಾರಿಗೆ ಸಚಿವ ಬಿ. ಶ್ರೀರಾಮುಲು ಭಾಗಿಯಾಗಿದ್ದರು. ಈ ವೇಳೆ ವೇದಿಕೆ ಮೇಲೆ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು.

19 ರಾಜ್ಯ 212 ಲೋಕಸಭೆಯಲ್ಲಿ ಈ ಜನಾಶೀರ್ವಾದ ಯಾತ್ರೆ ‌ಮಾಡುತ್ತಿದ್ದೇವೆ. ರಾಜ್ಯದ 70% ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಸದಸ್ಯರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಬಗ್ಗೆ ಇತ್ತೀಚೆಗೆ ಕಾಂಗ್ರೆಸ್ ಹೆಚ್ಚು ಆಸಕ್ತಿ ತೋರಿಸುತ್ತಿದೆ. ಇದು‌ ಮುಂಬುರುವ ಚುನಾವಣೆ ಗಿಮಿಕ್ಸ್ ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದರು.

May be an image of 1 person, standing and indoor

ಕಲ್ಯಾಣ ಕರ್ನಾಟಕದಲ್ಲಿ 40 ಜನರು ಬಿಜೆಪಿ ಶಾಸಕರಿದ್ದಾರೆ ಎಂದು ತಪ್ಪು ಹೇಳಿದ ಬಿ.ಶ್ರೀರಾಮುಲು ಬಳ್ಳಾರಿಯಲ್ಲಿ ಕಾಂಗ್ರೆಸ್​ ಅನ್ನು ಬೇರು ಸಮೇತ ಕಿತ್ತು ಎಸೆದಿದ್ದೇವೆ ಎಂದರು. ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರಬಹುದು ಎಂದು ಕನಸು ಕಾಣುತ್ತಿದೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿಯೇ ಗೆಲ್ಲೋದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ 20 ವರ್ಷ ಮೋದಿ‌ ಪ್ರಧಾನಿಯಾಗಿರುತ್ತಾರೆ. ರಾಹುಲ್ ಗಾಂಧಿ ಕೇವಲ ಫೋಟೋದಲ್ಲಿ ಮಾತ್ರ ನಾಯಕರು. ಮೇಡ್ ಇನ್ ಇಂಡಿಯಾ ಬೇಕಂದರೆ ಮೋದಿಯನ್ನೇ ಆಯ್ಕೆ ಮಾಡಿ. ಮೇಡ್ ಇನ್ ಇಟಲಿ ಬೇಕಂದರೆ ಸೋನಿಯಾ ಆಯ್ಕೆ ಮಾಡಿ ಎಂದು ಕುಟುಕಿದರು.

ಇದನ್ನೂ ಓದಿ: ಅಫ್ಘಾನ್​ನ ಕರಾಳ ಕ್ಷಣಗಳ ‘ಆ ದಿನಗಳು’ ಹೇಗಿದ್ದವು? -ಕನ್ನಡಿಗ ಬಿಚ್ಚಿಟ್ಟ ಸತ್ಯಗಳು

ಶೇ.70 ರಷ್ಟು ವ್ಯಾಕ್ಸಿನ್​​ ದೇಶದಲ್ಲಿ ಪೂರ್ಣಗೊಂಡಿದೆ. ವ್ಯಾಕ್ಸಿನ್ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡಿ ಜನರ ದಾರಿ ತಪ್ಪಿಸಿದೆ. ಕಾಂಗ್ರೆಸ್ ಏನೇ ಮಾಡಿದ್ರು ಅಧಿಕಾರಕ್ಕೆ ಬರೋದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಹಗಲುಗನಸು ಕಾಣ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Source: newsfirstlive.com Source link