ತಲೆಗೆ ಹಾಳೆ ಟೋಪಿ ತೊಟ್ಟು, ಮುಖಕ್ಕೆ ಮಾಸ್ಕ್​ ಹಾಕಿ ಮತ್ತೆ ಗದ್ದೆಗೆ ಇಳಿದ ಕೇಂದ್ರ ಸಚಿವೆ

ತಲೆಗೆ ಹಾಳೆ ಟೋಪಿ ತೊಟ್ಟು, ಮುಖಕ್ಕೆ ಮಾಸ್ಕ್​ ಹಾಕಿ ಮತ್ತೆ ಗದ್ದೆಗೆ ಇಳಿದ ಕೇಂದ್ರ ಸಚಿವೆ

ಉಡುಪಿ: ಮೊನ್ನೆ ಕೆಂದ್ರ ಸಚಿವೆ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆ ಅಂಗವಾಗಿ ಮಂಡ್ಯಕ್ಕೆ ಭೇಟಿ ನೀಡಿದ ಸಮಯದಲ್ಲಿ, ಸೀದಾ ಭತ್ತದ ಗದ್ದೆಗೆ ಇಳಿದು ರೈತ ಮಹಿಳೆಯರ ಜೊತೆ ಸೇರಿ ಭತ್ತ ನಾಟಿ ಮಾಡಿ ಗಮನ ಸೆಳೆದಿದ್ದರು. ಅದರ ಬೆನ್ನಲ್ಲೇ ಸಚಿವೆ ಮತ್ತೆ ಭತ್ತದ ಗದ್ದಗೆ ಕಾಲಿಟ್ಟಿದ್ದು, ಈ ಬಾರಿ ಗದ್ದೆಯಲ್ಲಿನ ಕಳೆ(ಕಸ) ಕಿತ್ತಿದ್ದಾರೆ.

blank

ಜಿಲ್ಲೆಯ ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ, ಶಾಸಕ ರಘುಪತಿ ಭಟ್ ನೇತೃತ್ವದ ಹಡಿಲು (ಪಾಳು) ಭೂಮಿ ಬೇಸಾಯ ಅಭಿಯಾನದಲ್ಲಿ ಪಾಲ್ಗೊಂಡ ಅವರು ರೈತ ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿಗಳ ಜೊತೆಗೂಡಿ ಗದ್ದೆಯಲ್ಲಿನ ಕಸ ಕಿತ್ತು ಹಸನು ಮಾಡಿದ್ದಾರೆ.

blank

ಇದನ್ನೂ ಓದಿ: ಜನಾಶೀರ್ವಾದ ಯಾತ್ರೆ: ಗದ್ದೆಗಿಳಿದು ಭತ್ತ ನಾಟಿ ಮಾಡಿದ ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಪಾಳುಬಿದ್ದ ಕೃಷಿಭೂಮಿಗೆ ಕಾಯಕಲ್ಪ ನೀಡುವ ಕೆಲಸ ನಡೆಯುತ್ತಿದೆ. ಹಡಿಲು ಭೂಮಿಯಲ್ಲಿ ಬೆಳೆ ಬೆಳೆಸುವ ಅಭಿಯಾನದ ಹೆಸರಲ್ಲಿ ಸುಮಾರು 2,000 ಎಕರೆಗಳಷ್ಟು ಹೆಚ್ಚಿನ ಭತ್ತದ ಬೇಸಾಯ ಕಾರ್ಯ ನಡೆಯುತ್ತಿದೆ.

blank

ಇದನ್ನೂ ಓದಿ: ‘ಸುಮಲತಾ ಸುತ್ತ ಗೂಂಡಾಗಳು, ಫ್ರಾಡ್​​ಗಳಿದ್ದಾರೆ’ -ರವೀಂದ್ರ ಶ್ರೀಕಂಠಯ್ಯ ಗಂಭೀರ ಆರೋಪ

blank

Source: newsfirstlive.com Source link