‘ಎದೆ ತುಂಬಿ ಹಾಡುವೇನು’ ಶೋನಲ್ಲಿ ರಘು ದೀಕ್ಷಿತ್​ ಕಣ್ಣೀರು..

‘ಎದೆ ತುಂಬಿ ಹಾಡುವೇನು’ ಶೋನಲ್ಲಿ ರಘು ದೀಕ್ಷಿತ್​ ಕಣ್ಣೀರು..

ಎದೆ ತುಂಬಿ ಹಾಡುವೇನು ಸಿಂಗಿಂಗ್​ ಶೋ ಅಂದರೆ ಸಾಕು ಎಸ್​ಪಿಬಿ ಧ್ವನಿ ಕಿವಿಯಲ್ಲಿ ಮುಳುಗುತ್ತೆ. ಎಲ್ಲೋ ಬೆರಳೆಣಿಕೆಯಷ್ಟು ಸಿಂಗಿಂಗ್​ ಶೋಗಳು ಇದ್ದ ಸಮಯದಲ್ಲಿ ಒಂದು ಬ್ರ್ಯಾಂಡ್​ ಆಗಿ ಹೊರ ಹೊಮ್ಮಿದ್ದು ‘ಎದೆ ತುಂಬಿ ಹಾಡುವೇನು’ ಕಾರ್ಯಕ್ರಮ. ಇಂತಹ ಅದ್ಭುತ ಶೋ ಮೂಲಕ ಅದೆಷ್ಟೋ ಪ್ರತಿಭೆಗಳು ತಮ್ಮ ಗಾಯನ ಜರ್ನಿ ಆರಂಭಿಸಿದವು.

ಎಸ್​ಪಿಬಿ ಅವರ ಅನುಪಸ್ಥಿತಿಯಲ್ಲಿ ಎದೆ ತುಂಬಿ ಹಾಡುವೇನು 2021 ಲಾಂಚ್​ ಆಗಿದ್ದು, ಎಲ್ಲರ ಮನೆಯಲ್ಲಿಯೂ ಸಂಗೀತ ಸ್ವರನಾದ ಮೇಳೈಸುತ್ತಿದೆ. ಆಡಿಷನ್​ ಪ್ರಕ್ರಿಯೆ ಪ್ರಾರಂಭವಾಗಿದ್ದು 8 ಜನ ಕಂಟೆಸ್ಟಂಟ್ಸ್​ ಸೆಲೆಕ್ಟ್​ ಆಗಿದ್ದಾರೆ.

ಇದನ್ನೂ ಓದಿ:ಇಂಡಿಯನ್ ಐಡಿಯಲ್​ ಟಾಪ್​ ಫೈನಲ್ಲಿ ಮಿಂಚಿದ ಕನ್ನಡಿಗ ನಿಹಾಲ್​ ತಾವ್ರೋ

blank

ಮುಖ್ಯವಾಗಿ ಗದಗ ಜಿಲ್ಲೆಯ ಕುರುಗೋವಿನಕೊಪ್ಪ ಎಂಬ ಹಳ್ಳಿಯ ಪ್ರತಿಭೆ ಶೆಟ್ಟಪ್ಪ ಮಾದರ(38) ಅವರ ಹಾಡು ಕೇಳಿ ರಘು ದೀಕ್ಷಿತ್​ ಕಣ್ಣೀರು ಹಾಕಿದ್ರು. ಶೆಟ್ಟಪ್ಪ ಅವರು ಒಬ್ಬ ಭಜನಾ ಕಲಾವಿದ. ಊರಿನಲ್ಲಿ ಯಾರ ಮನೆಯಲ್ಲಿ ಸಾವಾದ್ರು ಶಟ್ಟೆಪ್ಪ ಅವರ ಭಜನೆ ಮೋಳಗಲೇಬೇಕು. ಹಳ್ಳಿ ಸೋಗಡಿನ ಹಾಡಿಗೆ ಸೈ ಎನಿಸಿಕೊಂಡರು ಶೆಟ್ಟಪ್ಪ.

ಮೊದಲಿಗೆ ರಾಮಾಚಾರಿ ಸಿನಮಾ ಹಾಡು ರಾಮಾಚಾರಿ ಹಾಡುವ ಲಾಲಿ ಹಾಡು ಕೇಳುವ ಗೀತೆಯನ್ನು ಹಾಡಿದ ಶೆಟ್ಟಪ್ಪ.. ಅಷ್ಟಾಗಿ ಜಡ್ಜ​ಸ್​​ ಇಂಪ್ರೆಸ್​ ಆಗ್ಲಿಲ್ಲ. ನಂತರ ನಿಮಗೆ ಇಷ್ಟವಿರುವ ಯಾವುದಾದರೂ ಒಂದು ಹಾಡು ಹೇಳಿ ಎಂದು ರಾಜೇಶ್​ ಕೃಷ್ಣನ್​ ಅವರು ಕೇಳಿದ್ರು. ಆಗ ಭಕ್ತಿಯಿಂದ ಹರಿ ನಾಮ ಸ್ಮರಣೆ ಮಾಡಿದ್ದೇ ತಡ ಆಲಾಪ ಶುರುವಾದ ತಕ್ಷಣ ಜಡ್ಜಸ್​ ಸೆಲೆಕ್ಟ್​ ಮಾಡಿದ್ರು.

ಇದನ್ನೂ ಓದಿ:ಟಿಎನ್​ಎಸ್​ ಕಾಂಬಿನೇಶನ್​ನಲ್ಲಿ​ ‘ಮತ್ತೆ ಮನ್ವಂತರ’ಕ್ಕೆ ಬಣ್ಣ ಹಚ್ಚಿದ್ದಾರೆ ಮಾಳವಿಕಾ ಅವಿನಾಶ್

blank

ಹಾಡಿನಲ್ಲಿದ್ದ ಅವರ ಭಾವಕ್ಕೆ ರಘು ದೀಕ್ಷಿತ್​ ಕಣ್ಣಲ್ಲಿ ನೀರು ಬಂತು. ಅಷ್ಟೇಯಲ್ಲ ಶೆಟ್ಟಪ್ಪ ಅವರ ಭಜನಾ ಮಂಡಳಿಯನ್ನು ಸ್ಟೆಜ್​​ ಮೇಲೆ ಕರೆಯಿಸಿ ಭಜನೆ ಮಾಡಿಸಲಾಯಿತು. ಅವರ ಭಜನೆಗೆ ಇಡಿ ವೇದಿಕೆ ಕೆಲ ಹೊತ್ತು ಮೌನಕ್ಕೆ ಶರಣಾಗಿತ್ತು. ಅಷ್ಟು ಅದ್ಭುತವಾಗಿ ಪರ್​ರ್ಫಾಮ್​ ಮಾಡಿದ್ರು ಶೆಟ್ಟಪ್ಪಾ ಆ್ಯಂಡ್​ ಟೀಮ್​.

ಇದನ್ನೂ ಓದಿ: ​ಪ್ರೀತಿಯಲ್ಲಿ ಬಿದ್ರು ಅಪರ್ಣ-ವಸಂತ! ‘ಸರಸು’ ಸಂಭ್ರಮಕ್ಕೆ ಮತ್ತೊಂದು ದಾಖಲೆ

Source: newsfirstlive.com Source link