ತಾಲಿಬಾನ್‌ ವಿಚಾರದಲ್ಲಿ ಪಾಕ್ ಯೂಟರ್ನ್‌.. ಇದರ ಹಿಂದಿದೆ ಡಬಲ್ ಗೇಮ್..!

ತಾಲಿಬಾನ್‌ ವಿಚಾರದಲ್ಲಿ ಪಾಕ್ ಯೂಟರ್ನ್‌.. ಇದರ ಹಿಂದಿದೆ ಡಬಲ್ ಗೇಮ್..!

ತಾಲಿಬಾನ್‌ ಉಗ್ರರಿಗೆ ಪಾಕಿಸ್ತಾನ ಬೆಂಬಲಿಸಿ ಕುತಂತ್ರ ಬುದ್ಧಿ ಮಾಡಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ ಪಾಕಿಸ್ತಾನ ಈಗ ತಾಲಿಬಾನಿ ವಿಚಾರದಲ್ಲಿ ಡಬಲ್‌ ಗೇಮ್‌ ಆಡುತ್ತಿದೆ.

2001ರಲ್ಲಿ ಅಮೆರಿಕ ಸೇನೆ ಒಸಾಮ್​ ಬಿನ್‌ ಲಾಡೆನ್‌ ಬೇಟೆಗಾಗಿ ಅಫ್ಘಾನ್‌ಗೆ ನುಗ್ಗುತ್ತದೆ. ಅಂದಿನಿಂದ ಸತತ 20 ವರ್ಷಗಳ ಕಾಲ ತಾಲಿಬಾನಿ ಉಗ್ರರ ವಿರುದ್ಧ ಹೋರಾಟ ನಡೆಸುತ್ತದೆ. ಶಂಕೆ ಇರುವ ಸ್ಥಳಗಳಲ್ಲಿ ಬಾಂಬ್‌ ದಾಳಿ ನಡೆಸುತ್ತದೆ. ಉಗ್ರರ ಶಿಬಿರಗಳನ್ನು ಸರ್ವನಾಶ ಮಾಡುತ್ತದೆ. ಆದ್ರೆ, ಅಮೆರಿಕ, ಅಫ್ಘಾನ್‌ ಸೇನೆಯ ವಿರುದ್ಧ ತಾಲಿಬಾನಿ ಉಗ್ರರು 20 ವರ್ಷಗಳ ಕಾಲ ಹೋರಾಟ ಮಾಡುತ್ತದೆ.

blank

ಹಾಗಾದ್ರೆ ತಾಲಿಬಾನಿಗಳಿಗೆ ದೀರ್ಘಾವಧಿ ಹೋರಾಟ ಮಾಡಲು ಅಷ್ಟೊಂದು ಶಸ್ತ್ರಾಸ್ತ್ರ ಪೂರೈಸಿದವರು ಯಾರು? ಸ್ವತಃ ತಾಲಿಬಾನಿಗಳೇ ಅಷ್ಟೊಂದು ಶಸ್ತ್ರಾಸ್ತ್ರ ತಯಾರಿಸಿಕೊಂಡು ಹೋರಾಟ ಮಾಡಲು ಸಾಧ್ಯವೆ? ಇಂತಹ ಅನುಮಾನಗಳು ಹುಟ್ಟಿಕೊಂಡಾಗ ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರೇ ಪಾಕಿಸ್ತಾನ. ಆದ್ರೆ, ಇದೇ ಪಾಕಿಸ್ತಾನ ಈಗ ತಾಲಿಬಾನ್‌ ವಿಚಾರದಲ್ಲಿ ಡಬಲ್‌ ಗೇಮ್‌ ಆಡುತ್ತಿರುವುದು ಯಾಕೆ? ಅದರ ಹಿಂದೆ ಏನು ಅಡಗಿದೆ ಗೊತ್ತಾ?

ಪಾಕಿಸ್ತಾನ ಆಡುತ್ತಿರೋ ಡಬಲ್‌ ಗೇಮ್‌ ಏನು?
ಈ ಹಿಂದೆ ಪಾಕಿಸ್ತಾನ ಏನು ಹೇಳಿತ್ತು ಗೊತ್ತಾ?

ಅಮೆರಿಕ ಸೇನೆ ಅಫ್ಘಾನ್‌ನಿಂದ ಹಿಂದೆ ಸರಿಯುತ್ತಿದ್ದಂತೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಒಂದು ಮಾತು ಹೇಳಿದ್ರು. ಅದೇನಂದ್ರೆ ತಾಲಿಬಾನಿಗಳು ಉಗ್ರಗಾಮಿಗಳು ಅಲ್ಲ, ಅವರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ ಅಂತ. ಆದಾಗಲೇ ಅರ್ಥವಾಗಿತ್ತು. ಪಾಕಿಸ್ತಾನ ಹಿಂಬದಿಯಿಂದ ತಾಲಿಬಾನಿಗಳಿಗೆ ಬೆಂಬಲ ನೀಡುತ್ತಿದೆ ಅಂತ. ಹಾಗೇ ತಾಲಿಬಾನಿಗಳು ಅಫ್ಘಾನ್‌ ವಶಪಡಿಸಿಕೊಳ್ಳುತ್ತಲೇ ತಾಲಿಬಾನಿಗಳ ಆಡಳಿತಕ್ಕೆ ಒಪ್ಪಿಗೆ ನೀಡಿತು. ತಾವು ಮಾನ್ಯತೆ ನೀಡುತ್ತೇವೆ ಅಂತ ಹೇಳಿತ್ತು. ತಾಲಿಬಾನಿಗಳ ಜೊತೆ ರಾಜತಾಂತ್ರಿಕ ಮಾತುಕತೆಯನ್ನು ನಡೆಸಿತ್ತು. ಆದ್ರೆ, ಇದೀಗ ಪಾಕಿಸ್ತಾನ ಮತ್ತೆ ಯೂಟರ್ನ್‌ ಹೊಡೆದಿದೆ.

blank

ತಾಲಿಬಾನ್‌ ವಿಚಾರದಲ್ಲಿ ಯೂಟರ್ನ್‌ ಹೊಡೆದ ಪಾಕಿಸ್ತಾನ
ತಾಲಿಬಾನಿ ಸರ್ಕಾರಕ್ಕೆ ಮಾನ್ಯತೆ ಇಲ್ಲ ಅಂದಿದ್ದು ಏಕೆ?

ಅಫ್ಘಾನ್‌ನಲ್ಲಿ ತಾಲಿಬಾನಿಗಳು ಅಧಿಕಾರ ಪಡೆಯುವುದು ಪಕ್ಕಾ ಆಗುತ್ತಲೇ ಪಾಕಿಸ್ತಾನ ಬೆಂಬಲ ನೀಡುತ್ತಲೇ ಬಂದಿತ್ತು. ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ರು. ಅಂತಾರಾಷ್ಟ್ರೀಯ ಸಮುದಾಯ ತಾಲಿಬಾನಿ ಸರ್ಕಾರಕ್ಕೆ ಬೆಂಬಲ ನೀಡಬೇಕು ಅಂತ ಹೇಳಿದ್ರು. ಇದನ್ನೆಲ್ಲ ಕೇಳಿದಾಗ ತಾಲಿಬಾನಿಗಳಿಗೆ ಪಾಕಿಸ್ತಾನದ ನೇರ ಬೆಂಬಲ ಇದೆ ಅನ್ನೋದು ಅರ್ಥವಾಗಿತ್ತು. ಆದ್ರೆ, ಪಾಕಿಸ್ತಾನ ಇದೀಗ ಯೂಟರ್ನ್‌ ತೆಗೆದುಕೊಂಡಿದೆ. ಅದೇನು ಅಂದ್ರೆ, ತಾಲಿಬಾನಿಗಳ ಸರ್ಕಾರಕ್ಕೆ ತನ್ನ ಮಾನ್ಯತೆ ಇಲ್ಲ ಅಂತ ಹೇಳಿದೆ. ಈ ಮೂಲಕ ತಾಲಿಬಾನಿ ಸರ್ಕಾರಕ್ಕೆ ಬೆಂಬಲ ನೀಡಲು ಅನುಮಾನ ವ್ಯಕ್ತಪಡಿಸಿದೆ. ಖಂಡಿತ ಇದರ ಹಿಂದೆ ಏನೋ ಅಡಗಿದೆ.

ಇದನ್ನೂ ಓದಿ: ಸಂಸತ್​​ ಭವನದಿಂದ ಸಲ್ಮಾ ಅಣೆಕಟ್ಟುವರೆಗೆ; ಅಫ್ಘಾನಿಸ್ತಾನಕ್ಕೆ ಭಾರತ ನೀಡಿದ ಕೊಡುಗೆ!

ಪಾಕಿಸ್ತಾನ ತಿರುವು ತೆಗೆದುಕೊಂಡಿದ್ದು ಯಾಕೆ?
ಇದರ ಹಿಂದೆ ಇದ್ಯಾ ಭಾರೀ ಡಿಮ್ಯಾಂಡ್‌?

ಪಾಕಿಸ್ತಾನ ಸರ್ಕಾರ ತಾಲಿಬಾನಿ ಸರ್ಕಾರಕ್ಕೆ ಮಾನ್ಯತೆ ನೀಡಲು ಅನುಮಾನ ವ್ಯಕ್ತಪಡಿಸಿರೋ ಮಾತಿನ ಹಿಂದೆ ಏನೋ ಅಡಗಿದೆ. ಯಾಕಂದ್ರೆ, ಇಲ್ಲಿಯವರೆಗೆ ತೆರೆಮರೆಯಲ್ಲಿ ತಾಲಿಬಾನಿಗಳಿಗೆ ಭಾರೀ ಪ್ರಮಾಣದ ಬೆಂಬಲ ಪಾಕ್‌ ನೀಡಿದೆ. ಕೆಲವು ಮೂಲಗಳ ಪ್ರಕಾರ ಚೀನಾ ಮತ್ತು ಪಾಕಿಸ್ತಾನದಿಂದಲೇ ತಾಲಿಬಾನಿಗಳಿಗೆ ಶಸ್ತ್ತಾಸ್ತ್ರಗಳು ಸರಬರಾಜು ಆಗಿವೆ ಎನ್ನಲಾಗುತ್ತಿದೆ. ಆದ್ರೆ, ಆ ಬಗ್ಗೆ ಖಚಿತ ಪಡಿಸುವಂತಹ ಯಾವುದೇ ದಾಖಲೆಗಳು ಇಲ್ಲ. ಆದ್ರೆ, ಪಾಕಿಸ್ತಾನ ಏಕಾಏಕಿ ತನ್ನ ನಿಲುವಿನಿಂದ ಹಿಂದೆ ಸರಿದಿರುವುದು ಮಾತ್ರ ಭಾರೀ ಅಚ್ಚರಿಗೆ ಕಾರಣವಾಗುತ್ತಿದೆ. ಇದರ ಹಿಂದೆ ಭಾರೀ ಡಿಮ್ಯಾಂಡ್‌ ಇದೆ ಅನ್ನುವಂತಹ ಮಾತುಗಳು ಕೇಳಿಬರುತ್ತಿವೆ.

ಪಾಕಿಸ್ತಾನದ ಡಿಮ್ಯಾಂಡ್‌ ಏನಿರಬಹುದು?
ತನ್ನ ಬೆಂಬಲಿಗ ಸಂಘಟನೆಗೆ ಸ್ಥಾನಮಾನ ಕೇಳಿದೆಯಾ?

ತಾಲಿಬಾನ್‌ ಅನ್ನೋದು ಹಲವು ಉಗ್ರಗಾಮಿ ಸಂಘಟನೆಗಳ ಸಮೂಹವಾಗಿದೆ. ಈ ಸಂಘಟನೆಗಳಲ್ಲಿ ಪಾಕ್‌ ಬೆಂಬಲಿತ ಸಂಘಟನೆಗಳು ಇವೆ. ಆ ಸಂಘಟನೆಗಳ ಮುಖಂಡರಿಗೆ ತಾಲಿಬಾನಿ ಸರ್ಕಾರದಲ್ಲಿ ಹೆಚ್ಚಿನ ಸ್ಥಾನ ಮಾನ ದೊರಕಿಸುವ ಉದ್ದೇಶದಿಂದ ಪಾಕ್‌ ಡಬಲ್‌ ಗೇಮ್‌ ಆಡುತ್ತಿದ್ಯಾ? ಹೌದು, ಇಂತಹವೊಂದು ಅನುಮಾನ ಕೇಳಿಬರುತ್ತಿದೆ. ಇಲ್ಲಿಯವರೆಗೂ ತಾಲಿಬಾನಿ ಪರ ಮಾತಾಡುತ್ತಿದ್ದ ಪಾಕ್ ಏಕಾಏಕಿ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದು ಇದೇ ಉದ್ದೇಶಕ್ಕೆ ಎನ್ನಲಾಗುತ್ತಿದೆ.

blank

ತಾಲಿಬಾನಿಗಳ ಮೇಲೆ ಒತ್ತಡ ಹಾಕುವ ತಂತ್ರ ಇದೆಯಾ?
ಪಾಕಿಸ್ತಾನದ ನಡೆ ಇದನ್ನೇ ಹೇಳುತ್ತಿದೆ. ಇಲ್ಲಿಯವರೆಗೂ ತೆರೆಮರೆಯಲ್ಲಿ ತಾಲಿಬಾನಿಗಳಿಗೆ ಮುಖ್ಯವಾಗಿ ನೆರವು ನೀಡಿದ್ದೇ ಪಾಕಿಸ್ತಾನ. ಇದರಲ್ಲಿ ಯಾವುದೇ ಸಂದೇಹ ಬೇಡ. ಆದ್ರೆ, ಈಗ ತಾಲಿಬಾನಿಗಳು ರಚಿಸುತ್ತಿರುವ ಸರ್ಕಾರದಲ್ಲಿ ಪಾಕ್‌ ಬೆಂಬಲಿತ ಸಂಘಟನೆಗಳಿಗೆ ಹೆಚ್ಚಿನ ಸ್ಥಾನ ಮಾನ ದೊರಕಿಸಬೇಕು. ಆ ಮೂಲಕ ತನ್ನ ಬೆೆಳೆಯನ್ನು ಬೆಯಿಸಿಕೊಳ್ಳಬೇಕು ಅನ್ನೋದು ಪಾಕ್‌ನ ಉದ್ದೇಶ. ಒಮ್ಮೆ ತಾನು ಕೇವಲ ಬೆಂಬಲ ಕೋಡ್ತೀನಿ ಅಂತ ಸುಮ್ಮನಿದ್ದು ಬಿಟ್ರೆ, ಪಾಕ್‌ ಬೆಂಬಲಿತ ಸಂಘಟನೆಗಳ ಮುಖಂಡರಿಗೆ ಹೆಚ್ಚಿನ ಸ್ಥಾನ ಮಾನ ಸಿಗುವುದಿಲ್ಲ. ಒಮ್ಮೆ ಒತ್ತಡ ತಂತ್ರ ಅನುಸರಿಸಿದ್ರೆ ಅವರಿಗೆ ಹೆಚ್ಚಿನ ಸ್ಥಾನ ಮಾನ ಸಿಗುತ್ತದೆ ಅನ್ನೋದು ಪಾಕ್‌ಗೆ ಅರಿವಾಗಿ ಬಿಟ್ಟಿದೆ. ಇದೇ ಕಾರಣಕ್ಕೆ ಪಾಕಿಸ್ತಾನ ಡಬಲ್‌ ಗೇಮ್‌ ಆಡುತ್ತಿದೆ ಎನ್ನಲಾಗುತ್ತಿದೆ.

ತಾಲಿಬಾನಿಗಳಿಂದ ಪಾಕಿಸ್ತಾನಕ್ಕೆ ಏನು ಲಾಭ?
ಪಾಕಿಸ್ತಾನಕ್ಕೆ ಹೊಸ ಗೆಳೆಯ ಸಿಕ್ಕಂತೆ ಆಗುತ್ತಾ?

ತಾಲಿಬಾನ್‌ ಮತ್ತು ಪಾಕಿಸ್ತಾನ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ತಾಲಿಬಾನಿಗಳು ಅಧಿಕಾರಕ್ಕೆ ಏರುವುದರಿಂದ ಪಾಕಿಸ್ತಾನಕ್ಕೆ ದೊಡ್ಡ ಪ್ರಮಾಣದ ಲಾಭವಿದೆ. ಇದೇ ಉದ್ದೇಶಕ್ಕೆ ಪಾಕಿಸ್ತಾನ ಇಷ್ಟು ವರ್ಷಗಳ ಕಾಲ ತೆರೆಮರೆಯಲ್ಲಿಯೇ ಬೆಂಬಲ ನೀಡುತ್ತಾ ಬರುತ್ತಿತ್ತು. ಇದೀಗ ಅಫ್ಘಾನ್‌ನಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಏರಿದ್ರೆ ಪಾಕಿಸ್ತಾನ ಮಾಡುವ ಕೆಲಸ ಏನು ಗೊತ್ತಾ? ಅಲ್ಲಿಯ ಉಗ್ರಗಾಮಿಗಳನ್ನು ಬೆಳೆಸಿಕೊಂಡು ಭಾರತದ ವಿರುದ್ಧ ಕತ್ತಿ ಮಸೆಯಲು ಪ್ರಯತ್ನಿಸುತ್ತೆ.

blank

ಹಾಗೇ ಪಾಕ್‌ ಬೆಂಬಲಿತ ಉಗ್ರಗಾಮಿ ಚಟುವಟಿಕೆಗಳಿಗೆ ಹಣದ ನೆರವು ಅಪಾರ ಪ್ರಮಾಣದಲ್ಲಿ ಹರಿದು ಬರುತ್ತೆ. ಅಷ್ಟೇ ಅಲ್ಲ, ಈಗಾಗಲೇ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಉಗ್ರಗಾಮಿಗಳ ಸ್ವರ್ಗ ಅಂತ ಕರೆಯಿಸಿಕೊಂಡಿದೆ. ಇನ್ಮೇಲೆ ಆ ಕಳಂಕವನ್ನು ಅಫ್ಘಾನಿಸ್ತಾನಕ್ಕೆ ಸ್ಥಳಾಂತರಿಸುವ ಪ್ಲಾನ್‌ ಕೂಡ ಪಾಕಿಸ್ತಾನ ಹಾಕಿಕೊಂಡಂತೆ ಇದೆ. ಪಾಕ್‌ನ ಎಲ್ಲಾ ಪ್ಲಾನ್‌ ಸಕ್ಸಸ್‌ ಆಗಬೇಕು ಅಂದ್ರೆ ತನ್ನ ಬೆಂಬಲಿತ ತಾಲಿಬಾನಿ ಮುಖಂಡರಿಗೆ ಹೆಚ್ಚಿನ ಸ್ಥಾನ ಮಾನ ಸಿಗುವಂತೆ ನೋಡಿಕೊಳ್ಳುವುದು.

ಇದನ್ನೂ ಓದಿ: ಆಫ್ಘಾನ್​​ನಿಂದ ತಾಯ್ನಾಡಿಗೆ 120 ಮಂದಿ ಭಾರತೀಯರು- ರಣಾಂಗಣದಂತಾದ ಅಫ್ಘಾನಿಸ್ತಾನದಿಂದ ರಕ್ಷಣೆಯೇ ರೋಚಕ

ಚೀನಾ, ಪಾಕ್‌ ಒಂದೇ ನಾಣ್ಯದ ಎರಡು ಮುಖಗಳು
ಅಫ್ಘಾನ್‌ ಖನಿಜ ಸಂಪತ್ತಿನ ಮೇಲೆ ಚೀನಾ ಕಣ್ಣು

ಇಲ್ಲಿಯವರೆಗೆ ತಾಲಿಬಾನಿಗಳ ಬಗ್ಗೆ ಗಪ್‌ಚೂಪ್‌ ಇದ್ದ ಚೀನಾ ಕೂಡ ಈಗ ದಿನಕ್ಕೊಂದು ಹೇಳಿಕೆ ನೀಡುತ್ತಿದೆ. ತಾಲಿಬಾನಿಗಳ ಸರ್ಕಾರಕ್ಕೆ ಬೆಂಬಲ ನೀಡುವ ಮಾತನ್ನು ಆಡುತ್ತಿದೆ. ಯಾಕಂದ್ರೆ ಚೀನಾ ಕೂಡ ಅಫ್ಘಾನ್‌ ಜೊತೆ 76 ಕಿಲೋ ಮೀಟರ್‌ ಅಷ್ಟು ಭೂಗಡಿಯನ್ನು ಹೊಂದಿದೆ. ಒಮ್ಮೆ ವಿರೋಧ ಕಟ್ಟಿಕೊಂಡರೆ ಗಡಿಯಲ್ಲಿ ಉಗ್ರಗಾಮಿಗಳಿಂದ ಸಮಸ್ಯೆ ಆಗಬಹುದು ಅನ್ನೋದು ಅದರ ಉದ್ದೇಶವಾಗಿದೆ.

ಇದಿಷ್ಟೇ ಅಲ್ಲ, ತಾಲಿಬಾನಿಗಳ ಜೊತೆ ಉತ್ತಮ ಸಂಬಂಧ ದೊಂದಿದ್ರೆ ಅಫ್ಘಾನ್‌ನಲ್ಲಿರೋ ಖನಿಜ ಸಂಪತ್ತನ್ನು ಬಳಸಿಕೊಳ್ಳಬಹುದು ಅನ್ನೋದು. ಹೌದು, ಅಫ್ಘಾನ್‌ನಲ್ಲಿ ಅಪಾರ ಪ್ರಮಾಣದ ಖನಿಜ ಸಂಪತ್ತು ಇದೆ. ಅದನ್ನು ತಾನು ಬಳಿಸಿಕೊಳ್ಳಲು ಚೀನಾ ಪ್ಲಾನ್‌ ಮಾಡಿಕೊಂಡಂತೆ ಇದೆ. ಇದೇ ಉದ್ದೇಶಕ್ಕೆ ಅಲ್ಲಿಯ ಸರ್ಕಾರಕ್ಕೆ ಚೀನಾ ಒಪ್ಪಿಗೆ ನೀಡಿದೆ, ರಾಜತಾಂತ್ರಿಕ ಅಧಿಕಾರಿಗಳು ಮಾತುಕತೆಯನ್ನು ಆರಂಭಿಸಿದ್ದಾರೆ. ಇಷ್ಟು ದಿನ ತಾಲಿಬಾನಿಗಳಿಗೆ ಬೆಂಬಲ ನೀಡುವ ಮಾತನಾಡುತ್ತಿದ್ದ ಪಾಕಿಸ್ತಾನ ಯುಟರ್ನ್‌ ಹೊಡಿದೆ. ಖಂಡಿತ ಇದರ ಹಿಂದೆ ಪಾಕಿಸ್ತಾನದ ಹಿತಾಸಕ್ತಿ ಅಡಗಿದೆ. ಅದೇನು ಅಂತ ಬಹಿರಂಗವಾಗುವ ಕಾಲ ದೂರವಿಲ್ಲ.

Source: newsfirstlive.com Source link