ತಾಲಿಬಾನ್​​ ವಿರುದ್ಧ ಹೋರಾಟಕ್ಕೆ ಶಸ್ತ್ರಾಸ್ತ್ರ ಒದಗಿಸಿ; ಪಂಜ್​ಶೀರ್ ಹೋರಾಟಗಾರನ ಪುತ್ರ ಮನವಿ

ತಾಲಿಬಾನ್​​ ವಿರುದ್ಧ ಹೋರಾಟಕ್ಕೆ ಶಸ್ತ್ರಾಸ್ತ್ರ ಒದಗಿಸಿ; ಪಂಜ್​ಶೀರ್ ಹೋರಾಟಗಾರನ ಪುತ್ರ ಮನವಿ

ತಾಲಿಬಾನ್​​ ವಿರುದ್ಧ ಹೋರಾಟಕ್ಕಾಗಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರದ ಒಸಗಿಸುವಂತೆ ಅಫ್ಘಾನಿಸ್ತಾನದ ಹುತಾತ್ಮ ಹೋರಾಟಗಾರ ಶಾ ಮಸೂದ್ ಮಗ ಅಹ್ಮದ್ ಮಸೂದ್ ಅಮೆರಿಕಾಗೆ ಕೇಳಿಕೊಂಡಿದ್ದಾರೆ. ಈ ಕುರಿತು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರಕ್ಕೆ ಪತ್ರ ಬರೆದಿರುವ ಅಹ್ಮದ್ ಮಸೂದ್, ನನ್ನ ದೇಶದ ಜನರಿಗಾಗಿ ತಾಲಿಬಾನ್​​ ವಿರುದ್ಧ ಹೋರಾಟ ಅನಿವಾರ್ಯ. ಪ್ರಜಾತಂತ್ರದ ಉಳಿವಿನ ಸಂಘರ್ಷಕ್ಕೆ ಬೆನ್ನುಲುಬಾಗಿ ಅಮೆರಿಕ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.

ನಾನು ಪಂಜಶೀರ್​​​ ಕಣಿವೆಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ನನ್ನ ತಂದೆ ಹೋರಾಟದಲ್ಲಿ ನಾನು ನಡೆಯುತ್ತಿದ್ದೇನೆ. ನಾವು ತಾಲಿಬಾನ್​​ ಉಗ್ರರನ್ನು ಎದುರಿಸಲು ಸಿದ್ಧವಾಗಿದ್ದೇವೆ. ಅಫ್ಗಾನಿಸ್ತಾನದ ಸರ್ಕಾರ ಮತ್ತು ಸೈನಿಕರು ತಾಲಿಬಾನಿಗಳಿಗೆ ಶರಣಾಗಿರುವುದು ನಾಚಿಕೆಗೇಡಿನ ಸಂಗತಿ. ತಾಲಿಬಾನಿಗಳ ವಿರುದ್ಧ ಹೋರಾಟಕ್ಕೆ ನಮಗೆ ಹೆಚ್ಚಿನ ಶಸ್ತ್ರಾಸ್ತ್ರಗಳು ಮತ್ತು ಗುಂಡುಗಳ ಅವಶ್ಯಕತೆ ಇದೆ. ನೀವು ಅವುಗಳನ್ನು ಪೂರೈಸಿ ಎಂದು ಅಹ್ಮದ್ ಮಸೂದ್ ಯುಎಸ್​ ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ತಾಲಿಬಾನ್ ವಿರೋಧಿ ಹೋರಾಟಗಾರ ಶಾ ಮಸೂದ್ ಮಗ ಅಹ್ಮದ್ ಮಸೂದ್. ಪಂಜಶೀರ್​​​ ಸಿಂಹ ಎಂದೇ ಖ್ಯಾತರಾಗಿದ್ದ ಈತನ ತಂದೆ ಶಾ ಮಸೂದ್​​ರನ್ನು 2001ರಲ್ಲಿ ಹತ್ಯೆ ಮಾಡಲಾಗಿತ್ತು. ಕಾಬೂಲ್‌ನಲ್ಲಿ ತಾಲಿಬಾನ್ ವಿರುದ್ಧ ಪ್ರಬಲ ಪ್ರತಿರೋಧವನ್ನು ಶಾ ಮಸೂದ್‌ ಒಡ್ಡಿದ್ದರು.

ಇದನ್ನೂ ಓದಿ: ಹಾಡಹಗಲೇ ಅಫ್ಘಾನ್​​​​ ಸೇನೆಯ ನಾಲ್ವರು ಕಮಾಂಡರ್​​ಗಳನ್ನು ನೇಣಿಗೇರಿಸಿದ ತಾಲಿಬಾನ್

Source: newsfirstlive.com Source link