ಶಿವಣ್ಣನ 126ನೇ ಚಿತ್ರಕ್ಕೆ ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್​​; ಸಿನಿಮಾ ಸೆಟ್ಟೇರುವುದು ಯಾವಾಗ?

ಶಿವಣ್ಣನ 126ನೇ ಚಿತ್ರಕ್ಕೆ ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್​​; ಸಿನಿಮಾ ಸೆಟ್ಟೇರುವುದು ಯಾವಾಗ?

ಕನ್ನಡದ ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ. ಸ್ಯಾಂಡಲ್​​ವುಡ್​​ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್. ಇಬ್ಬರು ಮುಂದೆ ಒಂದೇ ಸಿನಿಮಾದಲ್ಲಿ ಕೆಲಸ ಮಾಡೋದು ಪಕ್ಕಾ ಆಗಿದೆ. ಶಿವಣ್ಣನ 126ನೇ ಚಿತ್ರಕ್ಕೆ ರಿಷಬ್​​​ ಆಕ್ಷನ್ ಕಟ್ ಹೇಳುವುದು ಖಚಿತವಾಗಿದೆ. ಈ ಕುರಿತು ನಿರ್ದೇಶಕ ರಿಷಬ್ ಟ್ವೀಟ್ ಮಾಡಿದ್ದು, ಶಿವರಾಜ್​​​ ಕುಮಾರ್​​ ಜತೆ ಮಾತುಕತೆ ನಡೆಸಿದ ಫೋಟೋ ಹಂಚಿಕೊಂಡಿದ್ದಾರೆ. ಈ ವೇಳೆ ಫೋಟೋಗೆ ನಿರ್ಮಾಪಕ ಜಯಣ್ಣ ಕೂಡಾ ಪೋಸ್​ ನೀಡಿದ್ದಾರೆ.

‘ಶಿವಣ್ಣ ಅವರನ್ನು ಇಂದು ಬೆಳಗ್ಗೆ ಭೇಟಿಯಾಗುವ ಭಾಗ್ಯ ನನ್ನದಾಯ್ತು. ಹೊಸ ಹೆಜ್ಜೆಯೊಂದು ಇಡುವ ಬಗ್ಗೆ ಉತ್ಸುಕನಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ ರಿಷಬ್​​. ಈ ಮೂಲಕ ಶಿವಣ್ಣನ 126ನೇ ಚಿತ್ರಕ್ಕೆ ರಿಷಬ್​​ ಆ್ಯಕ್ಷನ್​​ ಕಟ್​​ ಹೇಳುವುದು, ನಿರ್ಮಾಪಕ ಜಯಣ್ಣ ಹಣ ಹೂಡುವುದು ಪಕ್ಕಾ ಆದಂತಾಗಿದೆ.

ಸದ್ಯ ಶಿವಣ್ಣ ‘ಬೈರಾಗಿ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ‘ನೀ ಸಿಗೋವರೆಗೂ’ ಎಂಬ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಇದಾದ ಬಳಿಕ ‘ವೇದ’ ಸಿನಿಮಾ ಸೆಟ್ಟೇರಲಿದ್ದು, ನಿರ್ದೇಶಕ ಹರ್ಷ ಡೈರೆಕ್ಟ್​ ಮಾಡಲಿದ್ದಾರೆ.

ಇದನ್ನೂ ಓದಿ: ‘ದ್ವಿತ್ವ’ ಚಿತ್ರದ ಪ್ಲಾನ್ ಉಲ್ಟಾ-ಪಲ್ಟಾ ಮಾಡಿದ ಪಾಪಿ ಕೊರೊನಾ..!

Source: newsfirstlive.com Source link